ವಿಷಯಕ್ಕೆ ಹೋಗು

ಪುಟ:Nanna Nalla.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೯

ನನ್ನ ನಲ್ಲ


ಸಚ್ಚಿದಾನಂದ ವಿಜ್ಞಾನ ಮನಪ್ರಾಣ

ಅಚ್ಚ ಜಡವನು ಸಹಿತ ಅನುಗೊಳಿಸು ನೀನು

ದೇಹದಾ ಸುಸ್ಥಿತಿಗೆ ಅನ್ನ ಜಲ ನಿದ್ರೆ

ಮೋಹಗೊಳಿಸದ ಅರಿವೆ ದಯಮಾಡು ಭದ್ರೆ

ಪ್ರಾಣದಾ ಸುಸ್ಥಿತಿಗೆ ಉಚಿತವಹ ಕೆಲಸ

ಮೇಣದಕೆ ಮನಧನದ ನೆರವು ಶತವರುಷ

ಮನಬುದ್ಧಿಗಳ ಸ್ಥಿತಿಗೆ ಬಗೆಬಗೆಯ ತಿಳಿವು

ಅನವರತವಿರಲೆಮ್ಮ ಇದರಿಂದೆ ಇರವು

ಇವು ಎಲ್ಲಗಳ ಮೀರಿ ನಮ್ಮ ಸಾಮ್ರಾಜ್ಯ

ಭವದೊಳಗೆ ಅಧ್ಯಾತ್ಮ ಅದರಿಂದೆ ಸಹಜ

ಜಯಜಯವು ಜಯಜಯವು ಜಯಜಯವು ತಾಯೇ

ಜಯಜಯವು ಜಯಜಯವು ಜಯಜಯವು ಕಾಯೇ.


___________