ಪುಟ:Siitaa-Raama.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೭

ಸೀತಾಸ್ಕರಣೆಯಿಂದ ಅವರ ದುಃಖವು ಕಿಂಚಿತ್ತಾಗಿ ಹೆಚ್ಚಿತು, ಇನ್ನು ಲಂಕೆಗೆ ತಡಮಾಡದೆ ತರಳಬೇಕೆಂದಾಯಿತು. ( ಸಿದ್ಧರಾಗಿರಿ' ಎಂದು ಸುಗ್ರೀವನ ಅಪ್ಪಣೆಯು ವಾನರಸೈನ್ಯಕ್ಕೆ ಪಸರಿತು. ಕೋಟಿ ಕೋಟಿ ನಾನರರು ಹೊರಟರು.

ಆದರೆ ಸಾಗರವನ್ನು ದಾಟುವ ಬಗೆಯಾವುದು ? ವೃದ್ದನೂ ಬಹು ದರ್ಶಿಯೂ ಆದ ಜಾಂಬವಂತನು ' ನಮ್ಮೊಳಗೆ ನಳ ಎಂಬೊಬ್ಬ ಸೇನಾಪತಿ ಇರುವನಷ್ಟೆ, ಅವನು ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನಿಗೆ ಮಗ ನಾಗಿರುವನು. ತಂದೆಯಂತೆಯೇ ಇವನೂ ಯೋಗ್ಯನು, ಕಲ್ಲಿನ ಕೆಲಸ ದಲ್ಲಿ ಇವನಂತಹರು ಅತ್ಯಪೂರ್ವ, ಅದುಕಾರಣ ಸಾಗರವನ್ನು ದಾಟುವ ಸೇತುವನ್ನು ನಿರ್ಮಿಸುವ ಉದ್ಯೋಗವನ್ನು ಅವನಿಗೆ ಕೊಟ್ಟರೆ, ಅದು ಉತ್ತಮವಾಗಿ ಸಾಗುವುದಲ್ಲವೆ ?' ಎಂದು ವಿಜ್ಞಾಪಿಸಿಕೊಂಡನು. ಯಾವು ದೊಂದು ಜಲಪ್ರವಾಹವನ್ನು ತಡೆಗಟ್ಟುವುದಕ್ಕೂ, ನೀರಿನಲ್ಲಿ ಕಲ್ಲುಗಳನ್ನಿಟ್ಟು ಕಟ್ಟುವುದಕ್ಕೂ ನಳನೆ ಪ್ರವೀಣನೆಂದು ಹೆಸರ್ಗೊಂಡಿದ್ದನು. ಅವನು ತನ್ನ ಕೌಶಲವನ್ನು ಉಪಯೋಗಿಸಿ, ಕೆಲವೇ ದಿನಗಳೊಳಗೆ ಸೇತುವನ್ನು ನಿರ್ಮಿಸಿ ಕೊಟ್ಟನು. ಬಂಡೆಗಳನ್ನು ಒತ್ತಾಗಿ ಇಡಿಸಿ, ಜೋಡಿಸಿ ಅವುಗಳ ಮಧ್ಯೆ ಸಂದಿನಲ್ಲಿ ಮಳಲನ್ನು ತುಂಬಿ, ಸೇನೆಗಳು ನಡೆದು ಹೋಗುವಷ್ಟು ಉತ್ತಮ ಊಪಯೋಗಕ್ಕೆ ಬರುವಂತಹ ಸೇತುವನ್ನು ಕೆಲವೇ ದಿನಗಳೊಳಗೆ ಸಿದ್ದ ಮಾಡಿದನು. : ಧಾಮಲಕ್ಷ್ಮಣರು ಅದನ್ನು ಪರೀಕ್ಷಿಸಿ ಇನ್ನು ಸೇನೆಗಳು ಮುನ್ನಡೆಯಲೆಂದರು; ಆಗ

ಅರಸ ನಿಂದಿದಿರಿನಲಿ, ತಾರಕಿ

ತೊರೆಯವೊಲು, ಬಳುಸೇತುಸಾಗರ

ನೂರೆಯನುಗಿದುಬ್ಬಣದವೊಲು, ಆ ದಶಕುಲಾಧಿಪನ |

ಪುರದ ಪಥದವೊಲಾ, ದಶಾಸ್ಯನ

ಕರೆದು ತೋರುವ ಮೃತ್ಯು ನೀಡಿದ

ಕರದವೊಲು, ಕಳ್ಳ ಸದುದನುಪಮ ಸೇತು ಬಂಧನದ

ವಾನರ ಸೇನೆಯೆಲ್ಲವೂ ನಿಶಾಂತಕವಾಗಿ ಲಂಕೆಗೆ ತಲಪಿತು.