ವಿಷಯಕ್ಕೆ ಹೋಗು

ಪುಟ:Shataka Samputa.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬

ಶತಕ ಸಂಪುಟ

ಜಲವ ಮರ್ದಿಸಲು ನವನೀತ ಪೊಣ್ಮು ವುದೆ ಅಜಗಳ ದಲ್ಲಿ ಮೆರೆವುತಿಪ್ಪ

ಮೊಲೆಗಳನು ತೊರೆವಿಡಿಯೆ ತನಿ ವಾಲು ಹೊರಡುವುದೆ

ಕುಲರಹಿತ ನಿನ್ನ ಧ್ಯಾನವು ಮಂದಮತಿಯ ಮನ

ದಲ್ಲಿ ತಾ ನೆಲಸುವುದೆ ನಿಜಲಿಂಗ ಭವಭಂಗ ಶರಣಜನವರದ ಜಯತು|| ೯೦ ||


ನಡುಮಾರ್ಗದೊಳಗೊರ್ವ ನಡೆನಡೆದು ಪೋಗುತಿರೆ

ಬಿಡದೆ ಪೆರ್ಬುಲಿ ಕಂಡು ಸಿಡಿಲು ಭೋರ್ಗರೆವಂತೆ

ಘುಡುಘುಡಿಸುತಾರ್ಭಟಿಸುತಡಿಗಡಿಗೆ ಮಲೆಯುತಲಿ ತಡವಿಡದೆ ಲಂಗಿಸುತಲಿ

ಕಡು ಭಯಂಕರದಿಂದೆ ನಡೆತರಲು ಭೀತಿಸದೆ

ಮೃಡ ನಿನ್ನ ನಾಮವನು ಬಿಡದೆ ಕೀರ್ತಿಸುತಿರಲು

ದೃಢಭಕ್ತನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೯೧ ||


ಪೊದೆಪೊದೆೆಯ ತೃಣ ಬೆಳೆದ ಕಾಂತಾರದೊಳಗೊರ್ವ

ಒದವೊದಗಿ ನಡೆತರುವ ಸಮಯದೊಳಗಾ ತೃಣಕೆ

ಬೆದಬೆದನೆ ಕಿಚ್ಚೆದ್ದು ಸುಡುಸುಡುತ ಪೇರುರಿಯು ಧಗಧಗಿಸಿ ನಾಲ್ದೆಸೆಯನು

ಪದುಪದುಳದಿಂ ಮುಸಿಕಿಕೊಂಡು ಬರುತಿರಲದಕೆ

ಹೆದಹೆದರದಾತ್ಮದೊಳು ನಿನ್ನ ಧ್ಯಾನವ ಮಾಳ್ಪ

ದುಭಕ್ತನಹುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೯೨ ||


ತುರುಗಿರ್ದ ಕತ್ತಲೆಯೊಳೊರ್ವ ನಡುದಾರಿಯಲಿ

ಬರುವ ತತ್ಸಮಯದಲಿ ಕಾಳರಕ್ಕಸಿ ತನ್ನ

ಕರದಲ್ಲಿ ಕೊಳ್ಳಿಯನು ಹಿಡಕೊಂಡು ದಾಡೆಯೊಳು ಶಿರಗಳನು ಕಚ್ಚಿಕೊಂಡು

ಗರಗರನೆ ಕಣ್ಣು ತಿರುವುತ ಬಂದು ನಿಲಲದರ

ಪರಿಯ ಕಾಣುತ ಭೀತಿಗೊಳದೆ ಮನದೊಳು ನಿನ್ನ

ಸ್ಮರಿಸುವವ ದೃಢಭಕ್ತ ನಿಜಲಿಂಗ ಭವಭಂಗ ಶರಣಜನವರದ ಜಯತು|| ೯೩ ||