ಪುಟ:Siitaa-Raama.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

  • 48

ಸರ್ಪವನ್ನು ಹಿಡಿದಂತೆ, ಈ ದೇವಿಯನ್ನು ವಿತಕ್ಕೆ ಹಿಡಿದೆ? ಬಿಡು, ಪ್ರಾಣ ದಾಸೆಯಿದ್ದರೆ ಬಿಡು!' ಎಂದು ಜಟಾಯುವು ರಾವಣನಿಗೆಂದನು. ಆವ ನೆಲ್ಲಿ ಕೇಳುವನು? ಸಿಕ್ಕಿದ ಸುಂದರಿಯನ್ನು ಹಕ್ಕಿಯ ಮಾತಿಗೆ ಹೊಗ ಗೊಡುವುದೆ? ದಾರಿ ಬಿಡೆಂದನು, ಅವನು ಬಿಡೆನೆಂದನು. ಹೊಡೆ ದಾಟವಾಯಿತು. ಅವನು ಕೊಕ್ಕಿನಿಂದಲೂ ಇವನು ಕತ್ತಿಯಿಂದ ತಿವಿ ದರು, ಕತ್ತಿಗೆ ಜಯವಾಯಿತು, ಜಟಾಯು ಅರೆಮಡಿದನು. ರಾವಣನು ಒಡನೆಯ ಟಂಕೆಗೆ ಮುಂದುವರಿದನು.

ಪಂಚವಟಿಯಲ್ಲಿ ಮಾರೀಚನ ಆರ್ತನಾದದ ಕಪಟತ್ವವನ್ನು ರಾಮನು ತಿಳಿದೊಡನೆಯೆ, ಇನ್ನಲ್ಲಿದ್ದರೆ ಪ್ರವಾದವಾಗುವುದೆಂದು ಬೆದರಿ, ತನ್ನ ಪರ್ಣ ಕುಟೀರದ ಕಡೆಗೆ ಮರಳಿದನು. ಮನಸ್ಸಿನಲ್ಲಿ ಭಯ; ಆದರೂ ತಮ್ಮನ ಮೇಲೆ ಭರವಸೆಯಿಂದ ಧೈರ್ಯ, ಅವನು ಮರುಳುತಿರುವಾಗಲೆ, ದಾರಿ ಯಲ್ಲಿ ಲಕ್ಷ್ಮಣನನ್ನು ಕಂಡು, ಅವನ ತಲೆ ತಿರುಗಿತು. ಮೋಸವಾಗು ವುದು ನಿಶ್ಚಯವಲ್ಲವೆ? ಲಕ್ಷ್ಮಣನನ್ನು ಜತೆಯಲ್ಲಿಟ್ಟು, ಅಲ್ಲಿಂದಲೆ ಅವ ಸರವಾಗಿ ಮರಳುತ್ತ ಎಲ್ಲವನ್ನೂ ವಿವರಿಸಿದನು. ಲಕ್ಷ್ಮಣನೂ ಬೊಟ್ಟನ್ನು ಕಟಿ ಕೊಂಡು ನಾನಾ ವಿಧ ಭಾವಿಸಿ ಬೆದರಿದನು, ಅಂತೂ ಮನೆಗೆ ಮರಳಿದರು. ರಾಮನು ಮನೆಯೊಳಕ್ಕೆ ಹಾರಿದನು. ( ಸೀತೆಯಿಲ್ಲ! ಹಾ! ಏನಾಯಿತು?' ಎಂದನು. ಮಾತೆತ್ತದೆ ಅತ್ತುಕೊಂಡನು. ಲಕ್ಷ್ಮಣ ನನು ಜರೆದನು, ಫಲವೇನು? ಇಬ್ಬರೂ ಅಶಿತ ಸೀತೆಯನ್ನು ಹುಡು ಕುತ್ತ ನಡೆದರು. ಸೀತೆಯಿಲ್ಲದೆ ಸೀತಾರಾಮನು ಎಂತೊಪ್ಪುವನು?

ಘನಮಹೋತ್ಕಟ ಧಾರೆಯಿಲ್ಲದೆ

ವನ ಮದಗ್ನಿಪವುಂಟೆ? ತೀಕ್ಷಣ

ವಿನುತ ಧೀಮಿತಿಯಿಲ್ಲ ದಿನನುಂಟೇ ಜಗತ್ತಿನಲಿ? |

ವನಜವಿಲ್ಲದ ಕೊಳನು, ವರವಾ

ಹಿನಿಗಳಿಲ್ಲದ ವಾರ್ಧಿ, ಸೀತಾ

ವನಿತೆಯಿಲ್ಲದ ರಾಮನುಂಟೇ ಭೂಮಿಯೊಳಗೆಂದ,

ಕುಟೀರವು ಇದ್ದಂತೆಯೆ ಉಳಿಯಿತು. ಧನುರ್ಧಾರಿಗಳಿಬ್ಬರೂ ಹೊರಟರು, ಆಗ ರಾಮನು;