ಪುಟ:Siitaa-Raama.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

66

ಪರವಧವ್ಯಸನಿಗಳ ಸಂಗವು

ನರಕಭಾಜನವೆಂದು ನೆರೆ ಧಿ.

ಕ್ಕರಿಸಿ ದಶಕಂಧರನ ನಗರಾಂಗನೆ ವಿರಾಗದಲಿ |

ಪರಮಪ್ರಾಯಶ್ಚಿತ್ತ ಅಂಗೀಕರಿಸಿ ಹೊಗಳುದ್ಯೋಗಿಸಿದ ನಿ

ರ್ಭರದ ನಿಡುಗಿಚ್ಚಿನ ವೊಲಿರ್ದುದು ದಹನ ರಿಪುಪುರದ,

ಎಷ್ಟು ರಾಕ್ಷಸರು ಸತ್ತರೂ, ಸತ್ತವರೆ ಬಲ್ಲರು, ಆದರೆ ಅಶೋಕವನದ ಕಡೆಗೆ ಈ ಬೆಂಕಿಯು ಸುಳಿಯದುದು ಅದೊಂದು ಅದ್ಭುತ ವಿಷಯ, 'ಎಷ್ಟೇ ಬುದ್ಧಿವಂತನಿರಲಿ, ಮಹಾತ್ಮನಿರಲಿ,ರಾಮನು ವಿಚಾರವಿಲ್ಲದವನು; ಬಂದ ನಾನೇ ಸೀತೆಯನ್ನೀಗ ಎತ್ತಿಕೊಂಡು ಹೋದರೆ ಚೆನ್ನಾಗದೆ! ಅವನೇತಕ್ಕೆ ಹುಡುಕಿ ಬಾರೆಂದನು ? ಹಿಡಿದು ತಾರೆನ್ನಲಿಲ್ಲ ? ರಾವಣನನ್ನೆ ಕೆಲ್ಲ ಬೇಕಾದರೂ ನನ್ನಿಂದಾಗದೆ ? ಇನ್ನೂ ಕಷ್ಟಗಳನ್ನೇಕೆ ಕಟ್ಟಿಕೊಂಡಿರುವನು? ಅಥವಾ ಬಂದರೂ ಇನ್ನು ನಾನು ಕಂಡ ಲಂಕಾಪುರವನ್ನು ಅವನು ಕಾಣುವನೆ ? ಅಥವಾ ಅವನನ್ನು ವಿಚಾರಿಸದೆ ಬಂದ ನಾನೆ ಹೆಡ್ಡನು' ಎನ್ನುತ್ತ, ಹನುಮಂತನು ಬಾಲದ ಬೆಂಕಿಯನ್ನು ನಿಂದಿಸಿ, ತೊರೆಯಾಗಿ ಕಿಕ್ಕಿಂಧೆಗೆ ಮರಳಿದನು,

ದರೆ ಅತ್ತ ಲಂಕಾಪುರದಲ್ಲಿ:

ಪ್ರತಿಪಕ್ಷ ಮುಂಟಿ ಲಂಕಾ

ಪತಿಗಳುನಂ ರಾವಣಂಗಿದಿರ್ಚುನನ, ಮಹಾ!

ಸತಿ ಸೀತೆಯ ಶೋಕಾನಳ

ಹತಿಯಿಂ ಬೆಂದತ್ತು ಕೂಡ ಲಂಕಾನಗರಂ||


ಎಂದೇ ಲಂಕೆಯ ಜನರು ಬೊಬ್ಬಿಟ್ಟು ಬಾಯಿ ಬಾಯಿ ಬಡೆದುಕೊಳ್ಳು ತಿದ್ದರು,

ಕಿಂಧೆಯಲ್ಲಿ ಹನುಮಂತನನ್ನು ಕಂಡವರೆಲ್ಲ ವಿಸ್ಮಯ ಹೊಂದಿದರು! ಎಲ್ಲರ ಕೂಡ ಸೀತೆಯನ್ನು ಕುರಿತು ವೃತ್ತಾಂತವನ್ನು ಹೇಳುವುದೆ ಅವನಿಗೆ ಉದ್ಯೋಗವಾಯಿತು. ರಾಮಲಕ್ಷ್ಮಣರು ಮನಸ್ಸಿನಲ್ಲಿ ಸ್ವಲ್ಪ ಮಾತ್ರ ತೃಪ್ತಿ ಹೊಂದಿದರು; ಅವರು ದುಃಖವನ್ನು ಸುಲಭವಾಗಿ ಬಿಡಲಾಪರೇ ?