ಪುಟ:Praantabhaashhe-Rashhtrabhaashhe.pdf/೨೫

From ವಿಕಿಸೋರ್ಸ್
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಎಂದು ಸುಮ್ಮನೆ ಕೂಡುವವೆಂದರೆ ಪ್ರತಿ ಕ್ಷಣವೂ ನಾವು ನಮ್ಮ ಉನ್ನತಿಯನ್ನು ಕುಗ್ಗಿಸಿದಂದೆಸೈ. ಈಗ ಜನರಲ್ಲಿ ಸಾಕಷ್ಟು ಜಾಗ್ರತಿಯಾಗುತ್ತ ನಡೆದಿದೆ. ಆದುದರಿಂದ ಲೋಕಸೇವಕರು, ಕಾರ್ಯಕರ್ತರು ಬಹುಮುಖವಾಗಿ ಪ್ರಾಂತ ದಲ್ಲಿ ಕರ್ನಾಟಕವು ಬಂಗಾಲ, ಮಹಾರಾಷ್ಟ್ರ, ಆಂಧ್ರ ಮುಂತಾದ ಪ್ರಾಂತ ಗಳಿಗಿಂತ ಇನ್ನೂ ಹಿಂದೆ ಇರುವರು. ಆದುದರಿಂದ ಕರ್ನಾಟಕಸ್ತರು ಹೆಚ್ಛು ಪ್ರಯತ್ನಶೀತರಾಗುವದು ಅವಶ್ಯವು.

                   ಭಾಷಾಜಾಗ್ರತಿ

ಜನಾಂಗ ಇತಿಹಾಸವನ್ನು ನಾವು ಪರಿಶೀಲಿಸಿದರೆ ಸಾಮಾನ್ಯತಃ ರಾಷ್ಟೀಯ ಜಾಗ್ರತಿಯೊಡನೆಯೆ ಭಾಷಾಜಾಗ್ರತಿಯಾಗುತಿರುವುದು ಕಂಡು ಬರುವದು. ರಾಷ್ಟೀಯ ಜಾಗ್ರತಿಯೆಂಬುದು ಯಾವಾಗಲು ಬಹುಮುಖ ವಿರುವದು. ಅದು ಕೇವಲ ರಾಜಕೀಯ, ಕೇವಲ ಸಾಮಾಜಿಕ, ಅಥವಾ ಕೇವಲ ಧಾರ್ಮಿಕ ಇಲ್ಲವೆ ಆರ್ಥಿಕವಿರುವದಿಲ್ಲ. ಆ ನವಚೈತನ್ಯದ ಉಗಮ ದೊಡನೆ ಹೊಸ ಹೊಸ ವಿಚಾರಗಳು, ನವಭಾವನೆಗಳು ಆಯಾ ದೇಶದ ಜನರ ಮನಸ್ಸಿನಲ್ಲಿ ಮೂಡುವವು. ಆಗಲೇ ಭಾಷಾ ಜಾಗ್ರತಿಯಾಗಿ ಭಾಷೆಯೆ ವಿಕಾಸ ಮಾಡಬೇಕೆಂಬ ಅವಶ್ಯಕತೆಯ ಪ್ರತೀತಿ ಅಲ್ಲಿಯ ಮುಖಂಡರಿಗೆ ಆಗುವದು. ವರುಷಾನುವರುಷ ದಾಸ್ಯದಲ್ಲಿ ಮುಳುಗಿದ್ದರೂ ಮುಂದೆ ಹೋರಾಡಿ ಸ್ವತಂತ್ರವಾದ ಇಟಲಿ, ಆಯರ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಭಾಷಾಜಾಗ್ರತಿಯ ಪ್ರಚಂಡ ತೆರೆಗಳು ಆ ದೇಶಗಳನ್ನು ಅಲುಗಾಡಿಸಿ ಬಿಟ್ಟವು. ನಮ್ಮಲಿ ಕೂಡ ಬಂಗಾಲ ಮಹಾರಾಷ್ಟ್ರ ಪ್ರಾಂತಗಳಲ್ಲಿ ಮೊದಲು ರಾಷ್ಟ್ರೀಯ ಜಾಗ್ರತಿಯ ಕಾಲಕ್ಕೆಯೆ ಭಾಷಾ ಜಾಗ್ರತಿ ಹೆಚ್ಚಾಯಿತು. ಅದೇ ಜಾಗ್ರತಿ ೧೯೦೫ರ ಸುಮಾರಕ್ಕೆ ಇಡೀ ಹಿಂದುಸ್ತಾನದ ಪ್ರಾಂತಪ್ರಾಂತಗಳಲ್ಲಿ ಹರ ಡಿತು. ಬಂಗಾಲದ ವಂಗಭಂಗ ಚಳವಳಿಯ ಚೈತನ್ಯವು ಇಡೀ ದೇಶವನ್ನು ಆವರಿಸಿತು.

ಭಾಷಾಜಾಗ್ರತಿಯ ಮುಖ್ಯ ಕಾರಣಗಳು ಎರದು. ಅನ್ಯ ಭಾಷೆಗಳ ಆಕ್ರಮಣ ಅಥವಾ ಅವಾಸ್ತವ ವರ್ಚಸ್ಸು ಮತ್ತು ಸ್ತೋಮ ಒಂದು