ಪುಟ:Siitaa-Raama.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

ಪ್ರಜೆಗಳನ್ನು ಹೇಗೆ ಪಾಲಿಸುವನು ? ರಾಕ್ಷಸರು ಇದೇ ರೀತಿಯಾಗಿ ಎಷ್ಟು ಕೋಟಿ ಪರಸ್ತ್ರೀಯರನ್ನು ಕದ್ದೊಯ್ದು ಎಷ್ಟು ಮನೆಗಳನ್ನು ಸ್ಮಶಾನಗಳ ನ್ನಾಗಿ ಮಾಡಿರುವರೋ ತಿಳಿಯದು, ಪರಸ್ತ್ರೀಯರನ್ನು ಬಯಸಿದವನಿಂದ ಅಖಂಡವಾದ ಪ್ರಾಯಶ್ಚಿತ್ತವನ್ನು ಮಾಡಿಸುವುದೇ ರಾಜರ ಕರ್ತವ್ಯವು ಆದರಿಂದ ಇದೇ ಇನ್ನು ನನ್ನ ಕಾರ್ಯೊದ್ದೇಶವು! ಇಂತಹ ಕಾರ್ಯೋ ದೇಶದ ಅರಿವನ್ನು ನನ್ನಲ್ಲಿ ಹುಟ್ಟಿಸಿದ ಕೈಕಯಾಮಾತೆಯವರಿಗೆ ಸಾಷ್ಟಾಂಗ ಸಮಸ್ತಾರವು!' ಎಂದು ಲಕ್ಷ್ಮಣನಿಗೆ ಹೇಳಿದನು. ಲಕ್ಷ್ಮಣನು ' ಅಣ್ಣಾ, ತಮ್ಮಂತಹ ವೀರನು ಈ ಜಗತ್ತಿನಲ್ಲಿ ಇನಾ ರಿರುವನು ? ಹಾಗಿದ್ದರೂ ಸುಮ್ಮನೆ ನಿಂದಿಸಿಕೊಳ್ಳುವುದು ವಿಹಿತವಲ್ಲ. ಅಯೋಧ್ಯಾ ರಾಜ್ಯವೊಂದೇಕೆ, ಇಡೀ ಜಗತ್ತನ್ನು ಪರಿಪಾಲಿಸಲು ತಾವು ಸಮರ್ಥರು. ದುಃಖ ಚಿಂತೆಗಳಿಂದ ಫಲವಿಲ್ಲ; ಅದೆಲ್ಲವೂ ಹೇಡಿಗಳ ಉದ್ಯೋಗವು, ಸ್ವಪೌರುಷದ ಮೇಲೆಯೇ ನಿರ್ಭರರಾಗಿ ಪ್ರತೀಕಾರವನ್ನು ಮಾಡುವುದು ತಮ್ಮಂತಹ ಮಹಾತ್ಮರ ಕರ್ತವ್ಯಲಕ್ಷಣವು. ಆದುದರಿಂದ ಬೆಳಕು ಹರಿಯುತ್ತಲೆ, ರಾವಣನ ನಿವಾಸದ ಕಡೆಗೆ ನಡೆಯೋಣ, ಅನಂತರ ಅವನನ್ನು ಕೊಂದೇ ಸೀತಾಮಾತೆಯನ್ನು ಊರಿಗೆ ಕರೆದುಕೊಂಡು ಮರಳು ವುದು ಸಹಜವಲ್ಲವೆ?' ಎಂದು ಬಿನ್ನಯಿಸಿದನು, ಲಕ್ಷ್ಮಣನ ಮಾತುಗಳು ರಾಮನಲ್ಲಿ ಧೈರ್ಯವನ್ನೂ ಶಾಂತಿಯನ್ನೂ ಉಂಟುಮಾಡಿದುವು. ಉಳಿದ ರಾತ್ರಿಯನ್ನು ಇಂತಹ ಮಾತುಕಥೆಯಲ್ಲಿಯೇ ಕಳೆದು ಬೆಳಗಿನ ಜಾವದಲ್ಲಿ ಮುನ್ನಡೆದರು. ಅಲ್ಲಿ ಬಾರಿಗೆ ಅಡ್ಡವಾಗಿ ಕಬಂಧನೊಬ್ಬನು ನಿಂತಿದ್ದನು, ಲಕ್ಷ್ಮಣನು ಅವನನ್ನು ತೊರೆಯಲ್ಲಿ ಕೊಂದನು. ಅವನು ಸಾಯುವಾಗ 'ರಾಜಪುತರೆ! ನಾನು ನಿಜವಾಗಿ ರಾಕ್ಷಸನಲ್ಲ! ಇದು ಪಾಪದ ಫಲವು. ನಾನು ಮಡಿವಂತೆ ನೀವು ಮಾಡಿದುದೇ ಉಪಕಾರ, ಸುಗ್ರೀವನೆಂಬ ವಾನರರಾಜನ ಸಹಾಯ ದಿಂದ ರಾವಣನನ್ನು ಗೆಲ್ಲುವುದು ಸುಲಭ, ಅವನು ಋಷ್ಯಮೂಕ ಪರ್ವತದಲ್ಲಿರುವನು' ಎಂದು ತಿಳುಹಿದನು. ರಾಮಲಕ್ಷ್ಮಣರು ಇದೂ ಒಂದು ವಿಚಿತ್ರವೆಂದು ಆ ಪರ್ವತದ ಕಡೆಗೆ ನಡೆದರು, ಅಲ್ಲಿಂದ ಮುಂದೆ ಎಷ್ಟು ವನಗಳನ್ನು ದಾಟಬೇಕಾಯಿತು!