ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧

ಈಜಲು ಮರದ ಕೆಳೆಗೆ

ಒಂದು ಕ್ಷಣದಲ್ಲಿ ಇದ್ದಹಾಗೆ ಯಾವುದೂ ಮತ್ತೊಂದು ಕ್ಷಣದಲ್ಲಿ ಇಲ್ಲ. ಇಷ್ಟನ್ನು ತಿಳಿದುಕೊಳ್ಳುವುದಕ್ಕಾಗಿ ಗೌತಮಬುದ್ಧ ಎಷ್ಟು ಕಾಲ, ಎಷ್ಟು ಕಷ್ಟಪಟ್ಟ. ಅವನದೇನು ತಪ್ಪು. ಆತ ಆಶ್ರಯಿಸಿದ ಮರ ಅಷ್ಟು ಮೊದ್ದು. ಆದರೆ ಈ ಕ್ಷಣಿಕತ್ವವಾದ ನನ್ನ ರಕ್ತಗತವಾಗಿದೆ. ಜಗತ್ತೇ ಬರಿ ಭ್ರಮೆ. ಅದರ ಭ್ರಮಣ ಮಾತ್ರ ಸತ್ಯ. ನೀವು ಜಾಗ್ರದವಸ್ಥೆಯಲ್ಲಿ ಯಾವುದನ್ನು ಋತ ಎನ್ನುತ್ತೀರೋ ಅದೇ ಮಾಯೆ. ನೋಡು, ಈ ಸುಡುವ ಸೂರ್ಯನಿದ್ದಾನೆ ಇಲ್ಲಿ, ಈ ಮಾಯೆಗೆ ಈತನೇ ಮಾಯಾವಿ. ಮಾಯೆ ಎಂದರೆ ಏನು ನಿನಗೆ ಗೊತ್ತೆ?

`ಹಳ್ಳಕ್ಕೆ ಬಿದ್ದವನನ್ನು ಕಲ್ಲಿನಿಂದ ಹೊಡೆ' ಎಂಬ ಗಾದೆಗೆ ಅನುಸಾರವಾಗಿ, ಕ್ಷುಧ್ರಾಶ್ರಾಂತವಾದ ನನ್ನ ಬುದ್ಧಿಯ ಮೇಲೆ ಈಚಲ ಮರ ಇಂಥ ಗಾಢವಾದ ಪ್ರಶ್ನೆಯನ್ನು ಎಸೆಯಬೇಕೆ? ಆದರೆ ಅದು ಮ್ಲೇಚ್ಛತರು. ಕರುಣೆಯನ್ನು ಬೇಡದು-ಕರುಣೆಯನ್ನು ತೋರದು. ನನಗೆ ಗೊತ್ತಿಲ್ಲವೆಂದು ನಾನು ಶರಣಾಗತನಾದೆ.

``ಪಾಪ, ಪಾಪ, ಮಾಯೆಯ ಸ್ವರೂಪವನ್ನು ತಿಳಿದುಕೊಳ್ಳಬೇಕಾದರೆ ಕಷ್ಟ. ಈಗ ಸ್ವಲ್ಪ ಎದ್ದು ನಿಂತುಕೋ-ಮೊಳಕಾಲುಗಳ ಸಂದಿಯಲ್ಲಿ ತಲೆಯನ್ನು ಹಾಕು-ಸುತ್ತ ನೋಡು. ಜಗತ್ತು ಹೇಗೆ ಕಾಣುತ್ತದೆ ಹೇಳು. ಅನೇಕ ಪ್ರಾಣಿಗಳಿಗೆ ಜಗದ ಸತ್ಯ ಈ ರೀತಿ ತೋರುತ್ತದೆ. ನಿನಗೆ ಈ ದೃಷ್ಟಿ ಮಾಯೆ. ಹೀಗೆ ಮಾಯೆ ಪರಸ್ಪರ ದೃಷ್ಟಿಭೇದದಿಂದ ಉತ್ಪನ್ನವಾದ ಸತ್ಯಪರಿಸ್ಥಿತಿ. ನಿನಗೆ ಗೊತ್ತಿರುವುದು ಏಳು ಬಣ್ಣ. ಅದರೀಚೆ ಆಚೆ ಎಷ್ಟೋ ಬಣ್ಣಗಳಿವೆ. ಅದನ್ನು ಕಾಣಬಲ್ಲವರಿಗೆ ಜಗತ್ತು ಬೇರೆ ತರವಾಗಿ ತೋರುತ್ತದೆ. ಎಷ್ಟು ಪ್ರಾಣಗಳಿವೆಯೋ ಅಷ್ಟು ಲೋಕಗಳು. ಒಂದರದು ಇನ್ನೊಂದಕ್ಕೆ ಭ್ರಮೆ. ಈಗ ಮೇಲೆ ಈ ಸೂರ್ಯನನ್ನೇ ನೋಡು. ಇಲ್ಲಿ, ಸುಡುತ್ತಾ ಬೆಳ್ಳಗೆ ನೋಡುವುದಕ್ಕೆ ಅಸಾಧ್ಯನಾಗಿದ್ದಾನೆ. ಅಲ್ಲೋ? ಕೆಂಪಗೆ ತಣ್ಣಗೆ ಮೂಡುತ್ತಾ ಇದ್ದಾನೆ. ಅಲ್ಲಿರುವವರ ನಡೆವಳಿಕೆಗೂ ಇಲ್ಲಿರುವವರ ನಡೆವಳಿಕೆಗೂ ಅರ್ಥಾರ್ಥ ಸಂಬಂಧವಿಲ್ಲ. ಮೈಮುರಿತ, ಆಕಳಿಕೆ, ಕಾಫಿ-ರೈಲು, ದೇವಸ್ಥಾನ, ಕೆರೆ, ಗಂಟೆ, ಸ್ಕೂಲು, ಸಂಧ್ಯಾವಂದನೆ, ಮಿಲ್ಲು, ಮಂಜಿನ ಹನಿ, ಹಕ್ಕಿಯ ಚಿಲಿಪಿಲಿ ಇತ್ಯಾದಿ, ಇತ್ಯಾದಿ ಹುಚ್ಚಾಟಗಳು ಅಲ್ಲಿ. ಅದರಾಚೆ ಏನೂ ಇಲ್ಲ-ನಿದ್ರೆ. ಇಲ್ಲಿನವರಂತೆ ಅಲ್ಲಿನವರು, ಅಲ್ಲಿನವರಂತೆ ಇಲ್ಲಿನವರು ನಡೆದರೋ?

ಈಗ ಈಚಲು ಮರ ಗಹಗಹಿಸಿ ನಕ್ಕಿತು. ಈ ಎರಡು ಸತ್ಯಸ್ಥಿತಿಗಳ ಬೆರಕೆಯೇ ಹುಚ್ಚು ಎನ್ನಿಸಿಕೊಳ್ಳುವ ಸ್ಥಿತಿಯೇ! ನಾನು ಬೆರಗಾದೆ. ಈಚಲು ಮರದ ಗರಿ ಪುನಃ ಸದ್ದುಮಾಡತೊಡಗಿತು.