ವಿಷಯಕ್ಕೆ ಹೋಗು

ಪುಟ:Shataka Samputa.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪

ಧರಣಿಯಮರರ್ಗೀವ ಕಾಂಚನದ ನಾಮದಲಿ ಕರಸಿಕೊಳುತಿರ್ಪ ದಿಗ್ವಸನ ಸತಿಯಳ ಪಿತನ ಸಿರಗಡಿದನವ್ವೆಯಣುಗನ ಜಠರವನು ಸುತ್ತಿಕೊಂಡಿರ್ಪನಾರಾತಿಯ ಪರಮಸತ್ವಕೆ ಸೋತು ಸುಧೆಯನಿತ್ತನ ಸುತನ ವರಸತಿಯಳಗ್ರಜನ ಪಟ್ಟದರಸಿಯ ಸಹೋ ದರನ ಜಾಮಾತಹರ ನಿಜಲಿಂಗ ಭವಭಂಗ ಶರಣಜನವರದ ಜಯತು || ೯ ||

ಸವಿರುಚಿಯ ತೋರುತಿರ್ಪವು ಸಪ್ತವಿರುತಿಹನ ತವೆ ಸಖನ ವಾಹನವ ಧರಿಸಿದನ ಪಿತನ ವಸ ನವ ಮಾಡಿಕೊಂಡಿಹಳ ತಸ್ಕರನಯನನ ತದ್ವರ್ಣಗರ್ಭನ ತಮ್ಮನ ವಿವರವಾಗಿರುತಿರ್ಪ ಧ್ವಜದಗಂಧಿಯಪತಿಯ ಯುವತಿಯಳ ತನುಭವ ಪೌತ್ರಗೊಲಿದೊಲಿದು ಬಾ ಣವನಿತ್ತು ರಕ್ಷಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು || ೧೦ ||

ಕಡುಚಲುವೆ ಪಾರ್ವತಿಯ ತೊಡೆಯಡಿಯೊಳಿಂಬಿಟ್ಟು ನಿಡುಗುರುಳ ನೇವರಿಸಿ ಕುಡಿಪುರ್ಬುಗಳ ತೀಡಿ ಇಡಿಕಿರಿದ ನುಣ್ಗಲ್ಲವಿಡಿದು ನುಣ್ಪಿಡುತ ಪೊಂಗೊಡಮೊಲೆಯೊಳುಗುರನಿಡುತ ಮುಡಿಸಿ ಪುಸರಗಳನು ಮುಡಿವಿಡಿದು ಚೆಂದುಟಿಯ ಬಿಡದೆ ಚುಂಬನಗೈವುತಡಿಗಡಿಗೆ ಹಾಯೆನುತ ಬೆಡಗಿನಿಂದೊಡವೆರೆದ ನಿಜಲಿಂಗ ಭವಭಂಗ ಶರಣಜನವರದ ಜಯತು|| ೧೧ ||

ಗಳರವದಿ ಚುಂಬನಂಗಳ ರವದಿಯಂಗುಲಂ ಗಳ ರವದಿ ಕಂಕಣಂಗಳ ರವದಿ ಕಾಲ್ಗೆಜ್ಜೆ ಗಳ ರವದಿ ತಾಡನಂಗಳ ರವದಿ ಹಾರಹೀರಾವಳಿಯ ರವದಿಂದಲಿ ಹೊಳೆಹೊಳೆವ ಶಕುನಿಮಂಚದ ರವದಿ ಜಾಣ್ವಾತು ಗಳನಾಡುತಿರ್ಪ ರವದಿಂದೆ ಗಿರಿರಾಜಸುತೆ ಯೊಳುಸುರುತ ಸವಿಗರೆವ ನಿಜಲಿಂಗ ಭವಭಂಗ ಶರಣಜನವರದ ಜಯತು