ವಿಷಯಕ್ಕೆ ಹೋಗು

ಪುಟ:Shataka Samputa.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

79

ನಿನ್ನ ನಾಮದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೩ ||

ಒಮ್ಮೆ ಸಂಸಾರವನು ತೊರೆಯಬೇಕೆಂಬಂತೆ

ಒಮ್ಮೆ ಸಂಸಾರವನು ಮಾಡಬೇಕೆಂಬಂತೆ

ಒಮ್ಮೆ ದೇವರ ಭಜನೆಯನು ಮಾಡಿ ನಿತ್ಯಪದವಿಯ ಪಡೆಯಬೆೇಕೆಂಬುವ

ಒಮ್ಮೆ ದೇವರ ಭಜನೆಯಿಂದೇನು ಫಲವೆಂದು

ಹಮ್ಮೈಸಿ ಹರಿಯುತಿಹ ಮನವನೊಬ್ಬುಳಿಗೊಳಿಸಿ

ನಿಮ್ಮ ಚರಣದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೪ ||

ಏನೇನು ತಿಳಿ ಯದಜ್ಞಾನಿ ದಿಟವಹುದೆನುತ

ಹೀನೈಸುತೆನ್ನ ಕೈ ಬಿಡಲಾಗದೆಲೆ ದೇವ

ನೀನು ಶಂಕರನು ಭವಹರನು ಶಶಿಧರನು ಸಿರಿಕರನುಮೆಯವರನೆನ್ನುತ

ನಾ ನಿನ್ನ ಚರಣಶತಪತ್ರವನು ನಂಬಿದೆನು

ಜ್ಞಾನವನು ಕೊಟ್ಟು ಸಲಹುವುದೆನ್ನ ಜಗದೊಡೆಯ

ನೀನಲ್ಲದಿನ್ನುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೬೫ ||

ಸ್ಥಿರಪದವು ಬರುತಿರ್ಪ ಚರಿತವನು ಪಿಡಿದಂತೆ

ಮರಮರಳಿ ಭವಕೆ ಬಹ ಚರಿತವನು ತೊರೆವಂತೆ

ನರಲೋಕದಾಟದೊಳಗಿದ್ದುದಕೆ ಮನವ ತೊಡಕಿಸದೆ ಹೊರಗಾಗುವಂತೆ

ನಿರುತದಿಂದಾತ್ಮದೊಳು ಶಿವ ನಿಮ್ಮ ರೂಪವನು

ಅರಿವಂತೆ ಮರೆವಂತೆ ಕರೆವಂತೆ ಬೆರೆವಂತೆ

ವರವಿತ್ತು ಸಲಹುವುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೬ ||

ನೀನಿದ್ದ ಸಮಯದಲಿ ನಿನ್ನ ತಿಳಿಯದೆ ಜ್ಞಾನ

ಹೀನನಾದಡೆ ಬಳಿಕ ನೀ ತೊಲಗಿದಾಕ್ಷಣಕೆ

ಏನು ಪೇಳುವೆನಿನ್ನು ಬಗೆಬಗೆಯ ಯೋನಿಯೊಳು ತೊಳತೊಳಲಿ ಬಳಬಳಲುತ

ನಾನೆಂತು ಜೀವಿಸುವೆನಯ್ಯ ಕರುಣಾಕರನೆ