ಪುಟ:Praantabhaashhe-Rashhtrabhaashhe.pdf/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾತುಗಳಿಂದ ಮಗುವಿಗೆ ಜಗತ್ತಿನ ಗುರುತಾಗುವದು. ಅದೇ ಕೂಸು ಕಲಿ
ಯುವ ಮೊದಲು ಮಾತುಗಳು. ಅದೇ ಭಾಷೆಯೊಡನೆ ಮಗುವಿನ ಪ್ರಥಮ
ಪರಿಚಯ. ಆ ಮಾತುಗಳಲ್ಲಿ ಒಂದು ಸಹಜತೆ, ಸ್ವಾಭಾವಿಕತೆ, ಮೂಲ
ಭೂತ ಭಾವನೆಗಳ ನೈಸರ್ಗಿಕ ಪ್ರತಿಬಿಂಬ ಇರುವದು ಅದೇ ತಾಯ್ನುಡಿ
ಅಥವಾ ಮಾತೃಭಾಷೆ ಎನಿಸುವದು. ಒಂದೇ ಮಾತೃಭಾಷೆಯುಳ್ಳವರು ಅತಿ
ದೊಡ್ಡ ಪ್ರಮಾಣದಲ್ಲಿ ಬಹುಸಂಖ್ಯರಾಗಿ ಯಾವ ಪಾಂತದಲ್ಲಿರುವರೊ ಆ
ಪ್ರಾಂತದಲ್ಲಿ ಆ ಭಾಷೆಯೆ ಪ್ರಾಂತ ಭಾಷೆಯಾಗುವದು. ಅಂಥಲ್ಲಿ ಜನರ
ಸ್ವಭಾಷೆ, ಪ್ರಾದೇಶಿಕ ಭಾಷೆ, ಪ್ರಾಂತ ಭಾಷೆ ಒಂದೇ ಇರುವದು. ಆಯಾ
ಪ್ರಾಂತದ ವಾತಾವರಣದಲ್ಲಿ ಅದೇ ನುಡಿಯ ನಿನಾದವು ಸ್ವಾಭಾವಿಕವಾ
ಗಿಯೆ ತುಂಬಿಕೊಂಡಿರುವದು. ಅದೇ ಭಾಷೆಯ ಬಿಂಬವು ಎಲ್ಲೆಲ್ಲಿಯೂ
ಕಾಣುವದು. ಆ ಭಾಷೆಯ ಉಪಭಾಷೆಗಳು ಅಥವಾ ಬಾಯಿ ಭಾಷೆಗಳು
ಹಲವು ಇರಬಲ್ಲವು. ಅವು ಒಂದೇ ಗಿಡದ ಟೊಂಗೆಗಳಂತೆ, ಒಂದೇ ನದಿಯ
ಶಾಖೆಗಳಂತೆ ಒಂದಕ್ಕೊಂದು ಹೊಂದಿಕೊಂಡು ಇರುವವು.

ಆಯಾ ಪ್ರಾಂತದ ಜನರ ನಿತ್ಯವ್ಯವಹಾರಾದಿಗಳು ಪ್ರಾಂತೀಯ ಭಾಷೆ
ಯಲ್ಲಿಯೆ ನಡೆಯುವವು. ಅಲ್ಲದೆ ಅವರ ಇತಿಹಾಸ, ಪರಂಪರೆ, ಸಂಸ್ಕೃತಿ,
ಜ್ಞಾನಭಾಂಡಾರ, ಅನುಭವ, ಜಾಣತನ, ಇವೆಲ್ಲ ಹಾಗೂ ಅವರ ದೋಷ
ಲೋಪಗಳು ಸಹ ಆಯಾ ಭಾಷೆಯ ವಿವಿಧ ವಾಙ್ಮಯದಲ್ಲಿ ಅಡಕವಾಗಿರು
ವದು ಸ್ವಾಭಾವಿಕ. ಅದೆಲ್ಲ ಆಯಾ ಪ್ರಾಂತದಲ್ಲಿ ಹುಟ್ಟಿ ಬೆಳೆದವನ ಸೊತ್ತು.
ಆ ಎಲ್ಲ ಬೊಕ್ಕಸದ ಕೀಲಿಕೈ ಆ ಭಾಷೆಯ ಮೂಲಕವೆ ದೊರೆಯುವದು ಗಣ್ಯ
ವಾದ, ಸಂಸ್ಮರಣಿಯವಾದ ಯಾವದೆ ಮಾತನ್ನು ಆಯಾ ಪ್ರಾಂತದ ಲೇಖ
ಕರು ತಮ್ಮ ಭಾಷೆಯಲ್ಲಿ ಬರೆದಿಡದೆ ಇರಲಾರರು. ಸಾಕಷ್ಟು ಮಹತ್ವದ
ಮತ್ತು ಸುಂದರ ವಾಙ್ಮಯವನ್ನು ಯಾವ ಜನಾಂಗದವರೂ ಅಳಿಯಗೊಡ
ಲಾರರು. ವೇದರಚನೆಯಾದಾಗ ಇನ್ನು ಬರೆಹದ ಕಲೆ ಹುಟ್ಟಿರಲಿಲ್ಲವಂತೆ.
ಆದರೂ ಚಾಚೂ ತಪ್ಪದೆ ಕಂಠಸ್ಥ ಮಾಡಿ ಆಗಿನ ಜನರು ಸುಮಾರು ಸಾವಿರ
ವರುಷಗಳವರೆಗೆ ಅವನ್ನು ಸಂರಕ್ಷಿಸಿ ಪೀಳಿಗೆಯಿಂದ ಪೀಳಿಗೆಗೆ ಅಮೂಲ್ಯ
ವಾದ ಧನವೆಂದು ಕೊಡುತ್ತ ಬಂದರು, ಎಂದು ಪಂಡಿತರು ಹೇಳುವರು.
ತಾತ್ಪರ್ಯವೇನೆಂದರೆ, ಯಾವ ಅಪಾರ ಜ್ಞಾನ ಅನುಭವಾದಿಗಳನ್ನು ವ್ಯಕ್ತಿ