ವೈಲ್ ಮಾಳಿಗೆ ಉತ್ಸವ
೩೯
ಅಭ್ಯಾಗತನನ್ನು ಬಿಟ್ಟು ಊಟ ಮಾಡುವುದೇ ಎಂದ. ಈ ದಿನ ಅಮಾವಾಸ್ಯೆ ಎಂದು ತಿಳಿದ ಮೇಲೆ ಎದೆಯಲ್ಲಿ ಎಂಥ ಅಳುಕು ಮೂಡಿತು ಎನ್ನುತೀಯಾ. ಉಪವಾಸ ಮಾಡಿಬಿಡೋಣವೇ ಎನ್ನಿಸಿತು;-ನೆಪ ಏನು ಹೇಳಬೇಕು-ತೋಚಲಿಲ್ಲ. ನನ್ನ ಈ ಕರೆಕರೆಯನ್ನು ತೋರಿಸಿಕೊಳ್ಳುವುದಕ್ಕೂ ನಾಚಿಕೆ. ಸರಿ, ಪುಷ್ಕಳವಾಗಿ ಊಟ ಮಾಡಿದೆ. ನಾಚಿಕೆ ದುರ್ಗುಣವೆಂದು ಪೂರ್ತ ಹೇಳುವಹಾಗಿಲ್ಲ. ಅದರಲ್ಲೂ ಪ್ರಯೋಜನ ಉಂಟು.
ಊಟವಾದ ಮೇಲೆ ನಾಣು, ನೀನು ಎಲ್ಲಿ ಈ ದಿನ ಬಾರದೆ ಹೋಗುತ್ತೀಯೋ ಎಂದು ದಿಗಿಲು ಬಿದ್ದಿದ್ದೆ ಎಂದ. ಈ ದಿನದ ಮಹತ್ವವೇನೆಂದರೆ ಇಂದು ವೈಲುಮಾಳಿಗೆಯ ಉತ್ಸವ !
ಬಿಸಿಲು ಮಾಳಿಗೆ ಎಂದರೆ ನಾಣುವಿಗೆ ಸಾಲದು. ವೈಲುಮಾಳಿಗೆ ಎಂದೇ ಈ ಉತ್ಸವವನ್ನು ಕರೆಯಬೇಕು. ನಿಜವಾಗಿ ಇದೊಂದು ತರಹ ಸೊಗಸಾದ ಉತ್ಸವ. ಅವರೂರಿನಲ್ಲಿ ಹೊರತು ಬೇರೊಂದು ಕಡೆ ಇಂಥದನ್ನು ನೋಡುವ ಹಾಗಿಲ್ಲ.
ನಾಣು ಜೊತೆಗಿದ್ದರೆ ಈ ಊರು ಎಷ್ಟು ರಮ್ಯವಾಗುತ್ತದೆ. ನಾನೊಬ್ಬನೇ ಕೆಲವು ಸಲ ಇಲ್ಲಿಗೆ ಬಂದಿದೇನೆ. ನೀನು ಹೇಳಿದುದೆಲ್ಲ ನಿಜ ಎಂದುಕೊಂಡಿದೇನೆ. ಆದರೆ ನಾಟಕದ ಕಂಪೆನಿಯ ಹಗಲ ಬೆಲೆವೆಣ್ಣು ರಾತ್ರಿಯಲ್ಲಿ ರಂಗದ ಮೇಲೆ ಎಂಥ ಮೋಹಿನಿ, ಎಂಥ ಸಾವಿತ್ರಿ, ಎಂಥ ಸೀತೆ! ಹಾಗೆ ನೋಡು, ಈ ಊರು ನಾಣುವಿನ ಮನೋರಂಗದಲ್ಲಿ ಮೋಹಿನಿಯಾಗಿ ನಮಗೆ ಕಾಣಬರುತ್ತದೆ. ಈ ಸಲ ನಾನು ಇಲ್ಲಿ ಅನೇಕ ಸೌಂದರ್ಯಗಳನ್ನು ಕಂಡೆ. ಗುಡಿ, ಜನ ಎಲ್ಲಾ ಅತ್ಯಂತ ಸುಖಪ್ರದವಾಯಿತು. ಈ ವೈಲ್ ಮಾಳಿಗೆ ಉತ್ಸವ ಎಂಥ ವಿನೋದದ ಉತ್ಸವವಿದು; ನೀನೂ ಬಂದಿದ್ದರೆ ಎಷ್ಟು ಚೆನ್ನಾಗಿತ್ತು.
ಈ ಉತ್ಸವವನ್ನು ಅಮಾವಾಸ್ಯೆಯ ಕಗ್ಗತ್ತಲೆಯಲ್ಲಿ ಏಕೆ ಏರ್ಪಡಿಸಿದರೋ ಕಾಣೆ. ಈ ರಸಿಕತೆಗೆ ಎಷ್ಟು ಹೇಳಿದರೂ ತೀರದು. ಹುಣ್ಣಿಮೆಯಲ್ಲಿ ಇದು ನಡೆದಿದ್ದರೆ ಇದಕ್ಕೆ ಈ ತೆರದ ಸೊಗಸು ಬರುತ್ತಿರಲಿಲ್ಲ. ಅಸುರರನ್ನು ಕೊಂದು ವಿಷ್ಣು ಅಟ್ಟಹಾಸದಿಂದ ಮನೆಗೆ ಬರುವ ಬಗೆ ಈ ಉತ್ಸವದಲ್ಲಿ ಪೂದರ್ಶಿತವಾಗುತ್ತದೆ. ಅದಕ್ಕೆಯೇ ಕಗ್ಗತ್ತಲು ಭೋಗ್ಯವಾಯಿತು ದೇವರಿಗೆ ಈವೊತ್ತು. ಬಹು ಸುಂದರ ಈ ಬೇಸಗೆಯ ಕತ್ತಲೆ. ಊರು ಬೆಟ್ಟದ ಮೇಲೆ ಇರುವುದರಿಂದ ಗಾಳಿ ಬೀಸುತ್ತದೆ. ಈ ತಂಗಾಳಿಗೆ ಮೈಯೊಡ್ಡಿದರೆ ಕಾವೇರಿ ಮಳಲಮೇಲೆ ಹರಿದು ಬಂದು ತನ್ನ ತೆರೆಕ್ಕೆಗಳಿಂದ ನಮ್ಮನ್ನು ತಂಪಾಗಿ ತಡಹುತ್ತಿರುವಂತೆ ಹಾಯಾಗುತ್ತದೆ. ಸುತ್ತಲೂ