೫೮
ಶತಕ ಸಂಪುಟ
ಹಣಮಂ ನೆತ್ತರನೇಣಕೋಣಕುರಿಯಂ ಹಾರಾಯುಧಂ ಬೀಳ್ವುದಂ ಕುಣಬಂ ಲುಬ್ಧಕನಂ ವಿಕಾರತನುವಂ ಮೇವಾಡನುಂ ಪತ್ತುವಂ- ದಣಮಂ ಕೆಂಪಿನ ಪುವನೆಣ್ಣೆದಲೆ ನೂತ್ನಾಗಾರಮಂ ದೈತ್ಯರಂ ಕನಸೊಳ್ ಕಾಣಲುಬಾರದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೮೯ ||
ಕೊಳನಂ ತಾವರೆಯಂ ತಳಿರ್ತ ವನಮಂ ಪುದೋಟಮಂ ವಾಜಿಯಂ ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ಳಕ್ಕಿಯಂ ಛತ್ರಮಂ ತಳಿರಂ ಪುರ್ಣತಟಾಕಮಂ ೧ಭುಜಗನಂ೧ ದೇವರ್ಕಳಂ ತುಂಬಿಯಂ ತಿಳಿಯಲ್ ಸ್ವಪ್ನದಿ ಲೇಸೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೯೦ ||
ಪಶುಗಳ್ ಕ್ರೂರಮೃಗಂಗಳಂಡಜಗಳುಂ ಸರ್ಪಂಗಳುಂ ಕಣ್ಗೆ ಕಾ- ಣಿಸಿದತ್ಯುಗ್ರಗ್ರಹಂಗಳುಂ ಪಟುಭಟರ್ ವಿದ್ವಜ್ಜನರ್ ಮಂತ್ರಿಗಳ್ ಋಷಿಗಳ್ ಮಿತ್ರರು ಬಂಧುಗಳ್ ಪ್ರಜೆಗಳುಂ ತಾವೆಲ್ಲರುಂ ತಮ್ಮಯಾ ಶಶುವಂ ಪಾಲಿಸದಿರ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೯೧ ||
ರಣದೊಳ್ ಶಕ್ರನ ತೇರನೇರಿದ ಮಹಾಶೈಲಾಳಿ ಬೆಂಬತ್ತೆ ಮಾ- ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ ಕ್ಷಣದೊಳ್ ವೆಚ್ಚವ ಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ ಋಣಭಾರಕ್ಕೆಣೆಯಾವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೯೨ ||
ಅಡಿಮೂರೀಯೆನಲೀಯನೆ ಬಲಿನೃಪಂ ಮೂಲೋಕಮಂ ಖಂಡಮಂ ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗದಾದ್ಯಂತಮಂ ಮೃಡ ಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ ಕೊಡುವರ್ಗಾವುದು ದೊಡ್ಡಿತೈ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೯೩ ||
ಹೊರಬೇಡಂಗಡಿ ಸಾಲವೂರ ಹೊಣೆಯಂ ಪಾಪಂಗಳಂ ನಿಂದೆಯಂ ಮರೆಬೇಡಾತ್ಮಜ ಸತ್ಕಳತ್ರಸಖರೊಳ್ ನ್ಯಾಯಂಗಳೊಳ್ ಸತ್ಯದೊಳ್ ಸೆರೆಬೇಡಂಗನೆ ಪಕ್ಷಿವೃದ್ಧತರುಣರ್ ಗೋವಿಪ್ರದಾರಿದ್ರರೊಳ್