ವಿಷಯಕ್ಕೆ ಹೋಗು

ಪುಟ:Shataka Samputa.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦

ಶತಕ ಸಂಪುಟ

ಸುಳಿದಾ ಹೊಮ್ಮಿಗವೈದೆ ಸೀತೆಯ ಖಳಂ ಕೊಂಡೋಡಿ ತಾನಾಳ್ದನೇ ಇಳಿದಂಭೋಧಿಯ ಬಾಳ್ದನೇ ತಮಸನಂದಾಮ್ನಾಯಮಂ ಕದ್ದೊಡಂ ತಲೆಯಂ ಕಟ್ಟರೆ ಕಂಚಿವಾಳದೊಳು ತಾಂ ಶೂದ್ರೀಕವೀರಾಖ್ಯನಂ ಕಳವೇಂ ಕೊಲ್ಲದೆ ಕಾಯ್ವುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೪೭ ||

ಪಿಡಿಯಲ್ ಹೊಮ್ಮಿಗವೆಂದು ಪೋದ ರಘುಜಂ ಭೂಪುತ್ರಿ ಸನ್ಯಾಸಿಯೆಂ- ದಡಿಯಿಟ್ಟಳ್ ದಶಕಂಠನೊಯ್ದಿವಳನಂದಾಯುಷ್ಯಮಂ ನೀಗಿದಂ ಕೊಡಬೇಡೆಂದೆನೆ ಶುಕ್ರ ರಾಜ್ಯವನಿತಂ ಪೋಗಾಡಿವಂ ರಾಕ್ಷಸಂ ಕಡು ಮೋಹಂ ಕೆಡಿಕುಂ ದಲೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೪೮ ||

ಖಳ ವೇದಂಗಳನೊಯ್ದನುರ್ವಿತಳಮಂ ತಾಂ ಚಾಪೆವೋಲ್ ಸುತ್ತಿದಂ ಚಲದಿಂ ಪೋರಿದರೆಲ್ಲರಂ ಗೆಲಿದು ಬಂದಾ ಪೆಣ್ಣ ಕೊಂಡೋಡಿದಂ ತಲೆಯೊಳ್ ಕಾದಿದರೂರ್ಗಳಂ ಪಡೆದರೆಲ್ಲಾ ಗೆಲ್ದು ತಾವಾಳ್ದರೇಂ ಬಲುಗರ್ವಂ ಕೊಲದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೪೯ ||

ಸುರೆಯಂ ಸೇವಿಸಿದಾತ ಬಲ್ಲನೆ ಮಹಾಯೋಗೀಂದ್ರರೆಂಬುದಂ ದೊರೆಯೊಳ್ ತೇಜವನಾಂತವಂ ಬಡವರಂ ತಾಂ ನೋಳ್ಪನೇ ಕಂಗಳಿಂ ಪಿರಿಯರ್ ಮಾನವರೆಂದು ಕಾಣ್ಬನೆ ಮಹಾದುರ್ಮಾರ್ಗಿಯೆಂತಾದೊಡಂ ದುರುಳಂ ಬಲ್ಲನೆ ಬಾಳ್ವರಂ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೦ ||

ಪಿಡಿಯಲ್ ಸಿಂಗವ ಮತ್ಸರ ಕವಿವುದಾ ದುರ್ಗಂಧಮೇ ಗಾಳಿಯೊಳ್ ತೊಡೆಯಲ್ ನಾರದೆ ನಾಯ ಬಾಲ ಸೆಡೆಯಂ ಕಟ್ಟಲ್ಕೆ ಚಂದಪ್ಪುದೇ ಸುಡುಚೇಳಂ ತೆಗೆಯಲ್ಕೆ ಸುಮ್ಮನಿಹುದೇನೇನೆಂದೊಡೆಯೆಷ್ಟಾದೊಡಂ ಬಿಡ ತನ್ನಂಗವ ನೀಚ ತಾಂ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೧ ||

ಬಡಿಗೋಲಂ ಸಮಮಾಡಬಕ್ಕು ಧರೆಯೊಳ್ ಕೂಪಂಗಳಂ ತೋಡಬ ಕ್ಕಿಡಿದುಕ್ಕಂ ಮೃದುಮಾಡಬಕ್ಕು ಮಳಲೊಳ್ ತೈಲಂಗಳಂ ತೋರಬ ಕ್ಕಡವೀ ಸಿಂಗವ ತಿದ್ದಬಕ್ಕು ಕರೆಯಲ್ಬಕ್ಕುಗ್ರದ ವ್ಯಾಘ್ರಮಂ