ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೬೯
ನನ್ನ ನಲ್ಲ
ಎಂದೀಗೊಮ್ಮೆ
ಹಾಕುತ ಹಣಕಿ
ಮಾರೀ ತೋರಿ
ತುಸುತುಸು ಇಣಕಿ
ಮಾಟಾ ಮೋಡಿ ಮಾಡಿಕೋತ
ಕಳ್ಳಿ ಆಟಾ ಆಡಿಕೋತ
ಅಲ್ಲೇ ಕುಳಿತಿ
ಬಾರೇ ಗೆಳತಿ 4
ನೀ ಕೂತಲ್ಲಿ
ಜ್ಯೋತಿಯ ಢಾಳ
ನಾ ಕೂತಲ್ಲಿ
ಕತ್ತಲೆ ಕಾಳ
ಕಂಡೂ ಕಂಡೂ ಕೂತೇ ಕೂತಿ
ತಿಳಿದೂ ತಿಳಿದೂ ಹಾಗೇ ಇರತಿ
ಅಲ್ಲೇ ಕುಳಿತಿ
ಬಾರೇ ಗೆಳತಿ 5
ಏಸೋ ಕಾಲಕೆ
ಅಟ್ಟಕೆ ಬಂದೀ
ಅಲ್ಲೀದಿಲ್ಲೀ-
ಗೆಂದರೆ ಬಂದೀ
ಬರತೀ ಬರತೀ ಬಂದೇ ಬರತೀ
ಎಷ್ಟೋತ್ತಾರೆ ಅಲ್ಲೇ ಇರತಿ
ಅಲ್ಲೇ ಕುಳಿತಿ
ಬಾರೇ ಗೆಳತಿ 6
_____