ಪುಟ:Siitaa-Raama.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

54

ಅಣ್ಣನೊಡನೆ ನಾನೂ ಯುದ್ಧಕ್ಕೆ ಹೊರಟುದನ್ನು ನೋಡಿ ಆ ಮಾಯಾ ವಿಯು ಬೆದರಿ ಒಂದು ಗುಹೆಯನ್ನು ಹೊಕ್ಕನು, ಅಣ್ಣ ನು ಅವನ ಹಿಂದೆಯೆ ಆ ಗುಹೆಯನ್ನು ನುಗ್ಗಿ, ತಾನು ಬರುವ ವರೆಗೆ ನಾನು ಆ ಗುಹೆಯ ಬಾಗಿಲಲ್ಲೇ ಇರಬೇಕಾಗಿ ಅಪ್ಪಣೆಕೊಟ್ಟು, ಮಾಯಾವಿಯನ್ನು ಹಿಂಬಾಲಿಸಿ ದನು. ಎಷ್ಟು ದಿನಗಳಾದರೂ ಅಣ್ಣನು ಮರಳಲಿಲ್ಲ; ಅವನು ಮಡಿದಿರು ವನೆಂದು ನಾನು ನಂಬಿ, ಆ ದಾನವನು ಇನ್ನೆಲ್ಲಿ ಹೊರಕ್ಕೆ ಬಂದು ನಮ್ಮನ್ನು ಪೀಡಿಸುವನೊ ಎಂದು ಭಯಪಟ್ಟು, ಆ ಗುಹಾದ್ವಾರವನ್ನು ದೊಡ್ಡದೊಂದು ಬಂಡೆಕಲ್ಲಿನಿಂದ ಮುಚ್ಚಿ ಚೈನು, ನಾನು ಈ ಊರಿಗೆ ಮರಳಲು, ಮಂತ್ರಿಗಳೂ ಪ್ರಜೆಗಳೂ ನನ್ನನ್ನೆ ಆರಸೆಂದು ಅಭಿಷೇಕವನ್ನು ಮಾಡಿದರು. ಅಂದಿನಿಂದ ನಾನೇ ರಾಜ್ಯವನ್ನಾಳುತ್ತಿದ್ದೆನು. ಅನೇಕ ದಿನಗಳು ಕಳೆದ ಬಳಿಕ, ಅಣ್ಣನು ಗುಹೆಯ ಹೊರಕ್ಕೆ ಬರಲು ಯತ್ನಿಸಿದನು. ಅಡ್ಡವಾಗಿ ಬಂಡೆಯು ಇದ್ದು ದನ್ನು ಕಂಡು, ಬೇರೆಯೆಣಿಸಿ, ಅದನ್ನು ಅವನು ಕಿತ್ತು ಬಿಸುಟು, ಊರಿಗೆ ಬಂದನು. ನಾನು ಅವನ ಕಾಲು ಹಿಡಿದು ಬೇಡಿಕೊಂಡು ಎಲ್ಲವನ್ನೂ ಅರಿಕೆ ಮಾಡಿಕೊಂಡೆನಾದರೂ, ಅವನು ಒಂದನ್ನೂ ನಂಬದೆ, ನಾನು ರಾಜ್ಯಾಭಿ ಲಾಷೆಯಿಂದ ಹಾಗೆ ಮಾಡಿದ್ದನೆಂದು ಭಾವಿಸಿ, ನನ್ನನ್ನು ಕೊಲ್ಲಲು ಬಗೆದನು. ಆಗ ನಾನು ಪ್ರಾಣಭಯದಿಂದ ಈ ಪರ್ವತಕ್ಕೆ ಪರಿಜನರೊಡನೆ ಓಡಿ ಬಂದೆನು. ಅವನು ಮತಂಗಮುನಿಗೆ ಭಯಪಡುವನಾದುದರಿಂದ ಇಲ್ಲಿ ನಾನು ಸುರಕ್ಷಿತವಾಗಿರುವೆನು. ವಾಲಿಯು ದುಂದುಭಿ ಎಂಬೊಬ್ಬ ರಾಕ್ಷಸ ನನ್ನು ಕೊಂದಾಗ, ಅವನ ಶವವನ್ನು ಅಲ್ಲಿಂದ ಈ ಬೆಟ್ಟದ ತನಕವೂ ಎಳೆದು ತರಲು, ದಾರಿಯಲ್ಲಿ ಮತಂಗಋಷಿಯ ಆಶ್ರಮದಲೆಲ್ಲ ಆ ಹೆಣದ ಗಾಯಗಳಿಂದ ನೆತ್ತರು ಬಳಿದಂತಾಯಿತು, ತನ್ನ ಆಶ್ರಮವು ವಾಲಿಯ. ದೆಸೆಯಿಂದ ಮಲಿನವಾಯಿತೆಂದು ಋಷಿಯು ಅವನ ಮೇಲೆ ಕೆರಳಿರುವನು. ಅದನ್ನು ತಿಳಿದು ಇಲ್ಲಿಗೆ ಅವನು ಬರುವಂತಿಲ್ಲ. ಇಷ್ಟೇ ನನ್ನ ದುಃಖ ಕಾಹಿನಿಯು, ಇನ್ನೊಂದಿಗೆ ನಾನು ನಿರ್ಭಯವಾಗಿರಬಹುದೊ, ಎಂದಿಗೆ ನನ್ನ ಸತಿಯನ್ನು ನಾನು ಮರಳಿ ಪಡೆವೆನೊ ತಿಳಿಯದು, ನಿಮ್ಮ ಸಹಾಯ ವಾದರೆ ಎಲ್ಲವೂ ಸಾಧ್ಯವಾಗಬಹುದು!' ಎಂದು ಬಿನ್ನವಿಸಿದನು.