ಪುಟ:Praantabhaashhe-Rashhtrabhaashhe.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಕರಣಗಳು ನುಡಿಯ ಮುಖಾಂತರ ಸ್ವರಸಂಕೇತದ ಮೂಲಕ ಒಡಮೂ ಡುವವು. ಮನಸ ಭಾಷೆಯೆಂಬ ಕುದುರೆಯನೇರಿ ಬೇಕಾದತ್ತ ಸಂಚರಿಸ ಬಲ್ಲದು. ಭಾಷೆಯು ಮನಸಿನ, ಭಾವನೆಗಳ,ಕಲ್ಪನೆಗಳ ವಾಹನವು. ಭಾಷೆ ಯಿಲ್ಲದಿದ್ದರೆ ಮನಸು ಮೂಕಾಗಿ ಮಂಕಾಗಿ ಕುಳಿತು ಬಿಡುವದು. ಭಾಷೆಯ ರೂಪದಿಂದ ಮನಸಿನ ಚಟುವಟಿಕೆಗಳ ತಿಳುವಳಿಕೆ ಆಗುವದು. ಒಬ್ಬ ಸಿಲ್ಪಿಗನ ಕಲ್ಪನೆ ಒಂದು ಸುಂದರ ಮಂದಿದ ರೂಪದಿಂದ ಹೆಪ್ಪುಗಟ್ಟೀ ನಿಲ್ಲುವಂತೆ ನಮ್ಮ