xiv
ಪುನರ್ಜನ್ಮವನ್ನು ಪಡೆಯುವ ಹೊತ್ತಿಗೆ ಅವರಿಗೆ 30 ವರುಷಗಳಾಗಿದ್ದವು.
ಮಧುರಚೆನ್ನರು ಗೆಳೆಯರೋಲಗ ಕಟ್ಟಿದ ಶ್ರೀ ಬೇಂದ್ರೆಯವರ ಸಂಬಂಧವನ್ನು ಬಹು ತೀವ್ರವಾಗಿ ಗಳಿಸಿಕೊಂಡರು. ಮಧುರಚೆನ್ನರಿಗೆ ಆಗ ಹದಿನೆಂಟು ವರುಷ ತುಂಬಿರಬಹುದು. ಅಂದಿನಿಂದ ಕೊನೆಯವರೆಗೆ ಅವರು ಅಣ್ಣತಮ್ಮಂದಿರಾಗಿ ನಡೆದುಕೊಂಡರು. ಮೂವತ್ತೆರಡು ವರುಷದ ದೀರ್ಘಾವಧಿಯ ಗೆಳೆತನಕ್ಕೆ ಜಾತಿ, ಮತ, ಪಂಥ ಸ್ವಭಾವ ಇವಾವವೂ ಅಡ್ಡ ಬರಲಿಲ್ಲ. ಒಬ್ಬರು ಹಳ್ಳಿಯ ಬಾಳು, ಅಲ್ಪ ಶಿಕ್ಷಣ, ಅನಾರೋಗ್ಯ, ವಿರಶೈವಜಾತಿ, ಒಕ್ಕಲುತನದ ಬದುಕು ಇವುಗಳಲ್ಲಿ ಬೆಳೆದವರಾದರೆ; ಇನ್ನೊಬ್ಬರು ಪಟ್ಟಣ ಜೀವನ, ಉಚ್ಚ ಶಿಕ್ಷಣ, ಆರೋಗ್ಯ, ಬ್ರಾಹ್ಮಣ ಜಾತಿ, ಸುಸಂಸ್ಕೃತ ಬದುಕು ಇವುಗಳಲ್ಲಿ ಬೆಳೆದವರು. ಒಂದು ಮುಖ ಪೂರ್ವಕ್ಕೆ ಇನ್ನೊಂದು ಪಶ್ಚಿಮಕ್ಕೆ. ಹಳ್ಳಿಯ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಮಧುರಚೆನ್ನರ ಮುಖ ಪಶ್ಚಿಮಕ್ಕೆ; ವಿಚಾರ ಸರಣಿ ಪಾಶ್ಚಾತ್ಯರದು! ಪದವೀಧರರಾಗಿರುವ ಶ್ರೀ ಬೇಂದ್ರೆಯವರ ಮುಖಪೂರ್ವಕ್ಕೆ; ವಿಚಾರಸರಣಿ ಪೌರ್ವಾತ್ಯರದು! ಅವರ ದೃಷ್ಟಿ ವಿರೋಧವಾಗಿದ್ದರೂ, ಅವರ ಕಾಣ್ಕೆಯಲ್ಲಿ ಬಹು ಅಂತರವಾಗಿದ್ದರೂ ಅವರು ಒಬ್ಬರಿಗೊಬ್ಬರು ಹತ್ತಿರದಲ್ಲಿಯೆ ಇದ್ದರು. ``ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ ಎಂದು ಶ್ರೀ ಬೇಂದ್ರೆಯವರು ಹಾಡಿ ಆ ಮಾತಿಗೆ ಅಂಕಿತ ಹಾಕಿದ್ದಾರೆ. ದಿ. ಮಧುರಚೆನ್ನರು ಸಹ `ಬೆನ್ನು ಬೆನ್ನಲಿ ಬೆಸೆದ ಏಕತೇಜದ ಎರಡು ಹಿರಿಕಿರಿಯ ಪಿಂಡಗಳೆಂದು ವಿನಯಿಸಿದ್ದಾರೆ. ಶ್ರೀ ಬೇಂದ್ರೆಯವರು ಹೇಳುವ ವಿಶಾಲ ವೃಕ್ಷವಾಗಲಿ, ಶ್ರೀ ಮಧುರಚೆನ್ನರು ಹೇಳುವ ಏಕತೇಜವಾಗಲಿ ಆ ಇಬ್ಬರು ಗೆಳೆಯರನ್ನು ಬೆಸಿಕೆ ಹಾಕಿದೆ. ಶ್ರೀ ಅರವಿಂದಯೋಗಿಗಳ ಹೃದಯಸ್ಥ ವಿಶ್ವಭಾನುವೇ ಅವರಲ್ಲಿ ಐಕ್ಯವನ್ನು ತಂದಿದೆ. ಸಮರಸತೆಯನ್ನು ಕರುಣಿಸಿದೆ.
ಅವರಿಬ್ಬರೂ ಪರಸ್ಪರರನ್ನು ಮೊದಲಿಗೆ ಕಂಡಾಗ ವ್ಯಕ್ತಿಯನ್ನಷ್ಟೇ ಕಾಣಲಿಲ್ಲ. ಪರಸ್ಪರರ ಕಣ್ಣುಮುಂದೆ ಮೊಳಕೆ ಮಾತ್ರ ನಿಂತಿದ್ದರೂ ಅದರಲ್ಲಿ ಅವರಿಗೆ ಬೆಳೆಯ ಸಿರಿಯೇ ಕಂಗೊಳಿಸಿತು. ಅದು ಬಹಳ ಹಿಂದಿನ ಮಾತು. ಆಗ ಶ್ರೀ ಬೇಂದ್ರೆಯವರು ``ಪಡೆದಪ್ಪನಾಗು ಎಂದು ಮಧುರಚೆನ್ನರನ್ನು ಬಾಯ್ತುಂಬ ಹರಸಿ, ಕೈತುಂಬ ಸ್ನೇಹಸ್ಪರ್ಶವನ್ನು ಸವರಿದರು.
``ಎರೆಯುವೆನು ಬಾ ನಿನ್ನ ನಮ್ಮ ಪಟ್ಟದ ಮರಿಯೆ
ಸಕಲ ತೀರ್ಥದ ಕ್ಷೀರನೀರ ತಂದು|
ಬೆರಗಾಗಿ ಬೆರೆತು ಆ ಶಿವನಲ್ಲಿ ದೇವನಲಿ
ಪಡೆದಪ್ಪನಾಗು ಎಂದು||
ಹಾಗೆ ಎರೆಯುವದಕ್ಕೆ ನಿಸ್ಸಂಗಳೂ ಗುಪ್ತಗಂಗೆಯೂ ಆದ ಶಾಲ್ಮಲೆಯ