ಪುಟ:Putina Samagra Prabandhagalu.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪು.ತಿ.ನ ಸಮಗ್ರ


ಹುಟ್ಟಿದಾನೆ, ನಿಜ. ಅದೋ ಅಲ್ಲಿ; ಇಲ್ಲೂ. ಎಂದು ಎದೆ ಮುಟ್ಟಿಕೊಂಡೆ. ಅಂದು ಮೂಡಿದ ನಂಬಿಕೆ ಇನ್ನೂ ಅಳಿದಿಲ್ಲ.

ಈ ಮಹಾವ್ಯಕ್ತಿಗೆ ಸ್ವಾಗತವಿತ್ತು, ಅಘರ್ಯ್‌ಕೊಟ್ಟು, ಪೂಜೆ ಸಲ್ಲಿಸುವ ಅಧಿಕಾರ ನನಗೊದಗಿದುದು ಈ ವರ್ಷವೇ. ಹೋದ ವರ್ಷದವರೆಗೂ ನಾನೊಂದು ದೊಡ್ಡ ಸಂಸಾರದ ಮಗನಾಗಿದ್ದೆ. ಈ ವರ್ಷ ಅಂದರೆ ನಾನು ನಮ್ಮೂರನ್ನು ಬಿಟ್ಟು ಬೆಂಗಳೂರಿನಲ್ಲಿ ಸಂಸಾರ ಹೂಡಿದಂದಿನಿಂದ ನಾನೊಂದು ಕುಟುಂಬದ ತಂದೆ, ಒಂದು ಮನೆಗೆ ಯಜಮಾನ. ಇಂದು ನಮ್ಮ ಮನೆಯಲ್ಲೂ ಕೃಷ್ಣಜನನವಾಗಬೇಕು. ಈ ಉತ್ಸವವನ್ನು ಹೇಗೆ ನಿರ್ವಹಿಸಬೇಕು ಎಂದು ನನಗೆ ತಿಳಿಯದು. ಆ ಗೌರವವನ್ನು ವಹಿಸುವ ಸಾಮಥರ್ಯ್‌ ನನ್ನಲ್ಲಿಲ್ಲವೆಂದು ನಾನು ತೀರ ಭಯಗೊಂಡೆ. ನಾವಿಬ್ಬರೂ ಅರಿಯದವರು. ಆಚಾರ ವ್ಯವಹಾರ ತಿಳಿದವರಲ್ಲ. ದೊಡ್ಡ ದೊಡ್ಡ ತಿಂಡಿಗಳನ್ನು ಮಾಡಿ ನಿವೇದಿಸಿ ದೇವನನ್ನೊಲಿಸಲು ಆಕೆ ಬಲ್ಲವಳಲ್ಲ. ಇಬ್ಬರೂ ಉಪವಾಸವಿದ್ದೆವು. ಬಿಮ್ಮೆನ್ನದಿರಲಿ ಎಂದು, ಒಂದು ಗಳುವನ್ನು ಸೀಳಿ ಹಂದರ ಬಿಗಿದು ಒಂದು ಸಣ್ಣ `ಫಲವಸ್ತ್ರ'ದ ಚಪ್ಪರ ಕಟ್ಟಿದೆವು. `ಫಲವಸ್ತ್ರ'ಕ್ಕೆ ಸೀಬೆಹಣ್ಣು, ಸೌತೆಕಾಯಿ, ದಾಳಿಂಬೆ ಹೀಚು, ಯಥೇಚ್ಛವಾಗಿ ಮಾವಿನ ಸೊಪ್ಪು ಇವನ್ನು ಕಟ್ಟಿದೆವು. ನಮ್ಮ ಮಗುವಿನ ಬಣ್ಣದ ಕೈತೊಟ್ಟಿಲನ್ನು ಈ ಚಪ್ಪರದ ಕೆಳಗೆ ತೂಗುಬಿಟ್ಟು ಅದರಲ್ಲಿ ಅದರ ಕೃಷ್ಣನನ್ನೇ ಪೂಜೆಗಿಟ್ಟೆವು. ಸಂಜೆಯಲ್ಲಿ ಮಿಂದು ಮಡಿಯುಟ್ಟು ಗೀತೆಯನ್ನು ಪಾರಾಯಣ ಮಾಡಿದೆ. ಸಹಸ್ರನಾಮವನ್ನು ಹೇಳಿ ಹೂ ತುಳಸಿಯಿಂದ ಅರ್ಚಿಸಿದೆ. ಹಾಲಿನ ಅಘರ್ಯ್‌ ಕೊಟ್ಟೆ. ನವನೀತವನ್ನು ನಿವೇದಿಸಿದೆ. ಈ ಪೂಜೆ ಶಾಸ್ತ್ರಸಮ್ಮತವೋ ಅಲ್ಲವೋ ನನಗೆ ತಿಳಿಯದು. ಅವನಿಗೆ ಸಂದಿತೋ ಇಲ್ಲವೋ ಅದನ್ನೂ ನಾನರಿಯೆ; ಸಂದಿರಬಹುದು. "ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪೂಯಚ್ಛತಿ! ತದಹಂ ಭಕ್ತುಪಹೃತಮಶ್ನಾಮಿ ಪೂಯತಾತ್ಮನಃ"|| ಎಂದು ಗೀತೆಯಲ್ಲಿ ಆತನೇ ಅಪ್ಪಣೆ ಕೊಡಿಸಿದಾನೆಯಲ್ಲ. ನನ್ನ ಈ ಪೂಜೆಗೆ ಅವನು ಮೆಚ್ಚಿರದಿದ್ದರೆ, ನಮ್ಮ ಪುಟ್ಟು ಅದರ ತಾಯಿ ಇಬ್ಬರೂ ಸೇರಿ ಎತ್ತಿದ ಆರತಿಗೂ, ಹೇಳಿದ ಹಾಡಿಗೂ, ಅವನೊಲಿದಿರಬೇಕು. ಆ ಪೂಜೆ ಅವನಿಗೆ ಸಂದಿರಬೇಕು. ಇಲ್ಲದಿದ್ದರೆ ಗೀತೆಯ ಮಾತು ಸುಳ್ಳಾಗಬೇಕಲ್ಲ.

ಹೀಗೆ ನಮ್ಮ ಪೂಜೆ ಸಲಿಸಿ, ಈಗತಾನೆ ಇಲ್ಲಿ ಬಂದು ಕುಳಿತಿದೇನೆ. ಆತ್ಮವು ಹಗುರವಾಗಿ ಶಾಂತಿಯಲ್ಲಿ ತೇಲುತ್ತಿದೆ. ಬಗೆಯಲ್ಲಿ ಒಂದು ನೂತನ ಹರ್ಷ ಮೂಡಿದೆ. ಬಾಳು ಪುನೀತವಾಯಿತೆಂಬ ಅನುಭವ ಉದಿಸಿದೆ. ಆತನ ವ್ಯಕ್ತಿತ್ವವಿಂದು