ವಿಷಯಕ್ಕೆ ಹೋಗು

ಪುಟ:Shataka Samputa.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬


ಶತಕ ಸಂಪುಟ

ಪಡೆದೊಡೆದು ನಿಡುಜಡೆಯ ನಿಜಲಿಂಗ ಭವಭಂಗ ಶರಣಜನವರದ ಜಯತು || ೧೬ ||

ಘುಳುಘುಳಿಪ ಜಳಧಿಯಿಂದೆಳದೆಳಸಿ ಬಲುವಿಷವು ಸುಳುಸುಳನೆ ಪೊರಮಟ್ಟು ಛಿಳಿಛಿಳಿಲು ಛಿಳಿಲೆನುತ ಚಳಚಳಕದುಗ್ರವೆಗ್ಗಳದಳೆದು ಪ್ರಳಯದಲಿ ದಳದುಳನೆ ಸುಡುತ ಬರಲು ಕಳವಳಿಸಿ ಸಕಳರತಿ ಬಳಬಳಲಿ ಬಾಯಾರಿ ಬೆಳುಗಳೆಯ ಧರಿಸಿದನೆ ೨ಕಳೆದುಳುಹುಯೆನಲು ಗಳ ದೊಳು ತಳೆದ ೩ಸಿತಿಕಂಠ3 ನಿಜಲಿಂಗ ಭವಭಂಗ ಶರಣಜನವರದ ಜಯತು || ೧೭ ||

ಆರ್ಭಟಿಸಿ ಕೆಂಗಿಡಿಯು ನೆಗೆದು ಛಿಟಿಛಿಟಿಲೆನುತ ಕರ್ಬೊಗೆಯ ಸೂಸುತಲಿ ಸಿಮಿಸಿಮಿಲು ಸಿಮಿಲೆನುತ ಪರ್ಬಿತಾಕಾಶಕ್ಕೆ ಪೇರುರಿಯು ಭುಗಿಭುಗಿಲು ಭುಗಿಲೆಂಬ ರವದಿಂದಲಿ ಪೆರ್ಬೆಂಕಿ ಪಸರಿಸಿತು ಛಿಳಿಛಿಳಿಲು ಛಿಳಿಲೆನುತ ಸರ್ಬಜನ ಬೆದಬೆದರಲಿಂತು ಪರಿಯಲಿ ಸುಟ್ಟು ಕೊರ್ಬಿದಸುರರ ಪುರವ ನಿಜಲಿಂಗ ಭವಭಂಗ ಶರಣಜನವರದ ಜಯತು || ೧೮ ||

ಹೊಳೆಹೊಳೆವ ಕಾಲಂದುಗೆಯು ಘಲಿರುಘಲಿರೆನುತ ತೊಳತೊಳಗಿ ತೋರ್ಪ ಗೆಜ್ಜೆಗಳು ಘಲಘಲಿಕೆನುತ ಥಳಥಳಿಪ ಉಡಿಯ ಘಂಟೆಯ ನಾದ ಘಳಿಘಳಿಸಲು ೧ಘಳಿಲೆನುತ೧ ನುಡಿಯುತಿರಲು ಝಳಝಳಿಪ ಭುಜಕೀರ್ತಿ ಝಣಝಣರು ಝಣರೆನುತ ನಳನಳಿಸುತಂಧಕಾಸುರನ ಎದೆಯೊಳು ನಿಂದು ನಲಿನಲಿದು ಕುಣಿಕುಣಿದ೨ ನಿಜಲಿಂಗ ಭವಭಂಗ ಶರಣಜನವರದ ಜಯತು || ೧೯ ||