ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೀದಿಯ ಬಸವ

೬೧

ಗಣಿತಶಾಸ್ತ್ರವನ್ನೂ ಕೇರಳದ ಕಥಕಳಿ ತರ್ಕ ಶಾಸ್ತ್ರವನ್ನೂ ಅರಿಯಿಸಬಲ್ಲವೆಂದು ಪ್ರತೀತಿಯೇನೋ ಉಂಟು. ವಿದ್ಯಾರ್ಥಿಗಳು ಇದನ್ನೆಲ್ಲಾದರೂ ನಂಬಿ ತಮ್ಮ ಪಠ್ಯ ಪುಸ್ತಕಗಳನ್ನು ಅಸಡ್ಡೆಮಾಡಿಯಾರು, ಜೋಕೆ. ಕಲೆಯ ಭಾವವನ್ನು ಯಾವುದರ ಮೂಲಕವಾದರೂ ತಿಳಿಸಬಹುದು. ಸೈನ್ಸಿನ ತಿಳಿವಳಿಕೆಗೆ ಮಾತೇ ಬೇಕು. ಇದೊಂದು ಸೈನ್ಸ್‌ನ ಹಿರಿಮೆ. ಹಲಸಿನ ಹಣ್ಣು ಬಹಳ ರುಚಿ ಎಂಬುದನ್ನು ಗೂಳಿಯ ಮುಂದೆ ಎರಡು ಹನುಮಂತನ ಬಸಕೆ ಹಾಕಿ ನಮಗೆ ಮುದದ ಮದವೇರಿದ ಭಾವದಿಂದ ತೋರಿಸಬಹುದು. ಎರಡಾಣೆ ಕೊಟ್ಟು ಅದನ್ನು ಕಿತ್ತಾಡದೆ ತಂದ ಸೌಮ್ಯ ಸಮಾಜಶಾಸ್ತ್ರವನ್ನು ಮಾತಿನಿಂದಲ್ಲದೆ ಮತ್ತಾವ ಬಗೆಯಲ್ಲಿ ಹೇಳೋಣ. ವಿಧಿಯಿಲ್ಲದೆ ನಾನು ತಿರುಗಿ ಈ ರೀತಿ ಮಾತಿಗೆ ಪ್ರಾರಂಭಿಸಿದೆ-

``ಎಲಾ ಸ್ನೇಹಿತ, ನಿನ್ನ ಭಾವ ನನಗೆ ಅರ್ಥವಾಯಿತು. ನನ್ನ ಮಾತು ನಿನಗೆ ತಿಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅರ್ಥಶಾಸ್ತ್ರ ಕಡು ಕಷ್ಟವಾದ ಶಾಸ್ತ್ರ. ಅದು ನನಗೇ ತಿಳಿದಿಲ್ಲ. ಆದರೆ ನಿನಗೆ ಹೇಳುತ್ತಾ ನನಗೆ ಅದು ಅರ್ಥವಾಗಬಹುದು. ಆದುದರಿಂದ ಹೇಳುತ್ತೇನೆ. ಕೇಳುವಷ್ಟು ಕೇಳಿ ತಿಳಿದುಕೊಳ್ಳುವಷ್ಟು ತಿಳಿದುಕೊ. ಈ ಎರಡು ಮೂರು ಕೀತುಗಳು ಮುಗಿಯುವವರೆಗೂ ನಿನಗೂ ಪುರಸತ್ತು, ನನಗೂ ಅಷ್ಟು ಕೆಲಸವಿಲ್ಲ. ದೇವಸ್ಥಾನದ ಪೊಂಗಲು ತೇಂಗೊಳಲೂ ತಪ್ಪಿಹೋಗಬಹುದು, ಹೋದರೆ ಹೋಗಲಿ, ನಿನ್ನ ಹಾಗೆ ಬುದ್ಧಿಗೆ ಉದ್ದೀಪಕರಾದ ಶ್ರೋತೃಗಳು ನನಗೆ ಸಿಕ್ಕವುದು ಅಪೂರ್ವ. ನಿನ್ನಂಥ ಬೃಹದ್ವಸ್ತು, ನನ್ನ ಮನೆಗೆ ಬಂದು ಉಪಹಾರ ಸ್ವೀಕರಿಸಿ ನಾನು ಹೇಳುವುದನ್ನು ಕೇಳುತ್ತಿರುವುದು ಅಲ್ಪ ಭಾಗ್ಯವಿಲ್ಲ. ಆದುದರಿಂದ ಹತ್ತಿರ ಬಾ-ಲಾಲಿಸು ಈ ಅಧ್ಯಾತ್ಮಿಕ ಅರ್ಥಶಾಸ್ತ್ರೋಪನಿಷತ್ತನ್ನು ಎಂಬ ಪೀಠಿಕೆಯೊಡನೆ ಈ ರೀತಿ ಮೊದಲುಮಾಡಿದೆ.

``ಅರ್ಥಶಾಸ್ತ್ರದ ತಳಹದಿಯಲ್ಲಿ ಅಧ್ಯಾತ್ಮಶಾಸ್ತ್ರವಿದೆಯಪ್ಪ ವೃಷಭ ರಾಜ. ರಾಮ ನನ್ನತೆ ದ್ವಿಪಾದವಸ್ತು. ಅದಕ್ಕೆ ದೇಹವೊಂದುಂಟು. ಈ ಆತ್ಮ ಉಂಟೇ ಇಲ್ಲವೇ, ಯಾರಾರಲ್ಲಿ ಎಷ್ಟೆಷ್ಟುಂಟು, ಎಷ್ಟೆಷ್ಟಿಲ್ಲ; ಇದ್ದರೆ ಇದರ ಸ್ವರೂಪವೆಂಥಾದ್ದು, ಚೇಷ್ಟೆ ಎಂಥಾದ್ದು, ಗಾತ್ರವೆಷ್ಟು, ದೇಹದಲ್ಲಿದ್ದರೆ ಯಾವ ಅಂಗದಲ್ಲಿದೆ; ನಿನ್ನಂಥ ಪ್ರಾಣಿಗಳಲ್ಲಿಯೂ ಇದೆಯೇ ಇಲ್ಲವೇ; ಇದು ಒಂದೇ ಅನೇಕವೇ, ವಿಭುವೇ ಅಲ್ಲವೇ, ಪ್ರಭುವೇ ಅಲ್ಲವೇ, ಈ ವಿಚಾರದಲ್ಲಿ ಮನುಜಕುಲಕ್ಕೆ ಬಹು ಕುತೂಹಲ. ಉಸಿರಾಡುವಿಕೆಯಿಂದ ನಾವು ಹೇಗೆ ಒಂದು ಪ್ರಾಣಿಯನ್ನು ಜೀವಂತವೆಂದು ತಿಳಿದುಕೊಳ್ಳುತ್ತೇವೆಯೋ ಹಾಗೆಯೇ ಆಸೆಬೇಸರಗಳ