ಪುಟ:Praantabhaashhe-Rashhtrabhaashhe.pdf/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- M - ವಿಕಸನ ಶೀಲರೂ ಆದೆ: ಪ್ರಮಾಣದಲ್ಲಿ ಅವರ ಭಾಷ ಪ್ರಗತಿ ಪರವಿರುವದು. ನಿತ್ಯ ಉಪಯೋಗದ ಮೂಲಕ, ಅನ್ಯ ಭಾಷೆಗಳೊಡನೆ ಆಗುವ ತಿಕ್ಕಾಟ ಬರುವ ಸಂಬಂಧಗಳ ವಲಕ ಹೊಸ ವಿಚಾರ ಮತ್ತು ಭಾವನೆಗಳ ಪ್ರಕಟನೆ ಗಾಗಿ ಹೊಸ ಶಬ್ದಗಳ ರಚನೆಯ ಅವಶ್ಯಕತೆಯ ಮೂಲಕ ಜೀವಂತ ಭಾಷೆ ಒಂದು ಹರಿಯುವ ನದಿಯಂತೆ ಇರುವದು, ಹೊಸ ಶಬ್ದ ನಿರಾಣ, ಹೊಸ ಸಾಹಿತ್ಯ ರೂಪ ಧಾರಣ ಇವು ಭಾಷೆಯ ಜೀವಂತತನದ ಮುಖ್ಯ ಲಕ್ಷಣಗ ೪ಂದು ಹೇಳಬಹುದು ಇವೆರಡಿಲ್ಲದೆ ಯಾವ ಭಾಷೆಯೂ ಬದುಕಿ ಬಾಳಲಾ ರದು, ಸ್ವಾವಲಂಬಿಯಾಗಲಾರದು; ಮುಂದಡಿಯಿಡುವದಂತೂ ದೂರನೆ ಉಳಿಯಿತು. ಭಾಷಾನ ಗುಣ ಸ್ವ೦ತ. ಜೀವನದಲ್ಲಿ ಭಾಷೆಗೆ ಇದ್ದ ಶ್ರೇಷ್ಠ ಸ್ಥಾನ, ಹಿಂದುಸ್ತಾನದಲ್ಲಿ ಜೀವಂತ ವಿರುವ ಪ್ರಾಂತೀಯ ಭಾಷೆಗಳ ಮಹತ್ವ, ಆಯಾ ಜನರ ವಿಕಾಸ ಆಯಾ ಭಾಷೆಗಳ ಮುಖಾಂತರವೆ ಆಗುವದು ಸ್ವಾಭಾವಿಕ ಎಂ ಎಲ್ಲ ಮಾತುಗ ಳನ್ನು ಲಕ್ಷಿಸಿ ಕಾಂಗ್ರೆಸ್ಸು ತನ್ನ ಕಾರಭಾರದ ಮಟ್ಟಿಗೆ ಭಾಷಾನುಗುಣ ಪ್ರಾಂತಗಳನ್ನು ೧೯೨೦ರಲ್ಲಿ ಮಾಡಿಯೆಬಿಟ್ಟಿತು. ಸ್ವರಾಜ್ಯದಲ್ಲಿ ಭಾಷಾ ನುಗುಣ ಪ್ರಾಂತ್ಯಗಳೇ ಏರೊಡಬೇಕು ಎಂದು ಅದು ಸಾರಿತು, ತಾನು ಮಾಡಿದ ಸ್ವರಾಜ್ಯ ಘಟನೆಯಲ್ಲಿ ಆ ರೀತಿ ಇರಬೇಕೆಂದು ಪ್ರಚಾರಮಾಡಿತು. ಕೇವಲ ಭೌಗೋಲಿಕ, ಆಜ್ಜಿಕ, ರಾಜಕೀಯ ದೃಷ್ಟಿಯಿಂದ ಪ್ರಾಂತಗಳನ್ನು ಏತ್ಪಡಿಸುವ ವೆಂದರೆ ಬಹಳ ಕೃತ್ರಿಮವಾಗುವದು, ಪ್ರಾಂತವೆಂದರೆ ಅಲ್ಲಿರುವ ಗುಡ್ಡ, ಗಿಡ ಅಥವಾ ನದಿ, ಕೆರೆಯಲ್ಲ, ಅಲ್ಲಿಯ ಬೆಳೆ ಖನಿಜಗಳಲ್ಲ, ಪ್ರಾಂತ ವೆಂದರೆ ಅಲ್ಲಿಯ ಜನರು. ಅವರಲ್ಲಿ ಒಂದು ಬಗೆಯ ಏಕೋಭಾವ, ಸಮd ಸತ ವಿಚಾರಗಳ ಏಕರೂಪತೆ ನೆಲೆಗೊಳ್ಳಬೇಕಾದರೆ ಏಕ ಭಾಷೆಯು ಆ ಕೆಲಸಕ್ಕೆ ಉಪಕಾರಕವಾಗಬಲ್ಲದು. ಒಂದು ಪ್ರಾಂತದ ಶಿಕ್ಷಣ, ವ್ಯವಹಾರ, ರಾಜ್ಯ ಕಾರಭಾರ, ಸಭೆಸಮ್ಮೇಲನಾದಿ ಸಾಲ್ವಜನಿಕ ಚಟುವಟಿಕೆಗಳು ಎಲ್ಲ ಸುಸೂತ್ರ ಸಾಗಬೇಕಾದರೆ, ಅವೆಲ್ಲವುಗಳಲ್ಲಿ ಅಲ್ಲಿಯ ಜನಸಾಮಾನ್ಯರು ರುಚಿಕೊಂಡು ಭಾಗವಹಿಸಬೇಕಾದರೆ, ಅಲ್ಲಿಯ ಜನರು ಒಂದೇ ಭಾಷೆಯವರಿ