೩೫
ಮ್ಮನೆ ಕೆಡಬೇಡ ಬೇಡ ಭರದಿಂ ಸಲೆ ಮಚ್ಚೆಲೆ ಮಚ್ಚು ಮಚ್ಚು ವಂ- ಚನೆಗಿಡೆ ನಚ್ಚು ನಚ್ಚು ಮಿಗೆ ಬಲ್ವಿಡಿ ಬಲ್ವಿಡಿ ಹಂಪೆಯಾಳ್ದನಂ || ೭೧ ||
ಭರದಿಂ ಲಿಂಗಾರ್ಚನಂ ಮಾಡುವ ಶಿವಕುಲವೊಂದೇ ಶಿವಾಚಾರಮಂ ಸ- ದ್ಗುರುದೇವನಂ ಪೇಳ್ದನೆಂತೆಂತವರವರೊಲವಿಂ ಸ್ವೇಚ್ಛೆಯಿಂ ಶರ್ವನಂ ಶಂ- ಕರನಂ ಸರ್ವೇಶನಂ ಪುಜಿಸುವುದರೊಳೆಯಂತಾಯಿತಿಂತಾಯಿತೆಂದೆ- ಲ್ಲರುಮೆಂದಾಪೇಕ್ಷೆಯಿಂ ನೀಂ ಕಿಡದೆ ನೆನೆ ವಿರೂಪಾಕ್ಷನಂ ಕಾಂಕ್ಷೆಯಿಂದಂ || ೭೨ ||
ಗುರುಮತದಿಂ ಶ್ರುತಿಸ್ಮೃತಿಮತಂಗಳಿನಿಷ್ಟಮತಂಗಳಿಂದಮಾ- ದ್ಯರ ಮತದಿಂದೆ ನೀನೊಡೆಯನೆಂದರಿದೀಶ್ವರ ನಿಮ್ಮನರ್ಚಿಸು- ತ್ತಿರದಿರದೆಲ್ಲರೊಳ್ ಮಥಿಸಿ ತರ್ಕಿಸಿ ನೋಯಿಸಿ ನೋಯುತುಂ ವೃಥಾ ನೆರಮನೆಗಳ್ತು ಕಣ್ಗಿಡುವರೇಂ ಮರುಳ್ಗೊಂಡರೊ ಹಂಪೆಯಾಳ್ದನೇ || ೭೩ ||
ತೆಗೆ ತೆಗೆ ಮಿಕ್ಕ ಕೂಟಕುಳಿದೇವರನಾವಗ1ಮುರ್ಕಿದಳ್ಕರಿಂ೧ ಬಗೆ ಬಗೆ ಚಂದ್ರಚೂಡನ ಪದಾಂಬುಜಮಂ ಮನವಾರೆ ಭಕ್ತಿಯಿಂ- ದಗಿದಗಿದಂಗದೊಳ್ ಪುಳಕವೇಳ್ತರಲೆಳ್ದು ಪೊರಳ್ದು ಲೀಲೆಯಿಂ ನೆಗೆನೆಗೆದಾಡಿ ಮೆಯ್ಮರೆದು ಪುಜಿಸು ಮಾನವ ಹಂಪೆಯಾಳ್ದನಂ || ೭೪ ||
ಇದು ದಲಪುರ್ವಮೀ ಮನುಜಜನ್ಮದೊಳುದ್ಭವಿಸಿರ್ದು ಮೂಗನಾ ಗದೆ ಸಲೆಯಂಧನಾಗದಿರೆ ಪಂಗುಳನಾಗದೆ ಕೂನದೇಹನಾ ಗದೆ ವಿಕಟಾಂಗನಾಗದೆ ಕಿವುಂಡನೆಯಾಗದೆ ಹೀನವರ್ಣನಾ ಗದೆ ಮೆರೆವಲ್ಲಿ ಪುಜಿಸು ಮಹೋತ್ಸವದಿಂದೆಲೆ ಹಂಪೆಯಾಳ್ದ೨ನಂ೨ || ೭೫ ||
ಆರುತುಮರ್ಚಿಸುಬ್ಬರಿಸುತರ್ಚಿಸು ಮತ್ತೊಲೆಯುತ್ತುಮರ್ಚಿಸಿಂ- ಪೇರುತುಮರ್ಚಿಸುನ್ನತಿಯೊಳರ್ಚಿಸು ಕೊರ್ವುತುಮರ್ಚಿಸೆಲ್ಲರೊಳ್ ಪೋರುತುಮರ್ಚಿಸೀ ಜನನಮಂ ಪಡೆದಲ್ಲಿ ಮನುಷ್ಯ ಏನುಮಂ