ವಿಷಯಕ್ಕೆ ಹೋಗು

ಪುಟ:Shataka Samputa.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧

ಕಡುಮೂರ್ಖಂ ನೆರೆ ಕೇಳನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೨ ||

ತೊನೆವರ್ ಮಾತಿಗೆ ಸೋಲ್ದು ತನ್ನ ತಲೆಯೊಳ್ ತಾನಿಟ್ಟು ಬೊಬ್ಬಿಟ್ಟು ಕೈ- ಪನೆ ಬಿಟ್ಟೆಲ್ಲರ ಮುಂದೆ ತೋಳ ನೆಗಪುತ್ತಂ ಕೋತಿಯಂತೇಡಿಸು- ತ್ತಿನಿಸುಂ ಹೇಸದೆ ಲಜ್ಜೆಯಿಲ್ಲದನಿಬರ್ ತಾಂ ಮಾನ್ಯನೆಂದಾ ಮನುಜಂ ಸದ್ಗತಿ ಕಾಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೩ ||

ಘನದೈನ್ಯಂಬಡುವರ್ ಗಭೀರಗೆಡುವರ್ ಗ್ರಾಸಕ್ಕೆ ಕುಗ್ರಾಮವಾ- ಗನುಗೆಟ್ಟಿರ್ಪರು ಆ ಕ್ಷಣಕ್ಕೆ ಕೆಲವರ್ ಮಾತಾಡಲುಂ ಬಿ- ರ್ರನೆ ಬಾಗರ್ ತಲೆಗೇರಿ ಸೊಕ್ಕು ತೊನೆವರ್ ತಾವೆಲ್ಲರಂ ನಿಂದಪರ್ ಮನುಜರ್ಗೆತ್ತಣ ನೀತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೪ ||

ಅಗಲರ್ ಸೂಳೆಯನಾಳರಾ ಕುಲಜೆಯಂ ಸಂಕೀರ್ಣಮಂ ಮಾಳ್ಪರಾ- ವಗ ದುರ್ಗೋಷ್ಠಿಯೊಳಿರ್ಪರೇಳು ಬೆಸನಕ್ಕೀಡಪ್ಪರಾಚಾರಮಂ ಬಗೆಯರ್ ಸ್ವಾತ್ಮವಿಚಾರವಿಲ್ಲ ಮತಿಗೀಯರ್ ಧರ್ಮಮಂ ಪಾಲಿಸರ್ ಯುಗಧರ್ಮಂ ನರರ್ಗಪ್ಪುದೆ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೫ ||

ಕುಲದೊಳ್ ಕೂಡರು ಕೂಸನೀಯರು ನೃಪರ್ ನಿಷ್ಕಾರಣಂ ದಂಡಿಪರ್ ಪೊಳಲೊಳ್ ಸೇರಲು ಪೋರುಗೈದು ಸತಿ ತಾಂ ಪೋಗಟ್ಟುವಳ್ ಸಾಲಿಗರ್ ಕಲುಗುಂಡಂ ತಲೆಗೇರಿಪರ್ ತೊಲಗಿರಲ್ ಲಕ್ಷ್ಮೀಕಟಾಕ್ಷೇಷಣಂ ನೆಲ ಮುಟ್ಟಲ್ ಮುನಿದಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೬ ||

ಮಡೆಯಂಗುತ್ತಮವಿದ್ಯೆ ಬೆಟ್ಟ ಕುರುಡಂಗಂ ಮಾರ್ಗವೇ ಬೆಟ್ಟ ೧ಕೇಳ್೧ ಬಡವಂಗೊಂದಿನ ಘಟ್ಟ ಬೆಟ್ಟ ಜಡದೇಹಂಗುಜ್ಜುಗಂ ಬೆಟ್ಟ ಮು- ಪ್ಪಡಿಸಿರ್ದಾತಗೆ ಪೆಣ್ಣು ಬೆಟ್ಟ ರುಣವೇ ಪೆರ್ಬೆಟ್ಟ ಮೂಲೋಕದೊಳ್ ಕಡುಲೋಭಂಗಣು ಬೆಟ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೫೭ ||