ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೬೪
ನನ್ನ ನಲ್ಲ
ಹಾಯದು ಮುಚ್ಚಿದ ತುಟಿದೆರೆದು !
ಲೇಖನಿಯಲಿ ಹರಿದಾಡುವದು
ಸೋಂಕಲೆ ಒಲ್ಲದು ಪಟವನಿದು ! !
- * * *
ಚೆಲುವಿಗೆ ಚೆಲುವಿಕೆ ಕೊಟ್ಟವಳು
ಚೆಲುವಿನ ಬಲವನು ಹೆತ್ತವಳು !
ಸವಿಗೂ ಸವಿಯನು ಸುರಿದವಳು !
ಕವಿಗೂ-ತಾ ಕವಿಯಾಗಿಹಳು ! ! !
ಅಕ್ಷಿಯ ಮಿಟುಕಿಸಿ ವಿಶ್ವದೊಳು
ಅಕ್ಷರಕುಲವನು ಹಡೆದವಳು !
ಅಕ್ಷರವಿಲ್ಲದ ಭಾಷೆಯೊಳು
ಸಚ್ಚಳ ಕವಿತೆಯ ಹಾಡುವಳು ! ! !
`ಆ' ಹಾಡಿನ ಸವಿಸುಳಿಗಳನು
`ಈ' ಹಾಡಿನೊಳೆಂತಿಳಿಸುವೆನು ?
ತುದಿಮೊದಲಿಲ್ಲದ ಗೀತವದು
ಹುದುಗಿಸ ಹೋಗಲು ಹಿರಿದಹುದು !
________