ಪುಟ:Siitaa-Raama.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

61

೫. ಸುಂದರಕಾಂಡ

ಕಪಿಧ್ವಜರಾದ ವಾನರರಿಗೆ ಅಧಿರಾಜನಾಗಿ ಸುಗ್ರೀವನು, ವಾಲಿಯ ಮರಣಾನಂತರ ಬಹುಕಾಲದ ಸುಖವನ್ನು ಅನುಭವಿಸುತ್ತಿದ್ದನು, ವಾನರ ಜಾತಿಯವರೂ, ಭಲ್ಲೂ ಕರೂ, ಬರ್ಬರರಾದ ಅನಾರ್ಯಕುಲದವರು. ಆರ್ಯರಲ್ಲಿದ್ದಂತೆ ಏಕಪಕ್ಷೀವುತವೂ ವಿವೇಕವೂ ಇವರಲ್ಲಿರಲಿಲ್ಲ. ಆದರೆ, ಸ್ವಭಾವತಃ ಗುಡ್ಡ ಬೆಟ್ಟಗಳಲ್ಲಿ ಸ್ನೇಚ್ಚಾಚಾರಿಗಳಾಗಿದ್ದು, ಗೆಡ್ಡೆ ಗೆಣಸು ಹಣ್ಣು ಹಂಪಲುಗಳನ್ನು ತಿಂದು ಬದುಕುತ್ತಿದ್ದ ಕಾರಣ, ಇವರು ದೇಹದಲ್ಲಿ ಶಕ್ತಿ ಯುಳ್ಳವರೂ ಕಷ್ಟಗಳನ್ನು ಸಹಿಸಬಲ್ಲವರೂ ಆಗಿದ್ದರು. ಸುಗ್ರೀವನು ಪಟ್ಟಾಭಿಷಿಕ್ತನಾಗಿ, ರಾಮನಿಗೆ ತಾನು ಮಾಡಿಕೊಡಬೇಕಾದ ಕಾರ್ಯ ನಿರ್ವಾಹಕ್ಕೆ ಇನ್ನೂ ಮಳೆಗಾಲವಾದುದರಿಂದ, ವಿಷಯೋಪಭೋಗಗಳಿಗೇ ಮನಸ್ಸು ಕೊಟ್ಟು ಹಗಲೂ ರಾತ್ರಿ ನರ್ತನಾದಿಗಳಲ್ಲಿ ಮದ್ಯಪಾನ ವಿಲಾಸಗಳಲ್ಲಿಯೂ ಮಗ್ನನಾಗಿಯೇ ಇದ್ದನು, ಆದರೆ ದಿನೇ ದಿನೇ ರಾಮನಿ ಗಾಗಿ ತಾನು ವಹಿಸಿಕೊಂಡುದನ್ನು ಮರೆಯುತ್ತಾ ಬಂದನು, ಸಂಕಟ ಕಾಲದಲ್ಲಿ ಹರಕೆಹೊತ್ತುಕೊಳ್ಳುವುದೂ ಸುಖಕಾಲದಲ್ಲಿ ದೇವರನ್ನೆ ಮರೆ ವುದೂ ಸಾಮಾನ್ಯವಾಗಿ ನರರೆಲ್ಲರ ಮೂಢತನದ ಲಕ್ಷಣವು; ಎಂದ ಮೇಲೆ ವಾನರರ ಮಾತೇಕೆ ?

ವರ್ಷಾಕಾಲವು ಮುಗಿದೊಡನೆಯೇ, ಸುಗ್ರೀವನಿಗೆ ಆತನ ಕರ್ತವ್ಯ ವನ್ನು ಮಾಡಲು ರಾಮನು ನೆನಪು ಹುಟ್ಟಿಸಿದನು. ಅವನಿಗೆ ಅರಿವು ಹುಟ್ಟದು. ಅಮಲೇರಿದವನು ಮನೆ ಬಿಡನು; ಆಲಸ್ಯದಲ್ಲಿ ಇದ್ದು ಜಾಗೃತಿಯಿಲ್ಲದವ ನಾಗುವನು, ಜಡನಾಗುವನು. ಸುಗ್ರೀವನ ಸುದ್ದಿ ಇಲ್ಲ. ಇನ್ನೆಷ್ಟು ದಿನ. ಹೀಗಿರಬಹುದು ? ರಾಮಲಕ್ಷ್ಮಣರಿಬ್ಬರೂ ಕೃತಘ್ನನನ್ನು ತಿದ್ದುವುದಕ್ಕೆ ಮುಂದಾದರು. ಲಕ್ಷ್ಮಣನೆ ಮುಂದೊತ್ತಿ ಸುಗ್ರೀವನ ಸಭೆಗೆ ಬಂದನು, ಸುಗ್ರೀವನು ಕಾಣಸಿಗುವುದೇ ದುರ್ಲಭವಾಯಿತು. 'ಎಷ್ಟೆಂದರೂ ನಾವು ಇಟ್ಟ ಅರಸು; ಕಾಣಲು ಸಮಯವಿಲ್ಲವಂತೆ | ಬರುವನಾದರೆ ಬರಲಿ ಇಲ್ಲದಿದ್ದಲ್ಲಿ ನಾವು ಬೇರೆ ಉಪಾಯಮಾಡುವೆವು. ಇದು ಸುಗ್ರೀವನಿಗೆ