ಪುಟ:Rangammana Vathara.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದ್ದುವು. ಜತೆಯಲ್ಲಿ ಅಂಚೆ ಚೀಟಿ ಇಟ್ಟಿದ್ದರೂ ಉತ್ತರ ಬಂದಿರಲಿಲ್ಲ. ಸ್ವೀಕೄತವಾಗಿರ ಬಹುದು; ಯಾವುದಾದರೊಂದು ವಾರಪತ್ರಿಕೆ ತೆರೆದೊಡನೆ ತನ್ನ ಕತೆಯೂ ಹೆಸರೂ ಕಣ್ಣಿಗೆ ಬೀಳಬಹುದು_ಎಂದು ಜಯರಾಮು ಆಸೆ ಕಟ್ಟಿಕೊಂಡಿದ್ದ. ಅದು ಆ ಏರಡು ಪತ್ರಿಕೆಗಳೂ ಹೊರಬೀಳುವ ದಿನ. ಬೇರೆ ವಾರವಾಗಿದ್ದರೆ ಜಯರಾಮು ಇಷ್ಟು ಹೊತ್ತಿಗೆ ಅಂಗಡಿ ಬೀದಿಯಲ್ಲಾಗಲೀ ವಾಚನಾಲಯದಲ್ಲಾಗಲೀ ಇರುತ್ತಿದ್ದ. ಆದರೆ ಈ ದಿನ ವಾರಪತ್ರಿಕೆಗಳನ್ನು ತೆರೆದು ನೋಡುವುದರಲ್ಲೂ ಆತನಿಗೆ ಆಸಿಕ್ತಿ ಇರಲಿಲ್ಲ.

ಜನರಿರುವ ಬೀದಿ ಬಿಟ್ಟು ಜಯರಾಮು ಕಾಲು ಹಾದಿ ಹಿಡಿದ. ಯಾರೂ ಜನ ರಿಲ್ಲದ ಜಾಗಕ್ಕೆ ದೂರ ಒಬ್ಬನೇ ಹೋಗಬೇಕೆಂದು ಅವನಿಗೆ ಬಯಕೆಯಾಯಿತು. ಯಾವುದೋ ಶಕ್ತಿ ನಗುನಗುತ್ತ ಒರಟು ಕೈಗಳಿಂದ ತನ್ನ ಕತ್ತನ್ನು ಹಿಸುಕಿ ಉಸಿರು ಕಟ್ಟಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಹೄದಯ ಭಾರವಾಗಿ ಮೈ ಕಾವೇರಿದಂತೆ ತೋರಿತು.

...ರೈಲು ಸೇತುವೆಯನ್ನು ತಲುಪಿದ ಜಯರಾಮು, ಮಣ್ಣು ದಿಬ್ಬಗಳನ್ನು ಹಾದು ಕೆಳಕ್ಕಿಳಿದ. ಪಾದದ ಬಳಿ ಸ್ವಲ್ಪ ಹರಿದಿದ್ದ ಪಾಯಜಾಮ, ಮಾಸಿದ ಅಂಗಿ, ಎಣ್ಣೆ ಬಾಚಣಿಗೆಗಳ ಸ್ಪರ್ಶವಿಲ್ಲದೆ ಇದ್ದರೂ ಓರಣವಾಗಿದ್ದ ಕ್ರಾಪು......ಕಂಬಿಗೆ ಅಡ್ಡವಾಗಿ ಹಾಕಿದ ಹಲಿಗೆಗಳು ಅನಂತವಾಗಿದ್ದವು. ಕಲ್ಲು ತಾಕಿ ಒಮ್ಮೊಮ್ಮೆ ನೋವಾದರೂ, ಹಲಿಗೆಯಿಂದ ಹಲಿಗೆಗೆ ಹೆಜ್ಜೆ ಇಡುತ್ತ ಯಶವಂತಪುರದತ್ತ ಜಯ ರಾಮು ನಡೆದ.

ನಿರ್ಜನವಾಗಿದ್ದ ಮಲ್ಲೇಶ್ವರದ ರೈಲು ನಿಲ್ದಾಣ ಹಿಂದೆ ಬಿತ್ತು. ಆ ಬಳಿಕ ರೈಲು ಗೇಟು, ಕಾವಲು ಮನೆ, ಒಂಟಿ ಮರ. ಬರಲಿದ್ದ ಕಡು ಬೇಸಗೆಗೆ ಆಗಲೆ ಹೆದರಿ ನೆಲದ ಮೈ ಸುಕ್ಕುಗಟ್ಟಿತ್ತು. ಸಂಜೆಯಾಗುತ್ತ ಬಂದಿದ್ದರೂ ವೄದ್ದ ಸೂರ್ಯ ಉಗ್ರ ನಾಗಿಯೇ ಇದ್ದ. ಜಯರಾಮು ಅಲ್ಲೇ ಎಡಕ್ಕೆ ಇಳಿದು ಕೆರೆಯನ್ನು ಬಳಸಿಕೊಂಡು ಎದುರಿಗಿದ್ದ ಬೆಟ್ಟವನ್ನೇರಿದ. ಎತ್ತರದಲ್ಲಿ ಬಂಡೆಗಲ್ಲುಗಳಿದ್ದುವು. ಜಯರಾಮು ತನ್ನ ಪರಿಚಯದ ಕಲ್ಲಿಗೆ ಒರಗಿ ಕುಳಿತ.

ವಾರಕೋಮ್ಮೆಯೋ ಎರಡು ವಾರಗಳಿಗೊಮ್ಮೆಯೋ ಜಯರಾಮು ಅಲ್ಲಿಗೆ ಬರುವುದಿತ್ತು. ಅದು ಮನಸ್ಸು ತುಂಬಾ ಉಲ್ಲಾಸವಾಗಿದ್ದಾಗ, ಇಲ್ಲಿವೆ ಬಹಳ ಪ್ರಕ್ಷುಬ್ಧಗೊಂಡಿದ್ದಾಗ. ಮನಸ್ಸು ಸಂತೋಷದಿಂದ ಚಿಲಿಪಿಲಿಗುಡುತ್ತಿದ್ದ ದಿನ, ಬಾಡಿದ್ದರೂ ಸರಿಯೆ ಚಿಗುರಿದ್ದರೂ ಸರಿಯೆ ನಿಸರ್ಗ ಸುಂದರವಾಗಿ ಕಾಣಿಸಿ ಆತ ನನ್ನು ತನ್ಮಯಗೊಳಿಸುತ್ತಿತ್ತು. ಮನುಷ್ಯನನ್ನು ಮಣ್ಣಿಗೆ ಬಿಗಿದಿರುವ ಅಗೋಚರ ತಂತುವಿನ ವಿಷಯ ಆತ ವಿಸ್ಮಯಗೊಳ್ಳುತ್ತಿದ್ದ. ಕರಿಯ ಬಂಡೆಗಳು ಆತನಿಗೆ ಪ್ರಿಯ ವಾಗಿ ತೋರುತ್ತಿದ್ದುವು. ಬೆರಳುಗಳಿಂದ ಅವುಗಳನ್ನು ಮುಟ್ಟಿ ನೋಡುತ್ತಿದ್ದ. ಮನಸ್ಸು ಬೇಸರವಾಗಿದ್ದಾಗ, ಸುತ್ತಮುತ್ತಲಿನ ಬರಿಯ ಶೂನ್ಯವೂ ಒಂದು ಬಗೆಯ

ನೆಮ್ಮದಿಯನ್ನು ಆತನಿಗೆ ದೊರಕಿಸುತ್ತಿತ್ತು.