ಪುಟ:Praantabhaashhe-Rashhtrabhaashhe.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಬಹುದು ಸುಮಾರು ೪೦ ಭಾಷೆಗಳನ್ನು ಕಲಿತ ಪಂಡಿತರು ಹಲವರಿರು ವರು. ಜನಸಾಮಾನ್ಯರು ಬಹುಶಃ ಒಂದೇ ಭಾಷೆ ಗೊತ್ತಿದ್ದವರು, ಒಂದೇ ಭಾಷೆ ಕಲಿಯುಲಿನವರಿರುವರು. ಅವಶ್ಯವಿದ್ದಾಗ ಹೆಚ್ಚು ಭಾಷೆಗಳನ್ನು ಕಲಿ ಯುವದು ಜಾಣತನದ್ದಿದ್ದರೂ ಅನವಶ್ಯಕವಾಗಿ ಭಾಷೆಗಳನ್ನು ಕಲಿಯುತ್ತ ಹೋಗುವದು ಸಮಂಜಸವಾಗಲಾರದು. ಅದು ಕಾಲಾಪವ್ಯವೆ ಸೈ. ಈ ಬಗೆಯ ವ್ಯಾವಹಾರಿಕ ದೃಷ್ಟಿಯಿಂದಲೆ ಭಾಷೆ, ಲಿಪಿ ಮುಂತಾದವುಗಳತ್ತ ನಾವು ನೋಡುವುದು ಅವಶ್ಯ.

ಭಾಷೆಯೆಂಬುದು ಸಾಧನ ಮಾತ್ರವು. ಮನುಷ್ಯನ ಪ್ರಗತಿ, ಮನು ಷ್ಯನ ವಿಕಾಸ, ಶಾಂತಿ, ಸುಖ, ಜ್ಞಾನ, ತೇಜ ಇವುಗಳತ್ತ ವಿಕಾಸ ಇದೇ ಸಾಧ್ಯವು. ಈ ವಿಕಾಸ ಮಾರ್ಗದಲ್ಲಿ ಭಾಷೆಯು ದೊಡ್ಡ ಸಾಧನವು. ಅದು ಸುಲಭವೂ ಸಹಜವೂ ಸುಂದರವೂ ಇದ್ದುಷ್ಟು ನಮ್ಮ ವೇಳೆ ಶಕ್ತಿಗಳ ಅಪವ್ಯ ಯವಾಗದೆ. ನಾವು ಪ್ರಗತಿ ಪಥದಲ್ಲಿ ಸಾಗಬಲ್ಲೆವು. ಹರುಕು ಮುರುಕು, ಕೊರಟು ಮುರುಟು ಸಾಧನವಿದ್ದರೆ ಸಾಧ್ಯದತ್ತ ಬೇಗ ಸಾಗುವದು ಕಠಿಣ ವಾಗುವದು. ಮೇಲಾಗಿ ಭಾಷೆಯು ಕೇವಲ ವೈಯ್ಯಕ್ತಿಕ ಜೀವನದ ಅಥವಾ ವಿಕಾಸದ ಸಾಧನವಷ್ಟೇ ಅಲ್ಲ. ಅದು ಸಾಮೂಹಿಕ, ಸಾಂಘಿಕ, ಸಾಮಾಜಿಕ ಜೀವನ ವಿಕಾಸದ ಸಾಧನವಿರುವದು. ಒಬ್ಬನೆ ಇರುವಲ್ಲಿ ಇಬ್ಬರು ಒಂದೆಡೆ ಬಂದೊಡನೆ ಭಾಷೆಯ ಅವಶ್ಯಕಥೆಯುಂಟಾಗುವದು. ವಿದ್ಯುತ್ಪ್ರ ವಾಹವು ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಆಕಾಶದ ಆಧಾರವು ಬೇಕಾಗು ವಂತೆ, ನೀರು ಒಂದು ಬದಯಿಂದ ಇನ್ನೊಂದು ಬದಿ ಹರಿಯಬೇಕಾದರೆ ಕಾಲುವೆ ಬೇಕಾಗುವಂತೆ, ವಿಚಾರವಾಹನಕ್ಕೆ ಭಾಷೆ ಬೇಕು. ಆ ಭಾಷೆ ಉತ್ತಮವೂ ಪರಸ್ಪರರಿಗೆ ಚನ್ನಾಗಿ ತಿಳಿಯುಂತಹದೂ ಯಾವದೆ ಅಡಚಣಿ ಯನ್ನುಂಟು ಮಾಡದೆ ಇರುವಂತಹದೂ ಇದ್ದರೆ ಪರಸ್ಪರ ಬಳಕೆಯ ಕೆಲ ಸವು ಸುಕರವಾಗುವದು,

ಅಂಥ ಭಾಷೆಯಾವುದು, ಅದು ಹೇಗಿರಬೇಕು, ಅದರ ಲಕ್ಷಣ ಗಳೇನು?

ತಾಯಿ ತನ್ನ ಮೊಲೆ ಹಾಲುಣಿಸಿ ಮಗುವನ್ನು ಬೆಳೆಸುವಳು. ಆ ಹಾಲಿನೊಡನೆಯೆ ಮಗುವಿಗೆ ಮುದ್ದು ಮಾತುಗಳನ್ನು ಕಲಿಸುವಳು. ಆ