ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೯೭
ನನ್ನ ನಲ್ಲ
33. ಜೀವನ
ಓಂ ಜಯ ತಾಯೇ ಓಂ ಜಯ ತಂದೇ
ಓಂ ಜಯ ಜಗತಃಪಿತರೌ ವಂದೇ
ಭ್ರಾತೃಗಳೀ ಲೋಕದ ಜನವೆಲ್ಲಾ
ಮಾತೃದೇವಿ ನಿನ್ನಯ ಸುತರೆಲ್ಲಾ
ಜಯ ಜಯ ಸಕಲಾ ! ಜಯ ಜಯ ನಿಖಿಲಾ !!
ಜಯ ಜಯ ಜನನೀ-ಜನಕರಲೀಲಾ
- * * *
ಏನೀ ಜಗದಲಿ ಇರುವುದರರ್ಥ ?
ಏನೀ ಜಗದಲಿ ಮಾಳ್ಪುದರರ್ಥ?
ಇರುವುದು ಜನನೀ-ಜನಕರ ಕೃಪೆಗೆ
ಇರುವುದು ಅವರಾ ಕೃಪೆಯ ನಲಿವಿಗೆ
ಇರುವುದು ಅವರಾ ಸೇವೆಯ ದೆಸೆಯಿಂ
ಇರುವುದು ನನ್ನಾ ಶುದ್ಧಿಯ ದೆಸೆಯಿಂ
- * * *
ಮಾಳ್ಪುದಕಿಲ್ಲಿ ಕಾರ್ಯಗಳೆನಿತೋ
ಮಾಳ್ಪುದು ಅವರಾ ಇಚ್ಛೆಯನರಿತೋ
ಮಾಳ್ಪುದು ನನ್ನಾ ಇಚ್ಛೆಗೆ ಅಲ್ಲ
ಮಾಳ್ಪುದು ನನ್ನಾ ಲಾಭಕೆ ಅಲ್ಲ
ಮಾಳ್ಪುದ ಬಿಟ್ಟು ನಡೆಯುವದಿಲ್ಲ
ಮಾಳ್ಪುದೆ ಅದರಿಂ ಶಾಸ್ತ್ರದ ಸೊಲ್ಲ
- * * *