೨೧
ನೆರೆವೆನದೆಂದೊ ನಿಮ್ಮನತಿನೇಹದೆ ಪೇಳೆಲೆ ಹಂಪೆಯಾಳ್ದನೇ || ೪ ||
ಕರೆವುದದೆಂದು ಕಾಲ್ವಿಡಿಸಿಕೊಳ್ವುದದೆಂದು ದಯಾಕಟಾಕ್ಷದಿಂ ಪೊರೆವುದದೆಂದು ಮೆಲ್ನುಡಿಗಳಿಂ ಮದವೇರೆಪುದೆಂದು ಸೋಂಕಿನಿಂ ದೊರೆವುದದೆಂದು ಸಂತಸದೆ ಪೆರ್ಚಿಪುದೆಂದಮರ್ದಪ್ಪಿನೊಳ್ ಕರಂ ಕರಗಿಪುದೆನ್ನನೆಂದೊಸೆದು ನೀಂ ಕೃಪೆಯಿಂದೆಲೆ ಹಂಪೆಯಾಳ್ದನೇ || ೫ ||
ತೆರೆಮಸಗಲ್ ಸುಖಾಶ್ರುವಿದಿರೇರುತಿರಲ್ ಪುಳಕಂ ಬೆಮರ್ ಕರಂ ಪರಿಯಿಡೆ ಗದ್ಗದಂ ಸುಳಿಗೊಳುತ್ತಿರೆ ಕಂಪನಮುರ್ಕಿ ಲೀಲೆಯೊ- ತ್ತರಿಸುತಿರಲ್ ನವೀನ ನಿಜಭಕ್ತಿರತಂಗಿಣಿ ಮೀರುತುಬ್ಬರಂ- ಬರಿಯುತುಮೆನ್ನ ಮೇಲೆ ಮಡುಗಟ್ಟುವುದೆಂದೆಲೆ ಹಂಪೆಯಾಳ್ದನೇ || ೬ ||
ನಡೆತಂದೆನ್ನಯೆ೧ ಕಣ್ಗಳಲ್ಲಿರು ವಿರೂಪಾಕ್ಷಾ ವಿರೂಪಾಕ್ಷ ನೀಂ ಬಿಡದಂತೆನ್ನಯೆ೧ ಜಿಹ್ವೆಯಲ್ಲಿರು ವಿರೂಪಾಕ್ಷಾ ವಿರೂಪಾಕ್ಷ ನೀಂ ಎಡೆಗೊಂಡೆನ್ನಯೆ೧ ಚಿತ್ತದಲ್ಲಿರು ವಿರೂಪಾಕ್ಷಾ ವಿರೂಪಾಕ್ಷ ನೀಂ ೨ಇಡಿ೨ದಂತೆನ್ನೊಳೆ೩ ಕೂಡಿ ನಿಲ್ಲೆಲೆ ವಿರೂಪಾಕ್ಷಾ ವಿರೂಪಾಕ್ಷನೇ || ೭ ||
ನೋಡದ ಕಣ್ಗಳೇಕೆ ಸಲೆ ಕೇಳದ ಕರ್ಣಮದೇಕೆ ಭಕ್ತಿಯಿಂ ಪಾಡದ ಬಾಯದೇಕೆ ಪೆಸರ್ಗೊಳ್ಳದ ಜಿಹ್ವೆಯದೇಕೆ ಪುಜೆಯಂ ಮಾಡದ ಕೈಗಳೇಕೆ ನೆರೆ ಸೋಂಕದ ದೇಹಮದೇಕೆ ಕೂಡಿಯ- ಳ್ಕಾಡದ ಚಿತ್ತವೇಕೆನಗೆ ಹಂಪೆಯಲಿಂಗವೆ ನಿಮ್ಮೊಳಳ್ಕರೆಂ || ೮ ||
ಎಂದುಂ ನಿಮ್ಮೊಳೆಲೇ ಮಹೇಶನೆ ಮನಂ ಬಂದಂತೆ ಚಿಂತಿಪ್ಪ ಕಣ್- ಬಂದಂತೀಕ್ಷಿಪ ಜಿಹ್ವೆ ಬಂದ ತೆರದಿಂ ಬಣ್ಣಿಪ್ಪ ಮೈಯ್ಯುರ್ಬಿನಿಂ ಬಂದಂತಾಂ ಪುಳಕಿಪ್ಪ ಕೈಗಳೆನಿತುಂ ಬಂದಂತೆ ಪುಜಿಪ್ಪ ಕಾಲ್- ಬಂದಂತಾಡುವ ಸೈಪು ಸಾರ್ವುದೆನಗಿನ್ನೆಂದೋ ವಿರೂಪಾಕ್ಷನೇ || ೯ ||
ಇದು ಚಿತ್ರಂ ವರಮಂತ್ರಸಂತತಿ ವಿರೂಪಾಕ್ಷಂ ವಿರೂಪಾಕ್ಷನೆಂ