28
೨೮
ಶತಕ ಸಂಪುಟ
ತ್ತಣ ಹರಿಯೆತ್ತಣಬ್ಜಭವನೆತ್ತಣ ವಾಸವನೆತ್ತಣಗ್ನಿಯೆ- ತ್ತಣ ಯಮನೆತ್ತಣ ತ್ರಿದಶಸಂಕುಳವೆತ್ತಣಭಾಸ್ಕರೇಂದುಗಳ್ || ೩೮ ||
ಬೆಳಗಿಂತೆಲ್ಲಿಯ೧ದಲ್ಲಿ ಪೋಗದೆ ಅಹಾ೧ ಅಃ ಅಕ್ಕಟಾ ೨ಬೇವುವ೨- ಗ್ಗಳದಿಂದಂ ತ್ರಿಪುರಂಗಳಳ್ಕಮೆಯದಾವಂ ಸುಟ್ಟನಮ್ಮಮ್ಮ ಭೂ- ತಳದೊಳ್ ನೀನರೆವಾಂತನಲ್ತುಸಿರದಿರ್ ಮತ್ತಾರ್ ದಿಟಂ ಪೇಳೆನಲ್೩ ತಿಳಿಯಲ್ ಹೋ೩ ಮದನಾರಿ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ|| ೩೯ ||
ಮದನಂ ಗರ್ಜಿಸಿ ಬಿಲ್ಲುಮಂ ಸರಲುಮಂ ಕೈಕೊಂಡು ಬಂದಾರ್ದು ಸಂ- ಮದದಿಂದೆಚ್ಚೊಡೆ ಸಚ್ಚರಿತ್ರವಿಭು ನಿಷ್ಕಾಮಿ ಸ್ವತಂತ್ರಂ ಸಕೋ- ಪದೆ ಭುರ್ ಭುಗಿಲೆಂಬಿನಂ ನೆಗಳ್ದ ನೇತ್ರಜ್ವಾಲೆಯಿಂ ತೊಟ್ಟನೋ- ವದೆ ಸುಟ್ಟಂ ಮದನಾರಿ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ || ೪೦ ||
ಮುಳಿದು ಭುಗಿಲ್ ಭುಗಿಲ್ ಭುಗಿಲೆನಲ್ ಸುಡನೇ ತ್ರಿಪುರಂಗಳಂ ಪೊಡ- ರ್ಪಳಿಯೆ ಘರಿಲ್ ಘರಿಲ್ ಘರಿಲೆನಲ್ ಸುಡನೇ ಕುಸುಮಾಸ್ತ್ರನಂ ಕರಂ ಕಳಿಯೆ ಛಿಳಿಲ್ ಛಿಳಿಲ್ ಛಿಳಿಲೆನಲ್ ಸುಡನೇ ಯಮನಂ ಮನುಷ್ಯ ನೀಂ ತಿಳಿವೊಡನೀತಿಯಂ ಬಿಸುಟು ನಂಬಿ ಶರಣ್ಬುಗು ಹಂಪೆಯಾಳ್ದನಂ || ೪೧ ||
ಭಕ್ತರ ಬಂಧು ಭಕ್ತರ ಮಹಾನಿಧಿ ಭಕ್ತರ ಭಾವಸಂಪದಂ ಭಕ್ತರ ಮಾತೆ ಭಕ್ತರ ಪಿತಂ ನಿಜಭಕ್ತರ ಪುಣ್ಯದೆಳ್ತರಂ ಭಕ್ತರ ಮೂರ್ತಿ ಭಕ್ತರ ಸುಧಾಂಬುಧಿ ಭಕ್ತರ ಜೀವದುನ್ನತಂ ಭಕ್ತರ ಪೆಂಪು ಭಕ್ತಜನಕಂ ನೆರಿ ಹಂಪೆಯದೇವನೊಚ್ಚತಂ || ೪೨ ||
ಶರಣಂ ಸಂಸಾರಿಯೇ ಮಾಣ್ ಪುಸಿ ಪುಸಿ ಶರಣಂ ಕಾಮಿಯೇ ಪೇಳಲೆಂತುಂ ಶರಣಂ ತಾಂ ಕ್ರೋಧಿಯೇ ಸಲ್ಲದು ತೆಗೆ ಶರಣಂ ಮತರ್ಯ್ನೇ ಅಲ್ಲವೈ ಕೇಳ್ ಶರಣಂ ನಿರ್ಮಾಯನೆಂತುಂ ಶರಣನತು ಳನಿಷ್ಕಾಮಿಯೆಲ್ಲಂದದಿಂದಂ