ಪುಟ:Rangammana Vathara.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

8

ಸೇತುವೆ

ಪಕ್ಕದ ಮನೆಯಾಕೆ ಬಂದು, ಅಳುತ್ತಿದ್ದ ಎಳೆದು ಎಬ್ಬರು ಮಕ್ಕಳನ್ನು ಎಳೆದು

ಕೊಂಡು ತನ್ನ ಮನೆಗೆ ಹೋದಳು. ಪುಟ್ಟು ಮಿನಾಕ್ಷಮ್ಮನ ಬಳಿ ಇದ್ದ ಪಾಪನನ್ನೆತ್ತಿ ಕೊಂಡು ಓಣಿಯಲ್ಲಿ ನಿಂತ.

ರಂಗಮ್ಮ ಮನೆಯೊಳಕ್ಕೆ ಕಾಲಿಟ್ಟು ಆಡುಗೆಯ ಭಾಗದತ್ತ ನೋಡಿದರು. ಒಲೆ

ಹೊಗೆಯಾಡುತ್ತಿರಲಿಲ್ಲ. ಎದುರುಗಡೆಯ ಮೀನಾಕ್ಷಮ್ಮನಿಗೆ ಹೇಳಿದರು:

"ಒಂದಿಷ್ಟು ಕೆಂಡ ಎತ್ಕೊಂದಡ್ಬಾ ತಾಯಿ."

ಸಾವಿನ ಮನೆಯ ಮುಂದೆ ಕೆಂಡಗಳು ಹೊಗೆಯ ಹೊದಿಕೆಯ ಮರೆಯಲ್ಲಿ

ಮರುಗಿದುವು.

ಶ್ರೀನಿವಾಸಶೆಟ್ಟರೆ ಅಂಗಡಿಯಲ್ಲಿ ಲೆಕ್ಕ ಬರೆಯುವ ಗುಮಾಸ್ತೆಯಾದ ಸುಬ್ಬು

ಕೃಷ್ಣಯ್ಯ ತನ್ನ ಹೆಂಡತಿ ಮೀನಾಕ್ಷಮ್ಮನ ಸಂದೇಶ ತಲಪಿದೊಡನೆ ಹೊರಟು ಬಂದ. ಹಿಂದಿನ ರಾತ್ರೆಯೇ ಮೀನಾಕ್ಷಮ್ಮ "ಪಾಪ! ಕಾಹಿಲೆ ಜಾಸ್ತಿಯಾಗಿದೆ. ಇವತ್ತು ಬೆಳ ಗಾಗೋದು ಕಷ್ಟ" ಎಂದಿದ್ದಳು. ಬೆಳಗಾಗಿತ್ತು. ಬೆಳಗಾದ ಮೇಲೆಯೇ ಸತ್ತಿದ್ದಳು ನಾರಾ ಯಣಿ. ಸತ್ತವಳಾಗಲೀ ಉಳಿದವರುವ ಆಕೆಯ ಸಂಸಾರವಾಗಲೀ ಸುಬ್ಬುಕೃಷ್ಣಯ್ಯನಿಗೇನೂ ಆತ್ಮೀಯವಾಗಿರಲಿಲ್ಲ. ಆದರೂ ಹೆಂಡತಿ ಕರೆದಳೆಂದು ಒಡನೆಯೆ ಅವನು ಹೊರಟಿದ್ದ.

ವಠಾರದಲ್ಲಿ ಆತನನ್ನು ಕಂಡೊಡನೆ ರಂಗಮ್ಮ ಹೇಳಿದರು:

"ಬಂದೆಯೇನಪ್ಪಾ, ಬಾ. ಯಾರೂ ಇಲ್ವಲ್ಲಾಂತಿದ್ದೆ, ಬಾ."

ಸುಬ್ಬುಕೃಷ್ಣಯ್ಯ ನೇರವಾಗಿ ತನ್ನ ಮನೆಯೊಳಕ್ಕೆ ಹೋಗಿ ಟೋಪಿಯನ್ನು

ಗೂಟದ ಮೇಲೆ ತೂಗಹಾಕಿದ. ಆಗ ಏನಾದರೂ ಕೆಲಸ ಮಾಡಲು ಅಲ್ಲಿದ್ದ ಗಂಡಸು ತನ್ನ ಪತಿಯೊಬ್ಬನೇ ಎಂದು, ಮೀನಾಕ್ಷಮ್ಮನಿಗೆ ಆ ಸನ್ನಿವೇಶದಲ್ಲೂ ತುಸು ಹೆಮ್ಮೆ.

ಆತ ಹೇಳಿದ:

"ಎಷ್ಟೊತ್ತಾಯ್ತು?"

"ಹನ್ನೊಂದಾಗಿತ್ತೊಂತ ಕಾಣುತ್ತೆ."

"ಈಗೇನ್ಮಾಡ್ಬೇಕೂಂತೀಯಾ?"

"ರಂಗಮ್ನೋರ್ನ ಕೇಳಿ."

ಅಷ್ಟರಲ್ಲಿ ಅಲ್ಲಿಗೇ ನಡೆದು ಬಂದ ರಂಗಮ್ಮ ಮೆಲುದನಿಯಲ್ಲಿ ಸಮಾಲೋಚನೆ

ನಡೆಸಿದರು.

ವಠಾರಕ್ಕೆ ಗಂಡಸರು ಹಿಂತಿರುಗುತ್ತಿದ್ದುದು ಸಂಜೆ ಐದು ಗಂಟೆಯ ಬಳಿಕ.

ಹೇಳಿ ಕಳುಹಿಸುವಂಥ ಸಂಬಂಧಿಕರು ಯಾರೂ ಸತ್ತ ಮನೆಯವರಿಗೆ ಇರಲಿಲ್ಲ, ಕತ್ತ ಲಾಗುವುದರೊಳಗೇ ಶವಸಂಸ್ಕಾರ ಸಾಧ್ಯವಿತ್ತು. ಸಿದ್ಧತೆಯ ಸಣ್ಣ ಪುಟ್ತ ವಿವರಗಳನ್ನು ನಾರಾಯಣಿಯ ಗಂಡನ ಸೊರಗಿದ ಜೀವ ಬಾಗಿಲಿಗೆ ಒರಗಿ ನಿಂತಿತ್ತು. ರಂಗಮ್ಮ ಗ್ಟ್ತಿ ಮನಸ್ಸು ಮಾಡಿ ಆತನನ್ನು ಉದ್ದೇಶಿಸಿ ಕೇಳಿದರು: