ಪುಟ:Siitaa-Raama.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

53

ಕಂಡು ಉಪಚರಿಸಿ, ಇವರು ಯಾರು ಏತಕ್ಕೆ ಅತ್ತ ಬಂದವರು ಎಂಬ ದನ್ನೆಲ್ಲ ತಿಳಿದುಕೊಂಡನು ಇವರಲ್ಲೂ ಹನುಮಂತನ ವಿಷಯವಾಗಿ ಕುತೂಹಲ ಉಂಟಾಯಿತು. ಇವರಿಗೆ ಅವನು ತನ್ನ ಮತ್ತೆಲ್ಲ ವಾನರ ಮುಖ್ಯರ ಪರಿಚಯ ಮಾಡಿಕೊಡಲು ಒಪ್ಪಿದನು, ಸುಗ್ರೀವರಾಜನಿಂದ ಇವರ ಉದ್ದೇಶವು ನೆರವೇರಬೇಕಾಗಿರುವ ಇವರ ಅಭಿಪ್ರಾಯವನ್ನು ಹನುಮನು ಹಿಂತಿರುಗಿ ರಾಜನಿಗೆ ತಿಳಿಸಲು, ಮೆಲ್ಲಮೆಲ್ಲನೆ ಸುಗ್ರೀವನು ಅವರಿದ್ದ ಕಡೆಗೇ ನಡೆದು, ವಿನಯದಿಂದ ಅವರನ್ನು ವಂದಿಸಿ ತನ್ನಲ್ಲಿಗೆ ತನ್ನೊಡನೆ ಕರೆದುಕೊಂಡು ಮರಳಿದನು, ಆಸನಗಳಲ್ಲಿ ಇವರನ್ನು ಕುಳ್ಳಿರಿಸಿ ಯೋಗಕ್ಷೇಮವನ್ನು ವಿಚಾರಿಸಿದನು. ರಾಮನು ತನ್ನ ವೃತ್ತಾಂತ ನನ್ನೆಲ್ಲ ತಿಳುಹಲು, " ರಘುನಂದನನೆ! ನಿಮ್ಮ ದರ್ಶನಲಾಭದಿಂದ ನಾನು ಎಂದೂ ಕಾಣದ ಸುಖವನ್ನು ಇಂದು ಅನುಭವಿಸಿದಂತಾಗಿದೆ. ನಿಮ್ಮಿಂದಲೆ ನನ್ನ ದುಃಖವೂ ನಿವಾರಣೆಯಾಗುವುದೆಂದು ನಾನು ನಂಬಿರುವೆನು, ನೀವು ಹೇಗೆ ಸತೀವಿಯೋಗದಿಂದ ಶೋಕವನ್ನು ಅನುಭವಿಸುತ್ತಿರುವಿರೋ, ಅದರಂತೆ ನಾನೂ ಸವಿಯೋಗದಿಂದ ಬೆಂದಿರುವೆನು, ನಮ್ಮಿಬ್ಬರ ಮನೋವ್ಯಾಕುಲವು ಒಂದೇ ಪ್ರಕಾರದ್ದಾಗಿದೆ. ನಮ್ಮಣ್ಣನಾದ ವಾಲಿ ಎಂಬವನು ಅಸಾಮಾನ್ಯವಾದ ಬಾಹುಬಲವುಳ್ಳ ಪರಾಕ್ರಮಶಾಲಿಯು, ಆತನು ನನ್ನನ್ನು ರಾಜ್ಯದಿಂದ ಹೊರಡಿಸಿರುವನು; ನನ್ನ ಪತ್ನಿಯನ್ನು ಬಲಪೂರ್ವಕವಾಗಿ ಸೆಳೆದೊಯ್ದು ತನ್ನ ಅಂತಃಪುರದಲ್ಲಿ ಇರಿಸಿರುವನು!? ಎಂದು ತಲೆಬಾಗಿ ಕಣ್ಣೀರು ಮಿಡಿದನು.

ಅಣ್ಣ ತಮ್ಮಂದಿರೊಳಗೆ ಹಗೆತನವೆಂಬುದು ಎಂದ ಇರಬಹುದಾಗಿ ರಾಮನು ಎಣಿಸಿರಲಿಲ್ಲ, ಅದು ಅಸ್ವಾಭಾವಿಕವು, ಅದಕ್ಕಾಗಿ “ ನಿಮ್ಮ ಅಣ್ಣನಿಗೂ ನಿನಗೂ ಈ ರೀತಿಯಾಗಿ ಹಗೆ ವಿತರಿ೦ದ ಉ೦ಟಾಯಿತು?' ಎಂದು ಕೇಳಿದನು. ಅದಕ್ಕಾಸುಗ್ರೀವನು-'ಮಹಾಶಯ! ನಮ್ಮ ತಂದೆಯು ದಿವಂಗತನಾದ ಬಳಿಕ, ನನ್ನ ಅಣ್ಣನಾದ ವಾಲಿಯೇ ರಾಜ್ಯಾಧಿಕಾರಿ ಯಾದನು. ನಾನು ಆಳಿನಂತೆ ಅವನ ಸೇವೆಯನ್ನು ಮಾಡುತ್ತ ತೃಪ್ತಿ ಹೊಂದಿದ್ದೆನು, ಇಂತಿರಲು, ಒಂದು ದಿನ, ಮಾಯಾವಿಯಾದ ದಾನವ ನೊಬ್ಬನು ಕಿಂಧೆಗೆ ಬಂದು, ಅವನೊಡನೆ ಯುದ್ಧವನ್ನಾರಂಭಿಸಿದನು.