ವಿಷಯಕ್ಕೆ ಹೋಗು

ಪುಟ:Shataka Samputa.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦

ಶತಕ ಸಂಪುಟ


ಅದಿರದೆ ನಿಲ್ವ೧ನಂ೧ತಕ ಮನೋಜ ಚತುರ್ಮುಖನಬ್ಜನೇತ್ರನೆಂ- ದೊದವಿದತಕರ್ಯ್ರೆಂಬವರ್ಗೆ ಸುಟ್ಟಿಸಬಾರದು ರೂಹುದೋರಬಾ- ರದು ತಲೆಯೆತ್ತಬಾರದೆಮೆಯಿಕ್ಕಲೆಬಾರದಿಳಾತಳಾಗ್ರದೊಳ್ || ೪೭ ||

ಉರಿ ನಡೆವಂತೆ ಭಾನು ನಡೆವಂತೆ ಸಿಡಿಲ್ ನಡೆವಂತೆ ನಿನ್ನ ಭ- ಕ್ತರ ನಡೆ ದೂಷಕಾವಳಿಗೆ ಹಂಪೆಯ ದೇವ ಸುಸಾತ್ತ್ವಿಕರ್ಗೆ ಸ- ಚ್ಚರಿತ ಶಿವಾರ್ಚಕರ್ಗೆ ಸುಖ ಪುರಿತಶಾಂತಿಭೂಷಣರ್ಗೆ ಕೇಳ್ ಸಿರಿ ನಡೆವಂತೆಯಿಂದು ನಡೆವಂತೆ ಸುಖಂ ಸುಳಿವಂತೆ ಧಾತ್ರಿಯೊಳ್ || ೪೮ ||

ಘನಚೋದ್ಯಂ ನಿನ್ನ ಭಕ್ತಾಳಿಯ ನಡೆವಳಿ ಬೇರೊಂದು ಸಂಸೃಷ್ಟಿ ಬೇರೊಂ- ದು ನಿಜಂ ಬೇರೊಂದು ದೇಹಾಕೃತಿ ಹರಹರ ಬೇರೊಂದು ಸಂಪತ್ತಿ ಬೇರೊಂ- ದನು ಬೇರೊಂದಿಚ್ಛೆ ಬೇರೊಂದಘಟಿತಂ ಬೇರದೊಂದಾಜ್ಞೆ ಬೇರೊಂ- ದಿನಿದಾಹಾ ಕೌತುಕಂ ಬಣ್ಣಿಸಲರಿದಂದೋ ಹೋ ವಿರೂಪಾಕ್ಷಲಿಂಗಾ || 49 ||


ಜಾಣರದುಂಟದುಂಟಹಹ ದುರ್ವಿಷಯಂಗಳನೊಂದಿ ಬಾಳ್ವವರ್ ಜಾಣರದುಂಟದುಂಟಕಟ ಕರ್ಮದ ಕೈಯೊಳೆ ಸತ್ತು ಹೋದವರ್ ಜಾಣರದುಂಟದುಂಟ೧ಮಮ೧ ಕಾಲನ ಬಾಧೆಗೆ ಬಿಳ್ದು ನೋವವರ್ ಜಾಣರೆ ಜಾಣರಿಂದಿಹಪರಕ್ಕೆಲೆ ಭಕ್ತರೆ೨ ಹಂಪೆಯಾಳ್ದನಾ || 50 ||

ಇಲ್ಲಿ ಜಗಕ್ಕೆ ಪುಜಿತರುಮಲ್ಲಿ ಪರಕ್ಕೆ ವಿಶೇಷ ಪುಜ್ಯರಿಂ- ತಿಲ್ಲಿಯುಮಲ್ಲಿಯುಂ ಮೆರೆವರೆಲ್ಲಿಯುಮೆಮ್ಮ ಶಿವಾರ್ಚಕರ್ಗೆ ಮಾಣ್ ಎಲ್ಲಿಯ ವಿಷ್ಣುವೆಲ್ಲಿಯಜನೆಲ್ಲಿಯ ವಾಸವನೆಲ್ಲಿಯಗ್ನಿಯಿಂ- ತೆಲ್ಲಿಯ ಮಾತು ಮೂಜಗದೊಳಾರ್ ಸರಿ ಪೇಳೆಲೆ ಹಂಪೆಯಾಳ್ದನೇ || 51 ||