ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಳೆ

೪೭

ಅಂಗಡಿಯ ಬೀರುವನ್ನು ತೆರೆದುಕೊಂಡು ಸೀರೆ ಮನೆಗೆ ನಡೆದುಬರುತ್ತದೆ. ಈ ಕೊಟಕೊಟ ನಿಂತರೆ ಸೀರೆಯ ಕಾಲು ಮುರಿಯುತ್ತದೆ. ಹೆಂಡತಿ ನಗುವುದರ ಬದಲು ಗೊಣಗುಟ್ಟುವುದಕ್ಕೆ ಮೊದಲಿಡುತ್ತಾಳೆ. ಹೀಗೆ ಸಿಪಾಯಿ ಕಾಲಿಗೆ ಜೋಡು ಸರಿಯಾಗಿ ಹಾಕಿಕೊಳ್ಳದೇ ಇರುವುದಕ್ಕೂ ನಮ್ಮ ಮನೆಯಾಕೆಯ ಹೊಸ ಸೀರೆಯುಡುವ ನಲವಿನ ನಗೆಗೂ ಇಂಥ ಕಾರ್ಯಕಾರಣ ಭಾವವಿದ್ದರೆ, ಬೆಟ್ಟಕ್ಕೆ ನೀರು ಹೊತ್ತು ನರಸಿಂಹ ದೇವರಿಗೆ ಅಭಿಷೇಕ ಮಾಡುವುದಕ್ಕೂ ಮುಗಿಲಿಂದ ಮಳೆ ಸುರಿಯುವುದಕ್ಕೂ ಹೆಚ್ಚು ನಿಕಟ ಸಂಬಂಧವಿಲ್ಲ ಎಂದು ಹೇಳುವುದಕ್ಕಾಗುತ್ತದೆಯೇ? ನಮ್ಮ ಆಧುನಿಕ ಜೀವನ ವಿಜ್ಞಾನವನ್ನು ನೋಡಿ ಹಿರಿಯರು ಪಶ್ಚಾತ್ತಾಪಪಡುತ್ತಾರೆ. ಅವರ ಅಜ್ಞಾನಕ್ಕೆ ನಾವು ಇಲ್ಲ ವಿಷಾದಿಸುತ್ತೇವೆ-ಇಲ್ಲ ನಗುತ್ತೇವೆ. ಆದರೆ ನಾನು ವಿಷಾದಿಸಲೂ ಇಲ್ಲ, ನಗಲೂ ಇಲ್ಲ. ಹೂಂ, ಆದದ್ದು ಆಗಲಿ, ನನಗೂ ಒಂದು ಕೊಡ ಕೊಡಿ ಎಂದೆ. ಅಭ್ಯಾಸವಿಲ್ಲ, ಝಳ ಹೆಚ್ಚು. ಆದರೆ ಹತ್ತು ಜನ ಒಂದು ರೀತಿಯಲ್ಲಿ ನಡೆಯುವಾಗ ಒಬ್ಬ ಎಂತು ಹಿಂದುಳಿಯುವುದು ನಿಜವಾಗಿ ಊರು ಬಹಳ ಕಷ್ಟಪಡುತ್ತಿತ್ತು. ನಾನೂ ಈಗ ಸ್ವಲ್ಪ ಶ್ರಮವಹಿಸಿದರೆ ಮುಂದೆ ಮಂಗಳವಾದಾಗ ನನಗೂ ಮನಶ್ಶಾಂತಿ ದೊರೆಯಬಹುದೆಂದುಕೊಂಡು ಕೊಡವನ್ನು ಹೆಗಲ ಮೇಲೆ ಹಾಕಿಕೊಂಡು ಹೊರಟೆ.

ನಾವು ಇದಕ್ಕೆ ನಗೋಣವೇ, ಅಳೋಣವೇ? ಮಳೆಯಿಲ್ಲದೆ ಬಾಳುವೆ ನಡೆಯುವಂತಿಲ್ಲ. ನಮ್ಮ ದೇಹದಲ್ಲಿ 35% ಭಾಗ ನೀರಂತೆ. ಆದರೆ ಮಳೆ ನಮ್ಮಧೀನದಲ್ಲಿಲ್ಲ. ಅದರ ಹಂಗು ನಮಗೆ ಬಹಳ; ನಮ್ಮ ಹಂಗು ಅದಕ್ಕೆ ತುಸವೂ ಇಲ್ಲ. ನಮ್ಮ ಹಂಗಿಗೆ ಅದನ್ನು ಒಳಪಡಿಸಿಕೊಳ್ಳುವಷ್ಟು `ವಿಜ್ಞಾನ' ನಮಗಿನ್ನೂ ದೊರೆತಿಲ್ಲ. ಪೂಪಂಚಕ್ಕೆಲ್ಲಾ ಹೇಗೋ ಹಾಗೆಯೇ ಮಳೆಗೂ ಮೂಲಭೂತವಾದ ಕಾರಣ ಅವಿದ್ಯೆ. ಅವಿದ್ಯೆಯನ್ನು ವಿದ್ಯೆಯಿಂದ ವಶಪಡಿಸಿಕೊಳ್ಳಬಹುದೆಂದು ಕೆಲವರು ಹೇಳುತ್ತಾರೆ. ಆದರೆ ಅದು ಶುದ್ಧ ಸಾತ್ತ್ವಿಕರ ಮತ. ಶಠಂ ಪ್ರತಿ ಶಾಠ್ಯಂ. ಅವಿದ್ಯೆಗೆ ಅಜ್ಞಾನ ತಕ್ಕ ಮದ್ದು. ಬರ ಬೇಕಾದ ಮಳೆ ಯಾಕೆ ಬರಲಿಲ್ಲ? ಬರದಿದ್ದರೆ ಸುಮ್ಮನೆ ಬಿಟ್ಟೇವೆ ನಾವು? ಬೆಟ್ಟಕ್ಕೆ ನೀರು ಹೊತ್ತು ಸುರಿದು ಬರಿಸುತ್ತೇವೆ. ಈ ಅಭಿಷೇಕ ಕಾರ್ಯದಲ್ಲಿ ನಮ್ಮ ಚತುರೋಪಾಯವೂ ಅಡಗಿದೆ. ನೀನೂ ಹೀಗೆ ಸುರಿಯಪ್ಪಾ ಎಂದು ಸಾಮದ ಅನುಕರಣ ಗೌರವದಿಂದ ಪ್ರಚೋದನೆ; ನೀನು ಸರಿವಂತ, ಆದರೂ ಬಡವರು ಅಷ್ಟು ದೂರದಿಂದ ಹೊಕ್ಕು ತಂದು ಸುರಿಯುವ ಈ ಅರ್ಘ್ಯರೂಪವಾದ ಅಲ್ಪ