ಪುಟ:Praantabhaashhe-Rashhtrabhaashhe.pdf/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗಳು ತಮ್ಮ ಚಿಕ್ಕ ಮಿದಿಳಿನಲ್ಲಿ ಬಹುಕಾಲ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿ ಸಿಡುವದು ಅಸಾಧ್ಯವೊ ಅವುಗಳನ್ನೆಲ್ಲ ಒಂದು ಭಾಷೆಯು ಸಾವಿರಾರು ವರು ಷಗಳವರೆಗೆ ವಾಙ್ಮಯರೂಪದಿಂದ ಕಾದಿಡಬಲ್ಲದು. ಒಂದು ಪ್ರಾಂತದ ಇಲ್ಲವೆ ಜನಾಂಗದ ವಾಙ್ಮಯವೆಂದರೆ ಆಯಾ ಜನರ ಅನೇಕ ಪೀಳಿಗೆಗಳ ವಿಚಾರ ಮತ್ತು ಅನುಭವ ಪರಂಪರೆಗಳ ನಿಘಂಟು ಅಥವಾ ಸಂದರ್ಭಗ್ರಂಥ ಎಂದರೂ ಸಲ್ಲವದು ವೇದೋಪನಿಷತ್ತುಗಳ ಕಾಲದ ಜನರ ಜ್ಞಾನವು. ಅವರ ಪೂರ್ವಪರ, ಸುಖದುಃಖ, ಸ್ವಭಾವ, ವಿಚಾರ ವ್ಯವಹಾರ ಇತ್ಯಾದಿ, ಆ ಗ್ರಂಥಗಳ ಅಭ್ಯಾಸದಿಂದಲೆ ಆಗುವದು. ಈಗ ಉಸುಬಿನ ಕೆಳಗೆ ನೂರಾರು ಅಡಿ ಹುಗಿದುಹೋದ ಬ್ಯಾಬಿಲೋಲ, ನಿನೇವಾ ಮುಂತಾದ ಪಟ್ಟಣಗಳ ರಹಿವಾಸಿಗಳ ಸ್ಥಿತಿಗತಿ, ರೀತಿ ನಡತೆಗಳು, ಮಿಸರ ದೇಶದ ಜೀವನಾಂಶಗಳು ಅವರವರ 'ಬಾಣ ಭಾಷೆ' (ಕುನಿಫಾರ್ಮ,) 'ಚಿತ್ರಭಾಷೆ'(ಹಾಯರೊ ಗ್ಲಿಫ್)ಗಳ ಸಾಧನದಿಂದಲೆ ನಮಗೆ ತಿಳಿಯುವವು. ಭಾಷೆ ರೂಪುಗೊಂಡು ಗ್ರಂಥಸ್ಥವಾಯಿತೆಂದರೆ ಅದು ಇಷ್ಟೆಂದು ಮಹತ್ವದಾಗುವದು.

ಭಾಷೆಯೆಂಬುದು ಸ್ವವಿಚಾರ ಪ್ರಕಾಶನದ, ವಿಚಾರವಿನಿಮಯದ,

ವಿಚಾರವಿಮರೈಯ, ವಿಕಾಸದ, ಸಾಮಾಜಿಕ ಜೀವನದ, ಜ್ಞಾನಸಂಗ್ರಹ ಉತ್ತಮ ಸಾಧನೆವೆಂಬ ಮಾತು ನಿಜ. ಅದೇ ಕಾಲಕ್ಕೆ ಸ್ವಭಾಷೆಯು ಅಂಥ ಉತ್ತಮೋತ್ತಮ ಸಾಧನವಾಗಬಲ್ಲವೆಂಬುದನ್ನು ನಾವು ಲಕ್ಷದಲ್ಲಿಡಲಿಕ್ಕೆ ಬೇಕು. ರವೀಂದ್ರನಾಥ ಟಾಗೋರರಂಥ ಶಿಕ್ಷಣಪಟುಗಳು, ಗಾಂಧೀಜಿಯ ವರಂಥ ವಿಚಾರಪರಾಯಣರು,