೪೭
ಗಲು ಮೃಷ್ಟಾನ್ನವು ಸರ್ಪಕಾಯ್ವ ಧನಮಂ ಲುಬ್ಧಾರ್ಜಿತೈಶ್ವರ್ಯಮುಂ ಹೊಲೆಪಾಡಿಂದಲಿ ಕೂಡಲಿಕ್ಕೆ ಪೆರರ್ಗಂ ತಾನಾಗದೇ ಪೋಗುವೋಲ್ ಗಳಿಸೇನುಣ್ಣದೆ ಪೋಪರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೩೦ ||
ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ ಮರಗಳ್ ಪುಟ್ಟವೆ ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪುವಿಲ್ಲವೇ ನಿರುತಂ ೨ಸತ್ಕವಿಗೊರ್ವಗರ್ವಿ ಪುಸಿಯುತ್ತುಂ೨ ಲೋಭಿಯಾಗಲ್ ನಿಜಂ ಧರೆಯೋಳ್ ದಾತರು ಪುಟ್ಟರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೩೧ ||
ಗಿಡುವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್ ಕಡುಕಾರ್ಪಣ್ಯದಿ ಕೇಳ್ವವೇ ೩ಶಿಖಿಜಲೋರ್ವೀ ಮಾರುತಾ3ಕಾಶಮಂ ಮೃಡ ನೀನಲ್ಲದದಾವ ಸಾಕುವ ಜಗಕ್ಕಂ ಪ್ರೇರಕಂ ನೀನೆಲೈ ಕೊಡುವರ್ ಕೊಂಬರು ಮತರ್ಯ್ರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ|| ೩೨ ||
ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ- ಡಿರನತ್ಯುಗ್ರದಿ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಬಾಧಿಸಲ್ ತರುವೇ ಪಣ್ಗಳ ಮೆಲೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್ ಹರ ಕೊಲ್ಲಲ್ ನರ ಕಾಯ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೩೩ ||
ಮರಗಳ್ ಪುಟ್ಟಿದತಾಣಮೊಂದೆ ಖಗಕಂ ರಾಜ್ಯಂಗಳೇಂ ಪಾಳೆ ಭೂ- ವರರೊಳ್ ತ್ಯಾಗಿಗಳಿಲ್ಲವೇ ಕವಿಗೆ ವಿದ್ಯಾಮಾತೆಯೇಂ ಬಂಜೆಯೇ ಧರೆಯೆಲ್ಲಂ ಪಗೆಯಪ್ಪುದೇ ಕರುಣಿಗಳ್ ತಾವಿಲ್ಲವೇ ಲೋಕದೊಳ್ ನರರಂ ಪುಟ್ಟಿಸಿ ಕೊಲ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೩೪ ||
ಮೃಡ ತಾಂ ಭಿಕ್ಷವ ಬೇಡನೇ ದ್ರುಪಜೆ ತಾಂ ತೊತ್ತಾಗಳೆ ಪಾಂಡವರ್ ಪಿಡಿದೋಡಂ ತಿರಿದುಣ್ಣರೇ ಖಳನ ಕೈಯೊಳ್ ಸಿಕ್ಕಳೇ ಸೀತೆ ತಾಂ ಸುಡುಗಾಡಕ್ಕಿಗೆ ಬಂಟನಾಗನೆ ಹರಿಶ್ಚಂ1ದ್ರಂ ನರರ್೧ ಪುರ್ವದೊಳ್ ಪಡೆದಷ್ಟುಣ್ಣದೆ ಪೋಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೩೫ ||