ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೮
ನನ್ನ ನಲ್ಲ
ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು
ಬಯಕೆ ಬರುವದರ ಕಣ್ಸನ್ನೆ ಕಾಣೋ |
ಅರಿಯದಾ ಹವಣಿಕೆಯು ಜೀವಜೀವನ ಲೀಲೆ
ದೇವದೇವನ ಗೂಢ ವಿಧಿಯು ಕಾಣೋ || 20 ||
3ನೇ ಎಸಳು
ನಿಲ್ಲು ನಿಲ್ಲೆಲೆ ನವಿಲೆ ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ |
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ
ತಾಳಲಾರದು ಜೀವ ಹೇಳಬಾರೆ || 1 ||
ಪಿಳುಕಿಸದ ಸಿರಿಗಣ್ಣು ಸುತ್ತು ಚಿನ್ನದ ರೇಖೆ
ಬೆಳ್ಳಿಮಿರುಗಿನ ಮೈಯ ಕಾಂತಿ ನಿನಗೆ |
ತಿಳಿಗಂಗೆ ನಿಮ್ಮವ್ವ ಮೀನಮೂರುತಿ ತಿಳಿಸೊ
ನನ್ನೊಡೆಯನಡಗಿರುವನಾವಕಡೆಗೆ || 2 ||
ಆರದಾರತಿ ಹಿಡಿದು ಹಾರುತಿರುವವಳಾರೆ
ಹೊನ್ನಿ ಏ ಹೊನ್ನಿ ನೀನಾರೆ ಬಾರೆ |
ಯಾರಿಗಾರತಿ ಒಯ್ವಿ ಹೇಳೆ ನಾನೂ ಬರುವೆ
ನನ್ನರಸನಿದ್ದಾನು ಅಲ್ಲಿಯಾರೆ || 3 ||
ಸಣ್ಣ ದನಿಯವಳಾರೆ ನುಣ್ಣ ದನಿಯವಳಾರೆ
ಹೆಣ್ಣುದನಿಗೈವ ಕೋಗೆಲೆಯೆ ಬಾರೆ |
ಕಣ್ಣುತಪ್ಪಿಸಿದವನ ಕುರುಹು ಹೇಳೇ ತಾಯಿ
ಬನದಮ್ಮ ನೀನಾರೆ ಕರುಣತೋರೆ || 4 ||