ವಿಷಯಕ್ಕೆ ಹೋಗು

ಪುಟ:Nanna Nalla.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫

ನನ್ನ ನಲ್ಲ


22. ದೀನಬಂಧು ಸಿ.ಎಫ್. ಆಂಡ್ರೂಜ್

(ಸೀಸಪದ್ಯ)


ಸತ್ಯಶೋಧಕನಾಗಿ ನಿತ್ಯಬೋಧಕನಾಗಿ

ಭಾರತಾಂಬೆಯ ಭಕ್ತಶ್ರೇಷ್ಠನಾಗಿ

ದುಷ್ಟದೂಷಕನಾಗಿ ಶಿಷ್ಟತೋಷಕನಾಗಿ

ದೀನಸೇವಕ ದೀನಬಂಧುವಾಗಿ

ಅಸಹಕಾರದ ಪರಿಯ ವಿಷದಗೊಳಿಸುವನಾಗಿ

ಅಪರದೇಶದ ಅಸಹಯೋಗಿಯಾಗಿ

``ನೆರೆಯವರ ನಿನ್ನಂತೆ ಅರಿಯೆಂದು ತನ್ನವರಿ

ಗರಿಕೆಪಡಿಸುವ ಕ್ರಿಸ್ತದಾಸನಾಗಿ 1


``ಚೂರು ಬೆಲ್ಜಮನಾಡ ಸ್ವಾತಂತ್ರ್ಯ ಸ್ಥೈರ್ಯಕಾಗಿ

ಘೋರ ಯುದ್ಧಕೆ ನಿಂತೆವೆಂದೇಕ ಕಂಠವಾಗಿ

ಸಾರುತಿರುವವರೇಕೆ ಭಾರತಿಯ ಬಿಡಿಕೆಗಾಗಿ

ಹೋರಾಡಲಾರಿರೋ? ಎಂದು ಸುಸ್ಪಷ್ಟವಾಗಿ 2


ತಾನೆಲ್ಲ ಪಾಶ್ವಾತ್ಯ ಪೂಮುಖರ್ಕಳಂ ಕೇಳುವಂ

``ದಾನಬೇಕಿಲ್ಲೆಮಗೆ; ಸ್ವಾತಂತ್ರ್ಯ ಬೇಕೆನ್ನುವಂ

ಜ್ಞಾನವಿಧಿ-ಕವಿ-ರವಿಯ ನೆರಳಿನಂತಿರ್ದು ಮೆರೆವಂ

ಮಾನನಿಧಿಯಾಂಡ್ರುಜಂ ಮಾನವರೊಳೊಗೆದ ದೇವಂ 3


__________