ಪುಟ:Putina Samagra Prabandhagalu.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬

ಪು.ತಿ.ನ ಸಮಗ್ರ


ಸಂದೇಹಗೊಂಡು, ಕಳವಳಗೊಂಡು, ಆಮೇಲೆ ಈ ಪ್ರಮೋದವು ತಮ್ಮ ಅನುಭವದ ಹಿಡಿತಕ್ಕೆ ಸಿಕ್ಕಿದ ಮೇಲೆ ತಾವೇತಾವಾಗಿ, ವಿಶ್ವಕ್ಕೆಲ್ಲ ತಾವೇ ತಾವಾಗಿ, ನಿಯತಿಯ ಕಟ್ಟಳೆಗಳನ್ನೆಲ್ಲಾ ಮೀರಿ, ಜೀವನ್ಮಕ್ತರಾಗಿ, ಆನಂದಜೀವಿಗಳಾಗುವ ಪ್ರೇಮೋನ್ಮತ್ತರ ವಿಹಾರ. ಈ ಆನಂದವೇ ನಿಜ, ಇದೇ ನಿಯತಿಯ ಸತ್ವ, ಇದೇ ಮುಕ್ತಿ, ಉಳಿದುವೆಲ್ಲಾ ಮಾಯೆ-ಅನೃತ.... ಎಂದುಕೊಳ್ಳುವಷ್ಟರಲ್ಲಿ ಈ ಕನಸು ಮಾಯವಾಗಿ ಮತ್ತೊಂದು ಕಣ್ಣಿಗೆ ಬೀಳುವುದು.

ಕಾರಿರುಳು. ಅಪಾರವಾದ ಅಕ್ಷುಬ್ಧವಾದ ಪ್ರಶಾಂತ ಸಾಗರ. ಅದರಲ್ಲಿ ತೆರೆಗಳೊಂದೂ ಎದ್ದಿಲ್ಲ. ಸಾಗರವು ಸುಷುಪ್ತಿಯಲ್ಲಿರುವಂತೆ ತೋರುವುದು. ಇದು ಭಯಜನಕವಾದ ಶಾಂತಿ. ಈ ಕಡಲಿನ ಮೇಲೆ ಮೆಲ್ಲಮೆಲ್ಲನೆ ಒಂಟಿ ದೋಣಿಯೊಂದು ತೇಲುತ್ತಿದೆ. ಚೆಲುವಾದ ಹಗುರವಾದ ಪುಟ್ಟಹೂದೋಣಿ. ಆ ಗಂಭೀರಸಾಗರದ ವಾತಾವರಣಕ್ಕೆ ಈ ದೋಣಿಯು ಹೊಂದಿಕೊಂಡಿರುವುದಿಲ್ಲ. ಅದು ಅಲ್ಲಿ ತೇಲುತ್ತಿರುವುದು ನಿಯತಿಯ ಪರಿಹಾಸ್ಯದಂತೆ ತೋರುತ್ತದೆ. ಸಾಗರದ ಅರಿವಿಲ್ಲದೆ, ಅದರ ಲಕ್ಷ್ಯಕ್ಕೆ ಬೀಳದೆ, ಕಳ್ಳತನದಿಂದ ಹುದುಗಿರುವಂತೆ,-ಕಡಲೆಲ್ಲಿ ಎಚ್ಚರಗೊಳ್ಳುತ್ತದೋ, ಆಮೇಲೆ ಅದರ ದೃಷ್ಟಿಗೆಲ್ಲಿ ಬೀಳುತ್ತೇನೋ, ಬಿದ್ದರೆ ಏನಾಗುವುದೊ ಎಂಬ ಭಯದಿಂದ ಅದರ ನಿಶ್ವಾಸಕ್ಕೆ ತಲ್ಲಣಿಸುತ್ತಿರುವಂತೆ ತೋರುತ್ತದೆ.

ಅದರಲ್ಲಿ ತೇಲುವ ಸಾಹಸಿಗರಾರು?

ಹೆಂಗಸು! ಹರೆಯದ ಹುಡುಗಿ, ಸುಂದರಿ. ಇದೇನು ಒಬ್ಬಳೇ ಒಬ್ಬಳು-ಅನ್ಯಮನಸ್ಕಳಾಗಿ ಕುಳಿತಿದ್ದಾಳೆ. ಅತಿ ವಿಷಣ್ಣಳಾಗಿದಾಳೆ. ಮುಖದಲ್ಲಿ ನಿರಾಶೆಯ ಮುದ್ರೆಯೊತ್ತಿದೆ. ಕಡಲಿನಲ್ಲಿ ತನ್ನ ಆ ದೋಣಿಯಂತೆ ಪ್ರಣಯದ ಸಾಗರದಲ್ಲಿ ತನ್ನ ಬಾಳನ್ನು ತೇಲಿಬಿಟ್ಟಿರಬಹುದು. ಆಹಾ, ಕಡುಚೆಲುವೆ-ಕಡುಚೆಲುವೆ! ಪ್ರಿಯನಿಂದ ತಿರಸ್ಕೃತಳಾಗಿ ಸಂಕೇತದಿಂದ ಹಿಂತಿರುಗುತ್ತಿದಾಳೇನು? ಆಮೇಲೆ, ಈಗ ನಿಷ್ಠುರ ಬಂಧುಗಳ ಬಳಿಗೆ ತೇಲಿಹೋಗುತ್ತಿದಾಳೋ? ಇಷ್ಟು ಗಂಭೀರವಾದ ಇರುಳಿನಲ್ಲಿ, ಅಪಾರ ಸಾಗರದಲ್ಲಿ ಈ ಅಸಾಧಾರಣ ಮೌನದಲ್ಲಿ, ಅಮಾನುಷವಾದ ಒಂಟಿತನದಲ್ಲಿ, ಶೋಕಪಾತ್ರೆಯಂತೆ ತೋರುತ್ತಿರುವ ಲಘುತಮವಾದ ಆ ನಾವೆಯಲ್ಲಿ ಈ ತಿರಸ್ಕೃತೆ ಎಲ್ಲಿಗೆ ತೇಲಿಹೋಗುತ್ತಿದಾಳೆ? ಯಾವ ಗತಿಗೆ?

ನಾನು ತೀರ ಭಯಗೊಂಡೆ, ತೀರ ಕುತೂಹಲಗೊಂಡೆ. ಅಲ್ಲಿಗೆ ಕನಸು ಹರಿಯಿತು. ಕಣ್ಣು ಬಿಟ್ಟೆ; ಆದರೆ ಕನಸಿನ ಪೂಭಾವವಳಿಯಲಿಲ್ಲ. ನನ್ನ ಪಾರ್ಥಿವ ಜೀವನಕ್ಕೆ ಪರಿಚಿತವಾದ ವಸ್ತುಗಳು ದೃಷ್ಟಿಗೆ ಬಿದ್ದಮೇಲೆ ಕನಸು ಕರಗಿಹೋಗಿ