ಪುಟ:Siitaa-Raama.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

49

ಕಳಹಂಸಾಲಸಯಾನೆಯಂ ಮೃಗಮದಿಾಮೋದಾಸ್ಯ ನಿಶ್ವಾ ಸೆಯಂ

ತಳಿರೇ, ತಾವರೆಯೇ, ಮದಾಳಿಕುಲಮೇ, ಕನ್ನೈದಿಲೇ, ಮತ್ತ.ಕೆಕಿಳಮೇ,

ಕಂಡಿರೆ ಪಲ್ಲವಧರೆಯನಂಭೋಜಾಸ್ಯೆಯಂ ಭಂಗಕುಂ.

ತಳೆಯಂ ಕೈರವನೇತ್ರೆಯಂ ಪಿಕರವಪ್ರಖ್ಯಾತೆಯಲ್ಲಿ ಸೀತೆಯಂ?

ಎಂದು ಹಂಬಲಿಸುತ್ತ ಭ್ರಮೆಗೊಂಡು ವಿಚಾರಿಸುತ್ತ ಮುನ್ನಡೆದನು. ಲಕ್ಷ್ಮಣನು ಅಣ್ಣನನ್ನು ಸೈರಿಸು- ಸೈರಿಸನ್ನುತ್ತಲೂ, ಅವನೊಡನೆ ತಾನೂ ಅಳುತ್ತ ಅವನಿಗಧಾರನಾಗಿ ಸಂಗಡ ಬಂದನು, ಅವರು ಎಷ್ಟು ವನಾಂತರಗಳನ್ನು ತಿರುಗಿದರು ! ಕೊನೆಗೆ ರೆಕ್ಕೆಹರಿದ ಜಟಾಯುವು ಮೇಲುಸಿರಿನಿಂದ ಹೇಳಿದ ವೃತ್ತಾಂತವನ್ನು ಕೇಳಿದರು. ಅವನು ಕೂಡು ವಷ್ಟು ವಿವರಿಸಿ ಮೃತನಾಗಲು, ಇವರಿಬ್ಬರೂ ಪರವು ಉಪಕಾರಿಯಾದ ಅವನನ್ನು ದಹಿಸಿ, ನದೀಜಲದಲ್ಲಿ ತರ್ಪಣವನ್ನು ಕೊಟ್ಟರು. ರಾಮ ಲಕ್ಷ್ಮಣರು ಉಪಕಾರಿಯನ್ನು ಹೇಗೆ ಸನ್ಮಾನಿಸಿದರು ! ಜಟಾಯುವು ಯಾವನೋ, ಎಂತಹ ! ಆದರೂ ಇಂತಹ ಲೋಕವಿಖ್ಯಾತರಾದವರು ಅವನ ಉತ್ತರಕ್ರಿಯೆಯನ್ನು ಮಾಡಿದುದು ಲೋಕಾನುಸರಣೆಗೆ ಪಾತ್ರನಲ್ಲವೆ? * ಸೀತೆಯನ್ನು ಒಯ್ಯು ದಕ್ಕೆ ಅವನನ್ನು ದಂಡಿಸುತಿದ್ದೆ ನು ಮಾತ್ರ; ಆದರೆ ಎಂದಿಗೆ ರಾವಣನು ಸಾಮಾನ್ಯವಾದ ಈ ಧರ್ಮಾತ್ಮನನ್ನು ಕೊಂದನೊ, ಅಂದಿಗೆ ಅವನಿರುವುದೇ ಭೂಮಿಗೆ ಭಾರವು ಅವನನ್ನು ಕೊಂದೇ ಸೀತೆ ಯನ್ನು ತರುವೆನು' ಎಂದು ಅಲ್ಲೇ, ತರ್ಪಣದ ನೀರನ್ನು ಕೈಯಲ್ಲಿ ಹಿಡಿದೇ, ರಾಮನು ಪ್ರತಿಜ್ಞೆ ಮಾಡಿದನು. ಇನ್ನು ಸೀತೆಯಿಲ್ಲದ ಆ ಕುಟೀರದ ಕಡೆಗೆ ಮರಳುವುದೆ ? ಸಂಜೆ ಯಾಗಲು, ಅಲ್ಲಿದ್ದ ಆದೊಂದು ವಟವೃಕ್ಷದ ನೆರಳಲ್ಲಿ ಅವರಿಬ್ಬರೂ ಪವಡಿಸಿ ದರು. ಸೀತಾಶೋಕದಿಂದಲೂ, ಅಪಮಾನದಿಂದಲೂ ಒಂದನೆ ನಿದ್ದೆಯ ಹದಾಯಿತು, ಚಿಂತಾಕ್ರಾಂತನಾದ ರಾಮನು “ ಯಾವನು ತನ್ನೊಬ್ಬಳೇ ಭಾರ್ಯೆಯನ್ನು ಕಾಪಾಡಲಾರದ ಹೋದನೋ ಅಂತಹನು ಕೋಟಿ ಕೋಟಿ