ಪುಟ:Siitaa-Raama.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

51


ಅಲ್ಲೇ ಶಬರಿಯ ಆಶ್ರಮ, ತಾಪಸಿಯಾದ ಇವಳು ಶ್ರೀರಾಮನು ಬರುವುದನ್ನು ಹೇಗೆ ತಿಳಿದು, ಅಂತಹ ದಿವ್ಯಗುಣಶಾಲಿಯನ್ನು ಉಪಚರಿ ಸಬೇಕೆಂದು ಅವನು ಬರುವ ದಾರಿಯನ್ನು ಇದಿರುನೋಡುತ್ತಲಿದ್ದಳು. ಇವರು ಅತ್ತ ಬರುತ್ತಲೆ, ತನ್ನ ಆಶ್ರಮದ ಎಲೆಮನೆಗೆ ಕರೆದೊಯ್ದು ಅವರನ್ನು ಹಣ್ಣು ಹಂಪಲುಗಳಿಂದ ಸತ್ಕರಿಸಿದಳು, ಅವಳ ನಿಷ್ಕಪಟ ಭಕ್ತಿಗೆ ಇವರು ಮೆಚ್ಚಿ, ಅವಳನ್ನು ಹರ್ಷಗೊಳಿಸಿದರು. ಅವಳಾದರೂ, ಸೀತಾಪಹಾರದ ವಿಷಯವನ್ನು ತಿಳಿದುಕೊಂಡು, ಕಬಂಧನೆಂದಂತೆ ವಾನ ರರಾಜನ ಸಹಾಯದಿಂದ ಸೀತೆಯು ಇವರಿಗೆ ಪುನಃ ದೊರೆವಳೆಂದಳು. ಕೊನೆಗೆ ರಾಮಲಕ್ಷ್ಮಣರು ಮುನ್ನಡೆದರು, ಅಲ್ಲಿಯ ಮತಂಗ ಮುನಿಯ ಆಶ್ರಮವು, ಸವಿಾಪದಲ್ಲಿಯೇ ಪಂಪಾಸರೋವರವು, ಅದರ ಇದಿರಿನಲ್ಲಿಯೇ ಋಷ್ಯಮೂಕ ಪರ್ವತವು. ಅದರ ಮೇಲೆಲ್ಲ ಕಪಿಧ್ವಜರಾದ ವಾನರರು, ಆ ನವೀನ ದೃಶ್ಯವನ್ನು ನೋಡುತ್ತ, ತಮ್ಮ ವನವಾಸದ ಕುಟೀರದ ನೆನಪು ಉಂಟಾಗಲು, ರಾಮಲಕ್ಷ್ಮಣರು ತಮ್ಮಲ್ಲಿದ್ದ ದುಃಖ ವನ್ನು ಮರೆತರೂ, ರಾಮನು ' ಹಾ, ಸೀತೆ !' ಎಂದನು; ಲಕ್ಷ್ಮಣನು, * ಹಾ, ಸೀತಾಮಾತೆ!' ಎಂದು ನಿಟ್ಟುಸುರಿಟ್ಟನು, ರಾವಣನೇನು ಮಾಡಿದನು ? ಲಂಕೆಗೆ ತೆರಳಿದನು. ಯಾರೂ ತಡೆಯದಂತೆ, ಎಲ್ಲರ ನಿವಾಸಗಳಿಂದ ಕೊಂಚ ದೂರವಾಗಿಯು ವಿಮಾನವನ್ನು ನಡೆಸಿದನು. ಲಂಕೆಯನ್ನು ತಲಪಿದನು. ಅವನ ಆನಂದವು ಉಕ್ಕಿ ಬರುತ್ತಿದ್ದಿತು. ತನ್ನ ಕೆಯ್ದ ಮೂಗಿನ ಎರಡೂ ಸೊಳ್ಳೆಗಳಿಂದಲೆ ಶೂರ್ಪನಖೆಯು ಸೀತೆಯನ್ನು ನೋಡಿದಳೋ ಎಂಬಂತೆ ಅವಳನ್ನು ಕಾಣು ತಲೆ ' ಯಿಂ ಮ್ಹಳೆಂ ಹಂ ಎಳುಂ' ಎಂದು ಅಣ್ಣನಿಗೆ ಹೇಳಿದಳು. ಅಣ್ಣನು ಅವಳನ್ನು ಬಹಳವಾಗಿ ಕೊಂಡಾಡಿದನು, ಪಾಪಾತ್ಮರಿಗೆ ಸಹಾಯ ಮಾಡಿದ ಪಾಪಿಗಳನ್ನೆ, ಅವರು ಕೊಂಡಾಡುವರು, ಸೀತೆಯನ್ನು ಅಶೋಕ ವನದಲ್ಲಿ ರಾಕ್ಷಸಿಯರ ಕಾವಲಿನಲ್ಲಿ ಇರಿಸಲಾಯಿತು. ಕಾಡಾನೆಯನ್ನು ಹಿಡಿದು ಕೆಲದಿನ ಸುಮ್ಮನೆ ಇರಿಸಿ ಕೊನೆಗೆ ಮೆಲ್ಲನೆ ಸಾಧುಮಾಡುವಂತೆ, ಕೆಲದಿನ ರಾಕ್ಷಸಿಯರ ಮೂಲಕ ಅವಳ ಮನಸ್ಸನ್ನು ತನ್ನ ಕಡೆಗೆ ಎಂತೂ ಸೆಳೆದುಕೊಳ್ಳುವೆನೆಂದು ಅವನು ಬಗೆದನು, ಅವಳನ್ನು ಸಾಮ್ರಾಜ್ಯಂತ