೮೩
ತರಳತನದಿಂದರಲು ಬಳಿಕ ಯೌವನ ಬರಲು
ತರುಣಿ ಸುತರಾಗಲವರನು ಸಲಹಬೇಕೆನುತ
ಪರಿಪರಿಯ ಧಾವತಿಯ ನೆಗಳಿ ಬಳಬಳಲಿ ನಾನಾಯೋಚನೆಯನೆಸಗುತ
ಇರಲನಿತರೊಳು ಸತಿಯು ಸುತರು ಮರಣಂಗೈಯೆ
ಪರಮಶೋಕಾತುರದಿ ನೊಂದು ಚಿಂತಿಸುವ ಕರ
ಕರಿಯು ಪೇಳುವರಳವೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೭೯ ||
ಬದುಕು೧ಮನೆಮಾಡಿಕೊಂಡಿರೆ೨ ಜರಾಂಗನೆಯು ತಾ೩
ನೊದಗಲಾಕ್ಷಣದಲ್ಲಿ ಪಂಚೇಂದ್ರಿಯಗಳು೪
ಹದಗೆಡಲು ಸತಿಸುತರು ಮುದಿಪಾಪಿ ತಾ೫ಸಾಯಲೊಲ್ಲನು ಯೆಂದು ಹಳಿಯು ತಿರಲು
ಇದು ಹೊರತು ಮರಣಗಾಲದೊಳೊಂದು ವ್ಯಾಧಿ೬ಯೊಳು೬
ಕುದಿಕುದಿದು ಪ್ರಾಣವನು ಬಿಡಬೇಕು ಸತ್ತುಹು
ಟ್ಟದ ಬಗೆಯ ಮಾಡು7ವುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೮೦ ||
ರೂಢಿಯೊಳಗೆಂತು ಜೀವಿಸಬೇಕು ಚಿತ್ತೈಸು
ಚಾಡಿಕೋರರು ಚೋರರುಗಳು ಸಿರಿವಂತರಡಿ8
ನೋಡಿ ಬಳಲುವ ದುರಾಚಾರಿಗಳು ಪಾಪಿಗಳು ದುರ್ಜನರು ದಯಹೀನರು
ಕೂಡಿ ನಡೆವಲ್ಲಿ ಭೇದವನಿಕ್ಕುವರು ಪರರ್ಗೆ
ಕೇಡನೆಣಿಸುವರು ಕುಟಿಲರು ಕುಹಕಿಗಳು ಶಶಿಯ
ಸೂಡಿದನೆ ಸುಚರಿತ್ರ ನಿಜಲಿಂಗ ಭವಭಂಗ ಶರಣಜನವರದ ಜಯತು || ೮೧ ||
ಒಡವೆಯಾಸೆಗೆ ಬಾಲಕರ ಕೊರಳ ಛೇದಿಪರು
ಬಿಡದೆ ಸವತಿಯ ಶಿಶುವ ಬಾವಿಯೊಳು ಕೆಡಹುವರು
ಕಡೆಗೆ ಧನಬರಲೆಂದು ಗರ್ಭಿಣಿಯ ಕೊಂಡೊಯ್ದು ಕಡಿಕಡಿದು ಕೊಲ್ಲುತಿಹರು
ಕಡುವಿಷವನಿಕ್ಕಿ ಮಲಮಕ್ಕಳನು ಕೊಲುತಿಹರು
ಕೊಡುವ ಧರ್ಮವ ಮಾಣಿಸುವರು ನಿಷ್ಕರುಣಿಗಳು
ನುಡಿದು ಪೇಳುವರಳವೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೮೨ ||