ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೭೩
ನನ್ನ ನಲ್ಲ
21. ಮಂಗಲಸಪ್ತಕಂ
ಕಣ್ಣಲ್ಲಿ ಕಿಸುಗಿಚ್ಚು ಕಟ್ಟಿಹಾಕಿದ ನಮ್ಮ
ಕಾಲರುದ್ರನೆ ಇತ್ತ ಕಣ್ಣನಿಟ್ಟು
ಅಣ್ಣದತ್ತನ ಬಗೆಯ ಬೇಗೆಯನು ತಣಿಸೈ
ಬಾಲಭಕ್ತನ ಮೊರೆಗೆ ಕಿವಿಯಕೊಟ್ಟು 1
ನಿತ್ಯನಿರ್ಮಲರೂಪ ! ಭಕ್ತ ಭಾಮಿನಿಯೋಪ !
ಮಾರಹರ ನೀನಿತ್ತ ದೃಷ್ಟಿಯಿಟ್ಟು
ಮಿತ್ರದತ್ತನ ಮನದ ಮೈಲಿಗೆಯ ಮಾಣಿಸೈ
ನಿನ್ನ ನಲ್ಲೆಯ ನುಡಿಗೆ ಚಿತ್ತಗೊಟ್ಟು 2
ಶುದ್ಧಿಯನು ವರ್ಧಿಸಿದ ವರ್ಧಮಾನ ಪ್ರಭುವೆ
ಓ ! ಮಹಾವೀರ ಕೊಲ್ಬಿಲ್ಲದೊಟ್ಟು
ಮುದ್ದು ದತ್ತನ ಬಗೆಯ ಬನದಲ್ಲಿ ಬೇಟೆಯ-
ನ್ನಾಡಿಂದು ಹೊಚ್ಚಹೊಸ ಹುರುಪುದೊಟ್ಟು 3
ಹಾದಿಯಿಲ್ಲದೆ ಹರಿವ ಮರುಳ ಮನವನು ನಿನ್ನ
ಬುದ್ಧಿಬಲದಿಂದಲೇ ಬದ್ಧಗೊಳಿಸಿ
ಬೋಧಿವೃಕ್ಷದ ಬುಡಕೆ ಸಿದ್ಧಾರ್ಥನಾದ ಶ್ರೀ
ಬುದ್ಧದೇವನೆ ನಿನ್ನ ಪಾದ ಸ್ಮರಿಸಿ 4
ಭೂತನಾಥನೆ ಓತು ಬೇಡಿಕೊಂಬೆನು ದೇವ
ಅಣ್ಣದತ್ತನ ಮನದ ಮುಸುಕು ಸರಿಸಿ
ಭೂತಳದೆ ಬೆಳಗಿಸೈ ಭೂತಭೂತಗಳಲ್ಲಿ
ನಿನ್ನ ಬುದ್ಧಿಯನದರ ಬಲಕೆ ಬೆರಿಸಿ 5
ನಿರ್ಜರ ತರಂಗಿಣಿಯೆ ದುರಿತಹಾರಿಣಿ ನಿನ್ನ
ಹರಿಚರಣ ತೀರ್ಥಜಲ ಧಾರೆಯೆರೆದು