ಪುಟ:Rangammana Vathara.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

"ಮಲ್ಲೇಶ್ವರ, ಶ್ರೀರಾಮಪುರ ರಂಗಮ್ಮನ ವಠಾರದ ಮಾಲಿಕರಾದ
ರಂಗಮ್ಮನವರಿಗೇ - ಆಮೇಲೆ ನಿಮ್ಮ ಹೆಸರು ಹಾಕಿ - ನಾದ ನಾನು
ಬರೆದುಕೊಡುವುದೇನೆಂದರೆ,"

"ಈ ದಿವಸ ನಾನು ಮೊಬಲಗು ರೂಪಾಯಿ ಹತ್ತೊಂಭತ್ತನ್ನು ಈ
ವಠಾರದ ಮನೆಯ - ನಂಬರು ಹದಿನಾರು ಐವತ್ತು - ಒಂದು ತಿಂಗಳ
ಬಾಡಿಗೆಯಾಗಿ ಪೂರ್ತ ಪಾವತಿ ಮಾಡಿದ್ದೇನೆ...ಬರೆದಿರೋ? ...ಮುಂದೆ
ಪ್ರತಿ ತಿಂಗಳೂ ಮೊದಲ್ನೇ ತಾರೀಖಿಗೆ - ಮೊದಲ್ನೇ ತಾರೀಖಿಗೆ ಅಂತ್ಲೇ
ಹಾಕಿ, ಅವಧಿಯೇನೋ ಆಮೇಲೂ ಐದು ದಿನ ಇರುತ್ತೆ - ತಾರೀಖಿಗೆ
ಹತ್ತೊಂಭತ್ತು ರೂಪಾಯಿ ಬಾಡಿಗೆ ತಪ್ಪದೇ ಸಲ್ಲಿಸುವುದಾಗಿ ಈ ಮೂಲಕ
ಬರೆದುಕೊಡುತ್ತೇನೆ. - ಈ ಸಲ ಮಾತ್ರ ಮೊದಲ್ನೇ ತಾರೀಖಿಗೆ ನೀವು
ಅರ್ಧ ತಿಂಗಳಿಂದು ಕೊಟ್ಟರಾಯ್ತು... ಅದನ್ನ ಬರೀಬೇಡಿ. ಅದೇನೇನು
ಹೇಳಿದ್ನೋ ಎಲ್ಲಿ ಸ್ವಲ್ಪ ಓದಿ."

*

"ಹೇಳೀಮ್ಮಾ ಇನ್ನೊಂದು ಹಾಡು"

ಚಂಪಾ ಮುಗುಳುನಕ್ಕು ಆರಂಭಿಸಿದಳು:

"ಕಾಲ ಹರಣ ಮೇಲರಾ ಹರೇ ಸೀತಾರಾಮ..."


ದೂರದ ನಕ್ಷತ್ರ

"ನಿಮ್ಮ ಹತ್ತಿರ ಆ ವಿಷಯ ಹೇಳದೇ ಇರೋದೇ ಮೇಲು
ದೂರದ ನಕ್ಷತ್ರ ಅನಿಸುತ್ತೆ. ಆದರೆ ಹಾಗೆ ಮಡೋದು ತಪ್ಪಾಗುತ್ತೇನೋ. ಜಯದೇವ,
ದೂರದ ನಕ್ಷತ್ರ ನನ್ನ ಮಕ್ಕಳು ಯಾರೂ ಉಪಾಧ್ಯಾಯರಾಗಿ ಸಂಕಟ ಅನುಭವಿಸ್ಬಾರ್ದು
ದೂರದ ನಕ್ಷತ್ರ ಅನ್ನೋದು ನನ್ನ ಅಪೇಕ್ಷೆ."

ಉಗುಳು ಗಂಟಲಲ್ಲಿ ತೊಡಕಾಗಿ ಜಯದೇವನ ಮುಖ ಬಾಡಿತು.

*

ಮೂರನೆಯ ತರಗತಿ ತಲೆನೋವಿಗೆ ಕಾರಣವಾಯಿತು. ಕರಿ
ಹಲಗೆಯ ಮೇಲೆ ಯಾರೋ ಆತನ ವ್ಯಂಗ್ಯಚಿತ್ರ ಬರೆದಿದ್ದರು.
ಜಯದೇವ ಮುಗುಳ್ನಗುತ್ತಲೆ ಅದನ್ನು ಒರೆಸಿದ.

ನವೋದಯ

ಮೋಟಾರಿನಲ್ಲಿ ಸೀಟಿಗೋಸ್ಕರ ಹಿಂದೆ ನಡೆಸಿದ್ದ ಪರದಾಟದ ನೆನಪಾಗಿ ಜಯದೇವ ಆಳನ್ನು ಅವಸರಪಡಿಸುತ್ತ ಹೇಳಿದ:

"ಬೇಗ್ಬೇನೆ ಎತ್ತ್ಕೊಂಡು ನಡೀಪ್ಪಾ"

"ಇನ್ನೂ ಬಸ್ಸು ಬಂದಿಲ್ಲಾ..."

"ಇಲ್ಲಿಂದಲೇ ಅಲ್ಲ್ವೇನಯ್ಯಾ ಬಸ್ಸು ಹೊರಡೋದು?"

"ನೀವ್ಹೇಳೋದು ಯಾವತ್ತಿನ್ಮಾತು? ಈಗಿರೋದು ಸರಕಾರದ ಬಸ್ಸು. ಬೆಳಗ್ಗಿನ ಜಾವ ದ್ಯಾವನೂರಿನಿಂದ ಓಂಟು ಇಲ್ಲಿಗ್ಬತ್ತದೆ. "

"ಹಾಗೇನು?"

...ಯಾರೋ ಬಂದರು:

"ನಮಸ್ಕಾರ ಬೆಂಗಳೂರಿಂದ ಬರೋಣವಾಯ್ತೆ?"