ಪುಟ:Siitaa-Raama.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________


5೫

ತನ್ನ ಸ್ಥಿತಿಯನ್ನೂ ಸುಗ್ರೀವನ ಸ್ಥಿತಿಯನ್ನೂ ಹೋಲಿಸಿಕೊಂಡು, ರಾಮನು, 1 ಯಾವನು ಸ್ತ್ರೀಯರ ಧರ್ಮದ ಮೇಲೆ ಅತ್ಯಾಚಾರವನ್ನು ಮಾಡುವನೋ ಅಂತಹವನ್ನು ಮುರಿದಿಕ್ಕುವುದೇ ನನ್ನ ಧರ್ಮವು. ಅದ ಕಾಗಿಯೇ ನಾನು ವಾಲಿಯನ್ನು ಕೊಂದಿಕ್ಕುವೆನು, ನೀನೆ ನಿಶ್ಚಿಂತನಾಗಿ ಕಿಟ್ಟಂಧಾಧಿಪತಿಯಾಗುವಂತೆ ಮಾಡುವೆನು' ಎಂದು ಭರವಸೆ ಕೊಟ್ಟನು. ಆಗ ಸುಗ್ರೀವನು ಕೃತಜ್ಞತೆಯಿಂದ ತಲೆಬಾಗಿ, ' ನಾನು ಈ ಜನ್ಮವೆಲ್ಲ ನಿಮಗೆ ದಾಸನಾಗುವೆನು; ನಿಮ್ಮ ಆಜ್ಞೆಯನ್ನು ಪಾಲಿಸುವುದೆ ನನ್ನ ಧರ್ಮವು' ಎಂದನು. ಇದಾದ ಬಳಿಕ ಇಬ್ಬರೂ ಅಗ್ನಿಸಾಕ್ಷಿಯಾಗಿ ತಮ್ಮ ಮಿತ್ರತ್ವದ ಪ್ರಮಾಣ ಮಾಡಿಕೊಂಡರು. ಆರ್ಯ ರಾಮನು ಈ ರೀತಿಯಾಗಿ ನಾನರರೊಡನೆ ತಾನಾಗಿ ಮಿತ್ರತ್ವವನ್ನು ಗಳಿಸಿಕೊಂಡ ಉದಾರ ಗುಣವನ್ನು ವಿವೇಕವುಳ್ಳ ಹನುಮಂತನು ಕಂಡು, ಆಗಲೆ ತಾನು ರಾಮದಾಸನಾದೆನೆಂದು ರಾಮನ ಕಾಲಿಗೆರಗಿ, ಅವನ ಬಳಿಯಲ್ಲಿ ಇರುವ ವನಾದನು.

ಸುಗ್ರೀವನು ಇನ್ನು ವಾಲಿಯನ್ನು ಯುದ್ಧಕ್ಕೆ ಕರೆಯುವುದೆಂದಾ ಯಿತು. ಅವರಿಬ್ಬರೂ ಕಾದಾಡುವಾಗ ರಾಮನು ದೂರದಿಂದ ಬಾಣವನ್ನು ಬಿಟ್ಟು ವಾಲಿಯನ್ನು ಕೊಲ್ಲುವುದೆಂದೂ ನಿಶ್ಚಯವಾಯಿತು. ಆದರೆ ರಾಮನ ಸಾಹಸವನ್ನು ಸುಗ್ರೀವನು ಅದು ವರೆಗೆ ಕಂಡವನಲ್ಲ; ವಾಲಿಯ ಪರಾಕ್ರಮವನ್ನು ಅವನು ಚೆನ್ನಾಗಿ ಬಲ್ಲನು; ಎಷ್ಟೋ ಸಲ ಅವನೊಡನೆ ಕಾದಾಡಿ ಮೈಮುರಿದುಕೊಂಡವನಷ್ಟೆ. ವಾಲಿಯನ್ನು ಯುದ್ಧಕ್ಕೆ ತಾನಾಗಿ ಕರೆಯಲು ಒಪ್ಪುವನೇ ? ಹೀಗೆಂದು ಸಮಯ ಹಾಳುಮಾಡಲಾಗುವುದೆ ? ರಾಮನು ಅಲ್ಲಿದ್ದ ಏಳು ತಾಲವೃಕ್ಷಗಳನ್ನು ತನ್ನ ಬಾಣಗಳಿ೦ದಲೆ ಕಡಿದು, ತನ್ನ ಪರಾಕ್ರಮವನ್ನು ಸುಗ್ರೀವನಿಗೆ ತೋರಿಸಿ ಕೊಟ್ಟನು. ಬಳಿಕ ವಾಲಿಯ ಸುಗ್ರೀವನೂ ಒಂದೇ ಆಕೃತಿಯವರೆಂದು ತಿಳಿದು, ನಾಲಿಗೆಂದ ಬಾಣವು ಸುಗ್ರೀವನನ್ನು ಕೊಲ್ಲದಂತ, ಸುಗ್ರೀವನನ್ನು ಬೇರೆ ಹೂಮಾಲೆ ಯಿಂದ ಗುರುತಿಸಿಕೊಂಡು ಯುದ್ದ ವಾಗಲೆಂದನು. ರಾಜದ್ವಾರದಲ್ಲಿ ನಿಂತು, ಸುಗ್ರೀವನು ಆರ್ಭಟೆಯಿಂದ ವಾಲಿಯನ್ನು ಕರೆಯಲು, ಅವನು ಯುದ್ಧಕ್ಕೆ ಸಿದ್ಧನಾದನು. ಆಗ ಬುದ್ದಿವಂತೆಯಾದ