ಪುಟ:Siitaa-Raama.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

65

ತರುವಾಯ ಹನುಮಂತನನ್ನು ಆಶೀರ್ವದಿಸಿದಳು, " ರಾಮಚಂದ್ರನು ನನ್ನನ್ನು ಇಲ್ಲಿಂದ ಬೇಗನೇ ಒಯ್ಯಬೇಕೆಂದು ನನ್ನ ಪ್ರಾರ್ಥನೆ ಇದೆ. ವಿಳಂಬವಾದರೆ ನನ್ನ ಪ್ರಾಣಗಳು ಉಳಿಯವು ' ಎಂದು ಅವಳು ಅವನಿಗೆ ಹೇಳಿದಳು. ಕಿಕ್ಕಿಂಧೆಯಲ್ಲಿ ನಡೆದಿರುವ ಸರ್ವಸನ್ನಾಹದ ವೃತ್ತಾಂತವನ್ನೆಲ್ಲ ಹನುಮಂತನು ಅವಳಿಗೆ ಬಿನ್ನವಿಸಿದನು, ಕಪಿವರನೆ! ಬಂದಂತೆಯೇ ಗೋಪನವಾಗಿ ಇಲ್ಲಿಂದ ತೆರಳುವವನಾಗು, ನಿನಗೆ ದಾರಿಯಲ್ಲಿ ಯಾವು ದೊಂದು ಆತಂಕವೂ ಬಾರದಿರಲಿ, ನನ್ನ ಈ ಚೂಡಾಮಣಿಯನ್ನು ಆರ್ಯಪುತ್ತುನಿಗೆ ಒಪ್ಪಿಸು, ಆತನ ಚರಣದರ್ಶನದ ಆಸೆಯಿಂದಲೆ ನಾನು ಜೀವಹಿಡಿದಿರುವೆನೆಂದು ತಿಳುಹು' ಎಂದು ಆಶೀರ್ವದಿಸಿ ಕಳುಹಿ ಕೊಟ್ಟಳು.

ಹನುಮಂತನು ಅಲ್ಲಿಂದ ಹಿಂದಕ್ಕೆ ಹೊರಟನು. ಅಲ್ಲಿ, ಅವೆಷ್ಟು ಬಗೆಯ ಹಣ್ಣುಗಳು ! ಬಾಯಿ ಒಸರುತ್ತಿದೆ! ಹನುಮಂತನು ವನದೊಳಕ್ಕೆ ಹೊಕ್ಕನು. ಕೂಡಲೆ ರಾಕ್ಷಸರು ಅವನನ್ನು ಆಕ್ರಮಿಸಿದರು. ಅವರನ್ನು ಹನುಮಂತನು ಕೊಂದು, ತನಗೆ ಬೇಕಾದಷ್ಟು ಹಣ್ಣುಗಳನ್ನು ಕಿತ್ತು ತಿಂದನು. ಈ ವೃತ್ತಾಂತವನ್ನು ರಾವಣ ಪುತ್ರನಾದ ಅಕ್ಷಯನು ಭರದಿಂದ ಕೇಳಿ, ವನಕ್ಕೆ ಬಂದು, ಹನುಮಂತನನ್ನು ಸೆರೆಹಿಡಿಯಿಸ ತೊಡಗಿದನು. ಅವನನ್ನು ಹನುಮಂತನು ಕ್ಷಣದೊಳಗೆ ಕೊಂದನು. ನಂತರ ವೀರಶ್ರೇಷ್ಟ ನಾದ ರಾವಣಪತ, ಇಂದ್ರಜಿತುವು ಹನುಮಂತನನು ನಾಗಪಾಶಗಳಿಂದ ಬಿಗಿದು ತಂದೆಯಿರುವಲ್ಲಿಗೆ ಕೊಂಡೊಯ್ದನು. ಹನುಮಂತನು ತನ್ನ ಇಂಗಿತವನ್ನು ಅವರಾರಿಗೂ ತಿಳಿಯಗೊಡದಂತೆ, ಸತ್ತವನಂತೆ ಅಲ್ಲಿ ಬಿದ್ದು ಕೊಂಡನು. ರಾವಣನು ಅವನಿಂದಾದ ಹಾವಳಿಯನ್ನು ಕೇಳಿ, ಅವನನ್ನು ಕೂಡಲೆ ಸುಟ್ಟು ಹಾಕುವಂತೆ ಸೇವಕರಿಗೆ ಆಜ್ಞಾಪಿಸಿದನು, ಅವರು ಅವನ ಬಾಲಕ್ಕೆ ಚಿಂದಿಗಳನ್ನು ಸುತ್ತಿ, ಎಣ್ಣೆ ಹೊಯಿದು, ಬೆಂಕಿ ಹೊತ್ತಿ ಸಿದರು.

ಬಾಲಕ್ಕೆ ಬೆಂಕಿ ತಗಳಿದೊಡನೆಯೇ, ಹನುಮಂತನು ಈ ಮನೆಆ ಮನೆ ಎಂದೆನ್ನದೆ ಹಾರುತ್ತಲಿದ್ದು, ಭಯಂಕರವಾದೊಂದು ಅಗ್ನಿಯನ್ನು ಪುಜ್ಜಲಗೊಳಿಸಿದನು. ಸುಂದರವಾದ ಲಂಕಾಪುರವು ಭಸ್ಮವಾಯಿತು,