ಬೀದಿಯ ಬಸವ
೬೩
ಮುಂತಾದವುಗಳಿಗೆ ಕಿಬ್ಬೊಟ್ಟೆ ಕಟ್ಟಿಹೋಗಿ ಸರಿಯಾಗಿ ಉಸಿರಾಡುತ್ತಿಲ್ಲ, ನಮ್ಮ ದೇಶಕ್ಕೆ ಒಂದು ತೆರದ ಕ್ಷಯ ಬಂದಿದೆಯೋ ಎಂಬ ಭಯ, ರಷ್ಯವೇನೋ ಒಂದು ತೆರದ ಕಫದಿಂದ ನರಳಿ ಈಗ ಚೇತರಿಸಿಕೊಳ್ಳುತ್ತಿದೆ. ಹೀಗೆ ಈ ಕೋಶ ನಿರೋಗವಾಗಿ ತನ್ನಷ್ಟಕ್ಕೆ ತಾನು ನಡೆದುಕೊಳ್ಳುವವರೆಗೂ ಯಾರಿಗೂ ನೆಮ್ಮದಿಯಿಲ್ಲ. ಎಲ್ಲರಿಗೂ ಊನವಾಗಿರುವ ಈ ಅಂಗದ ಮೇಲೆಯೇ ಗಮನವಾಗಿ ರೋಗಿಷ್ಠರ ಹಾಹಾಕಾರ, ವೈದ್ಯರ ಮದ್ದಿನ ಗದ್ದಲ ಹೆಚ್ಚಾಗಿಬಿಟ್ಟಿದೆ. ಈ ಅಂಗ ನಿನಗಿಲ್ಲ-ಅದಕ್ಕೆ ಸಹಜವಾದ ವ್ಯಾಧಿವಿಶೇಷಗಳೂ ನಿನಗಿಲ್ಲ. ರಾಮನ ಅರ್ಥಕೋಶವೂ ದುರ್ಬಲವಾದದ್ದೇ-ಆತನ ಆತ್ಮಸರಿಯಾಗಿ ಶ್ವಾಸವಾಡುತ್ತಿಲ್ಲ. ಆ ನಾಲ್ವರು ಐವರದು ಅವನದಕ್ಕಿಂತ ದುರ್ಬಲ. ಈ ಹಲಸಿನ ಹಣ್ಣಿನ ವಿಷಯದಲ್ಲಿ ಆತನಾಸೆಯುಸಿರು ಕಟ್ಟಿಹೋಗಿತ್ತು. ಇದು ಕುಂಭಕದ ಸ್ಥಿತಿ. ಯೋಗಿಗಳಿಗೆ ವಿನಾ ಉಳಿದವರು ಎಷ್ಟುಹೊತ್ತು ಪ್ರಾಣಾಯಾಮ ಮಾಡಿಯಾರು? ನನ್ನ ಬಳಿ ಇದ್ದ ಆ ಎರಡು ಆಣೆ ನಿಶ್ವಾಸ ಕ್ರಿಯೆಯನ್ನು ನಡೆಯಿಸಿ ಆತನಿಗೆ ಬಹು ಅಪ್ಯಾಯನವನ್ನು ಕೊಟ್ಟಿತಣ್ಣ. ದುಡ್ಡು ಗಾಳಿಯ ಹಾಗೆ ನಮ್ಮ ಅರ್ಥಕೋಶದ ಮೂಲಕ ಸಂಚರಿಸದೆ ನಮಗೆ ಆತ್ಮಾರೋಗ್ಯವಿಲ್ಲಪ್ಪ. ನಾನು ಹೇಳಿದ್ದೇನಾದರೂ ತಿಳಿಯಿತೆ ಗೂಳಿ. ಎಂದೆ ನಾನು.
ನನಗೆ ಈ ವೇಳೆಗೆ ಸುಸ್ತಾಗಿತ್ತು. ಈಜುವುದಕ್ಕೆ ಆಗತಾನೆ, ಕಲಿತವರು. ನೀರಿಗೆ ಬಿದ್ದು ಕೈಕಾಲು ಬಡಿದು ಸದ್ಯ ದಡಕ್ಕೆ ಬಂದು ಸೇರಿಯೇವೇ ಎನ್ನುವ ಸ್ಥಿತಿಗೆ ಬಂದಿದ್ದೆ ನಾನು ಈ ಅರ್ಥಶಾಸ್ತ್ರ ಸರೋವರ ವ್ಯಾಯಾಮದಿಂದ. ಇನ್ನು ಗೂಳಿಗುಳಿದಿದ್ದುದು ಎರಡೇ ಕೀತು; ನನ್ನ ಬಳಿಯಲ್ಲಿದ್ದುದೊಂದು, ಅದರ ಹತ್ತಿರದಲ್ಲಿದ್ದುದೊಂದು. ನನ್ನ ಮಾತಿಗಿಂತ ನನ್ನ ಕೈಚಳಕ ಅದಕ್ಕೆ ಹಿತವಾದಂತೆ ತೋರಿತು. ಆ ಒಂದು ಚೂರನ್ನು ಅದು ಬಾಯಲ್ಲಿ ಕಚ್ಚಿಕೊಂಡು ಅಗಿಯುತ್ತಾ ನನ್ನಲ್ಲಿದ್ದ ಮತ್ತೊಂದು ಚೂರನ್ನು ನೋಡಿ ಮುಂಗಾಲೆತ್ತಿ ನೆಲವನ್ನು ಕೆರೆದು ಗೋಣನ್ನಲ್ಲಾಡಿಸಿತು. ನನ್ನ ಕೈಬೆರಳುಗಳ ಚಮತ್ಕಾರಕ್ಕೆ ಅದು ಮೋಹಗೊಂಡಿರಬೇಕು. ಅದು ಬಾಲ ಬೀಸಿಕೊಂಡಿದ್ದನ್ನು ನೋಡಿದರೆ ಅದಕ್ಕೆ ನೊಣದ ಬಾಧೆ ಹೆಚ್ಚಾಗಿ ಆಗಿರಬೇಕೆಂದು ತೋರುತ್ತದೆ. ಮುಂಗಾಲು ಕೆರೆತವನ್ನು ನೋಡಿದರೆ ``ನಿನ್ನಂತೆ ಕೈ ನನಗಿಲ್ಲವಲ್ಲಾ ಎಂಬ ವ್ಯಥೆ ದ್ಯೋತವಾಗುತ್ತದೆ. ``ನಾನೇನು ಮಾಡಲಪ್ಪಾ; ಆಗಲೇ ಹೇಳಿದ ಹಾಗೆ ಇದು ನಿನ್ನ ಪೂರ್ವಾರ್ಜಿತ ಕರ್ಮ. ಈ ನೆಲಕ್ಕೆ ನೀನು ಮುಂಚೆ ಬಂದೆಯೋ ನಾನು ಮುಂಚೆ ಬಂದೆನೋ ಗೊತ್ತಿಲ್ಲ. ನನಗೂ ನಿನ್ನ ಹಾಗೆ ಜೀವಂತನಾಗಿರಬೇಕೆಂದಾಸೆ. ಆದರೆ ಹಿಂದೆ