೩೧
ಕಲಿಯಾತಂ ಕಾಂತನಾತಂ ಸುಮನಚರಿತನಾತಂ ಕಲಾಕಲ್ಪನಾತಂ ಕಲೆಯಾತಂ ಭೋಗಿಯಾತಂ ಚತುರವಿನುತನಾತಂ ಚಿದಾನಂದನಾತಂ ಛಲಿಯಾತಂ ಸತ್ಯನಾತಂ ಬುಧಜನಹಿತನಾತಂ ಜಗತ್ ಪುಜ್ಯನಾತಂ ಸಲೆ ನಿಮ್ಮಂ ನಂಬಿ ನಿಚ್ಚಂ ಮರಿಯದೆ ನೆನವಾತಂ ವಿರೂಪಾಕ್ಷಲಿಂಗಂ|| ೫೨ ||
ನೋಡಿತೆ ಮಂಗಳಂ ೩ನೆನಪೆ೩ ಮಂಗಳ೪ಮಿರ್ದೆಡೆ೪ ಮಂಗ೫ಳಂ ಕರಂ೫ ಪಾಡಿತೆ ಮಂಗಳಂ ಶರಣರೆಂದುದೆ ಮಂಗಳ೬ಮೊಲ್ದವರ್ ಮನಂ ಗೂಡಿತೆ೬ ಮಂಗಳಂ ನಡೆಯೆ ಮಂಗಳಂ ಮಾ೭ಡಿತೆ ಮಂಗಳಾತ್ಮಕಂ ಮಾಡಿತೆ ಮಂಗಳಂ ಪರಮಮಂಗಳ೮ವೈ ಎಲೆ೮ ಹಂಪೆಯಾಳ್ದನೇ || ೫೩ ||
ಕಲಿಯಾವಂ ಶಿವಭಕ್ತನಚ್ಚಸುಖಿಯಾವಂ ಭಕ್ತನಾವರ್ತದಿಂ ಛಲಿಯಾವಂ ಶಿವಭಕ್ತನುತ್ತಮನದಾವಂ ಭಕ್ತನೆಲ್ಲಂದದಿಂ ಬಲಿಯಾವಂ ಶಿವಭಕ್ತನೂರ್ಜಿತನದಾವಂ ಭಕ್ತನೀಶಂಗೆ ಬೇ- ಳ್ಪೊಲನಾವಂ ಶಿವಭಕ್ತನಾತನೆಲೆ ಸದ್ಭಕ್ತಂ9 ವಿರೂಪಾಕ್ಷನಾ || ೫೪ ||
ಕೊಂದಂ ಭಕ್ತಿಪುರಸ್ಸರಂ ೧ಮಗನನಾ ಶ್ರೀಯಾಳ೧ಗೇನಾಯ್ತು೨ ಮೇಣ್ ಕೊಂದಂ ಭಕ್ತಿಪುರಸ್ಸರಂ ೩ಜನಕನಂ೩ ಚಂಡೇಶಗೇನಾಯ್ತು ೪ಪೋ೪ ಕೊಂದಂ ಭಕ್ತಿಪುರಸ್ಸರಂ ಜನನಿಯಂ ರಾಮಂಗದೇನಾಯ್ತು ಕೇಳ್ ಕುಂದೇ ತಾನದು ಭಕ್ತಿಯುಳ್ಳೊಡೆ ಸದಾಚಾರಂ ವಿರೂಪಾಕ್ಷನಾ || ೫೫ ||
ಮದಮಂ ಮಾಣ್ದು ದುರಾಶೆಯಂ ಪರಿದು ಕಾಮಾಸಕ್ತಿಯಂ ಬಿಟ್ಟು ಸ- ಮ್ಮುದದಿಂ ಲಿಂಗಮನೊಲ್ದು ನೋಡಿ ನಲಿವಾ ಸದ್ಭಕ್ತನಂತಾತನಿ- ರ್ದುದೆ ತಾರಾಚಲಮಾತನಿರ್ದುದೆ5 ಹಿಮಾದ್ರೀಂದ್ರಂ ಬಳಿಕ್ಕಾತನಿ- ರ್ದುದೆ ವಾರಾಣಸಿಯಾತನಿರ್ದುದೆ ವಿರೂಪಾಕ್ಷಂಗೆ ಪಂಪಾಪುರಂ || ೫೬ ||