ಪುಟ:Siitaa-Raama.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

59

ಮಾತುಗಳನ್ನು ಕುಲವಧುಗಳು ಆಡಲಾಗದು. ಕುಲೀನಸ್ತ್ರೀಯರ ಮಾತು ಗಳೇ ಇವು ? ವಂಶವೇ ಹಾಳಾಗುವ ಇಂತಹ ಮಾತುಗಳನ್ನು ಆಡಿ, ನಿಂದೆಗೂ ಪಾಪಕ್ಕೂ ಒಳಗಾಗದಿರಿ, ಶ್ರೀ ರಾಮಚಂದುನೆ ನನ್ನ ಹೃದಯ ದಲ್ಲಿ ಆರಾಮಗೊಂಡಿರುವಾಗ, ಸುಮ್ಮನೆ ತಂದೆಯಂತೆಯೂ ಅಥವಾ ಸೋದರನಂತೆಯೂ ಇರುವ ಇತರ ಯಾವ ಪುರುಷನ ಮಾತನ್ನೂ ನನ್ನೊಡನೆ ಎತ್ತದಿರಿ,

ತನಗೆ ಪತಿವ್ರತನಿಲ್ಲದ

ವನಿತೆ ಕುಲಸ್ತೀಯೆ ? ಭಿನ್ನಭಜನೆ, ಇಂತ|.

ಸ್ಪನುಚಿತವಂ ಹರಿವಂಶದ

ವನಿತೆಯೊಳ್ ನುಡಿಯಲಿಕ್ಯುಮೆ ನಿಮ್ಮನ್ನು ?!

ಎಂದು ಅವರಿಗೆ ಬುದ್ದಿ ಹೇಳುತಲಿರುವಳು. ರಾವಣನೇ ದಿ ವ್ಯಾಲಂಕಾರ ಗಳನಿಟ್ಟು ಅವಳಿಗೆ ಭವ್ಯವಾದ ಬಹುಮಾನಗಳನ್ನು ತಂದೊಪ್ಪಿಸುತಿರುವನು.

ಪಾದಗಳಿಗೆ ನೂಪುರ, ಸೊಂಟಕ್ಕೆ ರತ್ನಖಚಿತವಾದ ಮೇಖಲೆಯು, ತೋಳಿಗೆ ಪಟ್ಟೆಯು ಕಡಗ, ಕಪೋಲಗಳಿಗೆ ಪತ್ರಲೇಖೆ ಇಷ್ಟನ್ನೂ ನಿನಗೆ ಬಹುಮಾನವಾಗಿ ಕೊಡುವೆನು. ಆನೆಯ ಮೇಲೆ ಬೆಳ್ಕೊಡೆಯ ನೆರಳಲ್ಲಿ ಹಿಂದೆ ನೀನಿದ್ದವಳು, ಅಂತಃಪುರದಲ್ಲಿ ವಿಲಾಸಿನಿಯರ ನಡುವೆ ನೀನಿದ್ದವಳು, ಇಲ್ಲಿಯೂ ಅದೇ ವೈಭವ ತಳೆದು ನನ್ನ ಉದ್ಯಾನಗಳಲ್ಲಿ ನೀನು ಮೆರೆಯ ಬಹುದಲ್ಲವೇ ? ಮಹಾ ನದಿಗಳನ್ನೂ ಕುಲಾದ್ರಿಗಳನ್ನೂ ದಿವ್ಯ ಸರೋವರ ಗಳನ್ನೂ ನೀನು ನನ್ನ ಪುಷ್ಪಕ ವಿಮಾನವನ್ನೇರಿ ಅಡ್ಡಾಡಿ ವಿಹರಿಸಬಹು ದಲ್ಲವೆ ? ಕಾಡುಗಳಲ್ಲಿ ಒಂದೂ ಸುಖವಿಲ್ಲದೆ ಎಲ್ಲಿಂದೆತ್ತ ಸಂಚರಿಸಿ ಆ ರಾಮನೊಡನೆ ನೀನು ವಿರಾಮಹೊಂದುವುದುಂಟೆ ? ಕ್ರೀಡಾಮಂದಿರ ಗಳಲ್ಲಿದ್ದು ಸೌಖ್ಯವನ್ನು ಅನುಭವಿಸಬಾರದೆ ? ' ಎಂದು ನೂರಾರು ವಿಧವಾಗಿ ಅವಳನ್ನು ಮಾತಾಡಿಸಿದನು, ಆದರೆ ಆಕಾಶಕ್ಕೆ ಬಣ್ಣ ಬಳಿದವರುಂಟೆ ? ಸೀತೆಯು ಅತಿಯಾಗಿ ಸಿಟ್ಟಾದಳಾದರೂ ಮೊಗದಲ್ಲಿ ಸಿಡುಕನ್ನು ತೋರಿಸಿ. ಕೊಳ್ಳದೆ